D K Shivkumar: 2 ವರ್ಷಗಳ ಬಳಿಕ ಮುಂದಿನ 8 ವರ್ಷವೂ ಡಿಕೆಶಿಯೇ ಕರ್ನಾಟಕದ ಸಿಎಂ!! ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ ಜ್ಯೋತಿಷಿ ಭವಿಷ್ಯ
After 2 years DK Shivakumar will be the Karnataka CM for 8 years
DK Shivakumar: ಕರ್ನಾಟಕದಲ್ಲಿ ಚುನಾವಣೆ(karnataka election) ಮುಗಿದು, ನೂತನ ಸರ್ಕಾರ(New Government) ರಚನೆಯಾದರೂ ಕೂಡ ರಾಜಕೀಯ ರಂಗದಲ್ಲಿ, ಅದೂ ಕೂಡ ಕಾಂಗ್ರೆಸ್(Congress) ಪಾಳಯದಲ್ಲಿ ದಿನೇ ದಿನೇ ಒಂದೊಂದು ಶಾಕಿಂಗ್ ನ್ಯೂಸ್ ಗಳು ಹೊರಬೀಳುತ್ತಿವೆ. ಮೊನ್ನೆ ತಾನೇ ನೂತನ ಸಚಿವ ಎಂ ಬಿ ಪಾಟೀಲ್(M B Patil) ಅವರು ಸಿದ್ದರಾಮಯ್ಯ(Siddaramaiah) ಅವರೇ ಮುಂದಿನ 5 ವರ್ಷಗಳ ಕಾಲ ಮುಖ್ಯಮಂತ್ರಿ ಆಗಿರುತ್ತಾರೆ ಎಂದು ಹೊಸ ಬಾಂಬ್ ಸಿಡಿಸಿದ್ದರು. ಆದರೀಗ ಈ ಬೆನ್ನಲ್ಲೇ ಇನ್ನು ಎರಡು ವರ್ಷಗಳ ಬಳಿಕ ಎಂಟು ವರ್ಷಗಳ ಕಾಲ ಡಿ.ಕೆ ಶಿವಕುಮಾರ್ ಸಿಎಂ ಆಗಿರುತ್ತಾರೆ ಎಂದು ಜ್ಯೋತಿಷಿ ಬಿಬಿ ಆರಾಧ್ಯ (BB Aradhya) ಭವಿಷ್ಯ ನುಡಿದು ಎಲ್ಲರೂ ಅಚ್ಚರಿಗೊಳಿಸಿದ್ದಾರೆ.
ಹೌದು, ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ(CM Siddaramaiah) ಅಧಿಕಾರ ವಹಿಸಿಕೊಂಡಿದ್ದರೂ, ಐದು ವರ್ಷಗಳ ಕಾಲ ಆಡಳಿತ ನಡೆಸುವುದಿಲ್ಲ. ಲೋಕಸಭಾ ಚುನಾವಣೆಯ ಬಳಿಕ ಉಪ ಮುಖ್ಯಮಂತ್ರಿಯಾಗಿರುವ ಡಿ.ಕೆ.ಶಿವಕುಮಾರ್(DCM DK Shivakumar) ಸಿಎಂ ಆಗಿ ಅಧಿಕಾರ ವಹಿಸಿಕೊಳ್ಳುತ್ತಾರೆ. ಈ ಬಗ್ಗೆ ಹೈಕಮಾಂಡ್ ವಲಯದಲ್ಲಿ ಈಗಾಗಲೇ ಮಾತುಕತೆ ನಡೆದಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಹೆಚ್ಚು ಚರ್ಚೆಯಲ್ಲಿವೆ. ಇದೀಗ ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದಿದ್ದು, ಡಿ.ಕೆ.ಶಿವಕುಮಾರ್ ಸಿಎಂ ಆಗಲಿದ್ದಾರೆ ಎಂದು ಹೇಳಿದ್ದಾರೆ. ಇದೀಗ ಈ ಜ್ಯೋತಿಷಿಯ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.
ಇದಿಷ್ಟೇ ಅಲ್ಲದೆ ಸಿದ್ದರಾಮಯ್ಯ (Siddaramaiah) ಹಾಲಿ ವಾಸ್ತವ್ಯ ಹೂಡಿರುವ ಸರ್ಕಾರಿ ನಿವಾಸವನ್ನೇ ಡಿಕೆಶಿ ಅವರು ಆಯ್ಕೆ ಮಾಡಿಕೊಳ್ಳುವಂತೆ ಆರಾಧ್ಯ ಸಲಹೆ ನೀಡಿದ್ದಾರೆ. ಅಂದಹಾಗೆ ವಿಧಾನಸೌಧದಲ್ಲಿ ಗುರುವಾರ ಮಧ್ಯಾಹ್ನ ಕೊಠಡಿ ಪೂಜೆಯನ್ನು ಡಿಕೆಶಿ ನೆರವೇರಿಸಲಿದ್ದಾರೆ. ಡಿಕೆ ಶಿವಕುಮಾರ್ (DK Shivakumar) ಗೆ ಲಕ್ಕಿ ಸಂಖ್ಯೆಯ ಕೊಠಡಿ 336 ರಲ್ಲಿ ಪೂಜೆ ನಡೆಯಲಿದೆ. ಜ್ಯೋತಿಷಿ ಆರಾಧ್ಯ ಸೂಚನೆ ಮೇರೆಗೆ ಕೊಠಡಿ ಪೂಜೆ ನಡೆಯಲಿದೆ. ಡಿಕೆ ಶಿವಕುಮಾರ್ ಜಾತಕ ಫಲದ ಪ್ರಕಾರವೇ ಜ್ಯೋತೀಷಿ ಮುಹೂರ್ತ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಭಿಜಿನ್ ಲಗ್ನದಲ್ಲಿ ಅರ್ಚಕರು ಪೂಜೆ ನೆರವೇರಿಸಲಿದ್ದಾರೆ.