Home News Donald Trump: ಟ್ರಂಪ್ ನನ್ನನ್ನು ರೇಪ್ ಮಾಡಿದ್ದಾರೆ- ರೋಚಕ ಸತ್ಯ ಬಿಚ್ಚಿಟ್ಟ ಅಮೆರಿಕನ್ ಬರಹಗಾರ್ತಿ! ಅಷ್ಟಕ್ಕೂ...

Donald Trump: ಟ್ರಂಪ್ ನನ್ನನ್ನು ರೇಪ್ ಮಾಡಿದ್ದಾರೆ- ರೋಚಕ ಸತ್ಯ ಬಿಚ್ಚಿಟ್ಟ ಅಮೆರಿಕನ್ ಬರಹಗಾರ್ತಿ! ಅಷ್ಟಕ್ಕೂ ಅಂದು ನಡೆದದ್ದೇನು?

Hindu neighbor gifts plot of land

Hindu neighbour gifts land to Muslim journalist

Donald Trump: ಇತ್ತೀಚೆಗಷ್ಟೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿರುದ್ಧ ಅಕ್ರಮ ಸಂಬಂಧದ ಕುರಿತ ಆರೋಪ ಕೇಳಿ ಬಂದಿದ್ದು ನೀಲಿ ಚಿತ್ರ ತಾರೆಗೆ ಕಳ್ಳ ಹಣ ನೀಡಿದ್ದಾರೆನ್ನಲಾದ ಸಂಗತಿ ಸಾಕಷ್ಟು ಸುದ್ಧಿಯಾಗಿ, ಭಾರೀ ಸಂಚಲನ ಮೂಡಿಸಿತ್ತು. ಇದರ ಬೆನ್ನಲ್ಲೇ ಟ್ರಂಪ್ (Donald Trump) ಸುಮಾರು 30 ವರ್ಷಗಳ ಹಿಂದೆ ನನ್ನ ಮೇಲೆ ಅತ್ಯಾಚಾರವೆಸಗಿದ್ದರು ಎಂದು ಅಮೆರಿಕಾದ ಬರಹಾಗಾರ್ತಿಯೊಬ್ಬಳ ಹೇಳಿಕೆ ನೀಡಿದ್ದು, ಸದ್ಯ ಭಾರೀ ಚರ್ಚೆಯಾಗುತ್ತಿದೆ.

ಹೌದು, ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಸುಮಾರು 30 ವರ್ಷಗಳ ಹಿಂದೆ ನನ್ನ ಮೇಲೆ ಅತ್ಯಾಚಾರವೆಸಗಿದ್ದರು (Rape) ಎಂದು ಅಮೆರಿಕದ (America) ಪ್ರತಿಷ್ಠಿತ ಎಲ್ಲೆ ಮ್ಯಾಗಜಿನ್‌ನಲ್ಲಿ ಅಂಕಣಗಾರ್ತಿಯಾಗಿರುವ ಬರಹಗಾರ್ತಿ ಇ ಜೀನ್ ಕ್ಯಾರೋಲ್ (E Jean Carroll) ಆರೋಪಿಸಿದ್ದಾರೆ. ಸದ್ಯ ಈ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.

ಈ ಬಗ್ಗೆ ಮಾತನಾಡಿ ಸುಮಾರು 79 ವರ್ಷಗಳ ಜೀನ್ ಕ್ಯಾರೋಲ್, ನನ್ನ ಮೇಲೆ 1995-1996ರ ವೇಳೆಯಲ್ಲಿ ಅತ್ಯಾಚಾರ ನಡೆದಿದೆ. ಬರ್ಗ್ಡಾರ್ಪ್ ಗುಡ್‌ಮ್ಯಾನ್ ಡಿಪಾರ್ಟ್ಮೆಂಟ್ ಸ್ಟೋರ್‌ನ ಡ್ರೆಸ್ಸಿಂಗ್ ರೂಮ್‌ನಲ್ಲಿ ಟ್ರಂಪ್ ನನ್ನ ಮೇಲೆ ಅತ್ಯಾಚಾರವೆಸಗಿದ್ದರು. ಆ ಸಂದರ್ಭ ನಾನು ಅಲ್ಲಿಂದ ಓಡಿಹೋಗಲು ಪ್ರಯತ್ನಿಸಿದ್ದೆ. ಆ ಘಟನೆಯ ಬಳಿಕ ನನ್ನ ಜೀವನದ ಮೇಲೆ ನನಗೆ ಜಿಗುಪ್ಸೆ ಉಂಟಾಯಿತು ಎಂದು ಕ್ಯಾರೊಲ್ ಆರೋಪಿಸಿದ್ದಾರೆ.

ಈ ಹಿನ್ನೆಲೆ ನಾನು ನ್ಯಾಯಾಲಯದ ಮೊರೆಹೋಗಿದ್ದೇನೆ. ಈ ಬಗ್ಗೆ ನಾನು ಪತ್ರಿಕೆಯಲ್ಲಿ ಬರೆದಿದ್ದಾಗ ಟ್ರಂಪ್ ನನ್ನ ಆರೋಪಗಳನ್ನು ಸುಳ್ಳು, ಇಂತಹುದು ಯಾವುದೂ ನಡೆದೇ ಇಲ್ಲ ಎಂದು ಹೇಳಿದ್ದರು. ಅವರು ನನ್ನ ಖ್ಯಾತಿಯನ್ನು ಛಿದ್ರಗೊಳಿಸಿದ್ದಾರೆ. ಆದರೀಗ ನನ್ನ ಮಾನವನ್ನು ಮರಳಿ ಪಡೆಯುವ ಸಲುವಾಗಿ ನಾನಿಲ್ಲಿದ್ದೇನೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನನ್ನ ಆರೋಪಗಳನ್ನು ಟ್ರಂಪ್ ವಂಚನೆ, ಸುಳ್ಳು ಹಾಗೂ ಕುತಂತ್ರವೆಂದು ಸಾಮಾಜಿಕ ಜಾಲತಾಣವಾದ ಟ್ರೂತ್‌ನಲ್ಲಿ ಬರೆದುಕೊಂಡಿದ್ದಾರೆ. ಆದರೆ ನಾನು ಅಂತಹ ಕೆಳಮಟ್ಟದ ವ್ಯಕ್ತಿಯಲ್ಲ. ಸುಳ್ಳು ಹೇಳಿಕೆಗಳನ್ನು ನೀಡಿ ನನ್ನನ್ನು ನಾನು ಮಾರಿಕೊಳ್ಳುವುದಿಲ್ಲ ಎಂದು ಕ್ಯಾರೋಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಂದಹಾಗೆ ಆರಂಭದಲ್ಲಿ ತಿಳಿಸಿದಂತೆ ಅಮೆರಿಕದ ನೀಲಿ ಚಿತ್ರಗಳ ಸ್ಟಾರ್ ನಟಿಯಾಗಿರುವ ಸ್ಟಿಫಾನಿ ಕ್ಲಿಫೋರ್ಡ್‍ಗೆ, ಟ್ರಂಪ್ ಪರ ವಕೀಲ ಮೈಕೆಲ್ ಕೋಹೆನ್, ಸುಮಾರು 1.30 ಲಕ್ಷ ಡಾಲರ್(ಅಂದಾಜು 82 ಲಕ್ಷ ರೂ.) ಹಣ ನೀಡಿದ್ದರು ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿತ್ತು. ತನ್ನ ಹಾಗೂ ನಟಿ ನಡುವಿನ ಸಂಬಂಧ ಸಾರ್ವಜನಿಕವಾಗಿ ಬಯಲಾಗದೇ ಇರಲು ಟ್ರಂಪ್ ತನ್ನ ವಕೀಲನ ಮೂಲಕ ಭಾರೀ ಮೊತ್ತವನ್ನು ಪಾವತಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ಇದನ್ನೂ ಓದಿ: Smitha rakesh: ವರುಣಾದದಲ್ಲಿ ಮಾವನ ಪರ ಪ್ರಚಾರಕ್ಕಿಳಿದ ಸಿದ್ದು ಸೊಸೆ! ಇವರೇ ನೋಡಿ ರಾಕೇಶ್ ಪತ್ನಿ!