Women held 22 snakes: ಅಬ್ಬಾಬ್ಬಾ, ವಿಮಾನದಿಂದ ಇಳಿದ ಈಕೆಯ ಬ್ಯಾಗಿನಲ್ಲಿದ್ವು 22 ಹಾವುಗಳು! ಕಾರಣವೇನು ಗೊತ್ತಾ?

Share the Article

Women held 22 snakes: ಸಾಮಾನ್ಯವಾಗಿ ಜಿರಲೆ ಎಂದರೆ ಯುವತಿಯರಿಗೆ ಭಯ. ಜಿರಳೆ ಅಲ್ಲದೆ ಸಣ್ಣ ಪುಟ್ಟ ಹುಳು ಹುಪ್ಪಟೆಗಳಂದರೂ ಹುಡುಗಿಯರು ಬೆಚ್ಚಿ ಬೀಳುತ್ತಾರೆ. ಇನ್ನು ಹಾವು ಅಂದ್ರೆ ಒಂದಷ್ಟು ದೂರ ಓಡಿಯಾರು. ಆದ್ರೆ ಇಲ್ಲೊಬ್ಬಳು ಗಟ್ಟಿಗಿತ್ತಿ ಹಾವುಗಳೊಂದಿಗೇ ವಿಮಾನದಲ್ಲಿ ಪ್ರಯಾಣ ಮಾಡಿದ್ದಾಳೆ. ಅದೂ ಕೂಡ ಒಂದೆರಡು ಹಾವಲ್ಲ, ಬರೋಬ್ಬರಿ 22 ಹಾವುಗಳು!

ಹೌದು, ನಿನ್ನೆ ದಿನ ಮಹಿಳೆಯೊಬ್ಬಳು ಕೌಲಲಾಂಪುರದಿಂದ ವಿಮಾನದಲ್ಲಿ ಬಂದು ಚೆನ್ನೈ ಏರ್​ಪೋರ್ಟ್​ನಲ್ಲಿ ಇಳಿದಿದ್ದಾಳೆ. ಅನುಮಾನದ ಮೇರೆಗೆ ಭದ್ರತಾ ಸಿಬ್ಬಂದಿ ಈಕೆಯನ್ನು ತೀವ್ರ ತಪಾಸಣೆಗೆ ಒಳಪಡಿಸಿದ್ದಾರೆ. ಬಳಿಕ ಆಕೆಯ ಬ್ಯಾಗಿನೊಳಗೆ ಬರೋಬ್ಬರಿ 22 ಹಾವುಗಳಿರುವುದು ಕಂಡುಬಂದಿದೆ. ನಂತರ ಪೋಲೀಸರು ಈಕೆಯನ್ನು ವಶಕ್ಕೆ ಪಡೆದಿದ್ದಾರೆ.

ಕಸ್ಟಮ್ಸ್ ಅಧಿಕಾರಿಗಳು ಈಕೆಯನ್ನು ತಪಾಸಣೆ ಮಾಡಿದ ಬಳಿಕ ಈಕೆಯ ಚೆಕ್​​ಇನ್ ಬ್ಯಾಗ್ ಪರಿಶೀಲನೆ ನಡೆಸಿದಾಗ ಅವುಗಳಲ್ಲಿ ವಿವಿಧ ಪ್ರಭೇದದ 22 ಹಾವುಗಳು(women held 22 snakes), ಒಂದು ಗೋಸುಂಬೆ ಇರುವುದು ಕಂಡುಬಂದಿತ್ತು. ಕಸ್ಟಮ್ಸ್ ಆಯಕ್ಟ್ ಹಾಗೂ ವನ್ಯಜೀವಿ ಸಂರಕ್ಷಣಾ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು, ಈಕೆಯನ್ನು ಇಂದು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಅಂದಹಾಗೆ ಈಕೆ ಯಾಕಿಷ್ಟು ವಿವಿಧ ಪ್ರಭೇದದ ಹಾವುಗಳನ್ನು ಕೊಂಡೊಯ್ಯುತ್ತಿದ್ದಳ ಎಂಬುದು ಇನ್ನೂ ತಿಳಿದು ಬಂದಿಲ್ಲ. ಒಂದೊಂದು ಬಾಕ್ಸ್ ನಲ್ಲೂ ಒಂದೊಂದು ಹಾವೆಂಬಂತೆ 22 ಬಾಕ್ಸ್ ಗಳಲ್ಲಿ 22 ಹಾವು ತುಂಬಿಸಿ ತಂದಿದ್ದಾಳೆ ಈ ಪುಣ್ಯಾತ್ಗಿತ್ತಿ.

ಇದನ್ನೂ ಓದಿ: ಪತ್ನಿ ಐಶ್ವರ್ಯ ಸಿನಿಮಾ ಮಾಡಲಿ, ನೀವು ಮಗಳು ಆರಾಧ್ಯನ ನೋಡ್ಕೊಳ್ಳಿ ‘ ಎಂದ ಅಭಿಮಾನಿಗೆ ಅಭಿಷೇಕ್ ಬಚ್ಚನ್ ಸಕತ್ ಉತ್ತರ !

Leave A Reply