Odisha Crime: ಸಾಂಬಾರು ಮಾತ್ರ ಮಾಡಿ ಅನ್ನ ಮಾಡಿಲ್ಲವೆಂಬ ಕಾರಣಕ್ಕೆ ಹೆಂಡತಿಯನ್ನೇ ಕೊಲೆಗೈದ ಪಾಪಿ ಪತಿ!

Crime news Wife Murdered by Husband in Odisha

Share the Article

Odisha Crime: ಇತ್ತೀಚೆಗೆ ಜನರ ಮನಸ್ಥಿತಿ ಯಾವ ಹಂತಕ್ಕೆ ಹೋಗಿದೆ ಎಂದರೆ ಎಲ್ಲಾ ಸಮಸ್ಯೆಗೆ ಕೊಲೆಯೇ ಪರಿಹಾರ ಎನ್ನುವಂತೆ ಮಾಡುತ್ತಿದ್ದಾರೆ. ಇಲ್ಲೊಬ್ಬ ಭೂಪ ತನ್ನ ಹೆಂಡತಿ ಸಾಂಬಾರು ಮಾತ್ರ ಮಾಡಿ, ಅನ್ನ ಮಾಡಿಲ್ಲವೆಂಬ ಕಾರಣಕ್ಕೆ ಕೊಲೆ ಮಾಡಿರುವ ಘಟನೆಯೊಂದು ಒಡಿಶಾದ (Odisha Crime) ಸಂಬಲ್‌ಪುರದಲ್ಲಿ ನಡೆದಿದೆ. ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದಾರೆ.

ಈ ಘಟನೆ ಜಮನಕಿರಾ ಪೊಲೀಸ್‌ ಠಾಣಾ ವ್ಯಾಪ್ತಿಯ ನುವಾಧಿ ಗ್ರಾಮದಲ್ಲಿ ಭಾನವಾರ ರಾತ್ರಿ ನಡೆದಿದೆ. ಸನಾತನ ಧಾರುವಾ (40ವರ್ಷ) ಎಂಬಾತನೇ ಈ ಕೃತ್ಯ ಎಸಗಿದವನು ಎಂದು ಗುರುತಿಸಲಾಗಿದೆ. 35ವರ್ಷದ ಆತನ ಪತ್ನಿ ಪುಷ್ಪಾ ಧರುವಾ ಎಂಬಾಕೆಯನ್ನೇ ಈ ಕ್ಷುಲ್ಲಕ ಕಾರಣಕ್ಕೆ ಕೊಲೆ ಮಾಡಿದ್ದಾನೆ ಈ ಪಾಪಿ ಪತಿ.

ಈ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದು, ಮಗಳು ಕುಚಿಂದಾದಲ್ಲಿ ಮನೆಕೆಲಸಕ್ಕೆ ಹೋಗಿದ್ದು, ಮಗ ರಾತ್ರಿ ಮಲಗಲು ತನ್ನ ಸ್ನೇಹಿತರನ ಮನೆಗೆ ಹೋಗಿದ್ದ. ಈ ಸಂದರ್ಭದಲ್ಲಿ ಅನ್ನ ಮಾಡಿಲ್ಲವೆಂದು ಕೋಪಗೊಂಡ ಪತಿ ಪತ್ನಿಯನ್ನು ಕೊಲೆ ಮಾಡಿದ್ದಾನೆ.

ಇದನ್ನೂ ಓದಿ:Karnataka Rains: ಸುರಿಯಲಿದೆ ಅಬ್ಬರದ ಮಳೆ ಮುಂದಿನ 24ಗಂಟೆಗಳಲ್ಲಿ! ಬೆಂಗಳೂರು, ಕರಾವಳಿಯ ಜನರೇ ಎಚ್ಚರ!

Leave A Reply