Ganguly – Virat ನಡುವೆ ಏನಿದು ಮುನಿಸು?: RCB- DC ಪಂದ್ಯದಲ್ಲಿ ನಿಜಕ್ಕೂ ಆದದ್ದೇನು?

Ganguly – Virat : ಇಂಡಿಯನ್ ಪ್ರೀಮಿಯರ್ ಲೀಗ್ ( ಐಪಿಎಲ್ ) ಪುರುಷರ ಟ್ವೆಂಟಿ20 (ಟಿ 20) ಕ್ರಿಕೆಟ್ ಲೀಗ್ ಇದೀಗ ನಡಿತಾ ಇದ್ದು, ಹಾಗೇ ವಿಶ್ವದ ಅತ್ಯಂತ ಜನಪ್ರಿಯ ಕ್ರಿಕೆಟ್ ಲೀಗ್(cricket league) ಸಹ ಆಗಿದೆ. ಇದೀಗ ರಾಯಲ್ ಚಾಲೆಂಜರ್ಸ್ (royal challenges)ಬೆಂಗಳೂರು ಸತತ ಎರಡು ಪಂದ್ಯಗಳಲ್ಲಿ ಸೋಲನ್ನ ಅನುಭವಿಸಿ ಇದೀಗ ತಂಡವು ಶನಿವಾರದ ಮೊದಲ ಪಂದ್ಯದಲ್ಲಿ ಗೆಲುವಿನ ಮೆಟ್ಟಿಲನ್ನು ಏರಿ ನಿಂತಿದೆ. ಡೆಲ್ಲಿ ಕ್ಯಾಪಿಟಲ್ಸ್ (Delhi capitals)ವಿರುದ್ಧ ಚಿನ್ನಸ್ವಾಮಿ ಅಂಗಳದಲ್ಲಿ ನಡೆದ ಪಂದ್ಯದಲ್ಲಿ 23 ರನ್ ಅಂತರದ ನಡುವೆ ರಾಯಲ್ ಚಾಲೆಂಜರ್ಸ್ ಸುಲಭ ಗೆಲುವುವಿನ ಮೂಲಕ ಪಂದ್ಯದಲ್ಲಿ ತನ್ನನ್ನು ತಾನು ಗುರುತಿಸಿಕೊಂಡಿತು.

ಮೊದಲು ಬ್ಯಾಟಿಂಗ್ (batting)ಮಾಡಿದ ಆರ್ ಸಿಬಿಯು ವಿರಾಟ್ ಕೊಹ್ಲಿ (Virat Kohli) ಅವರ ಅರ್ಧಶತಕದ ನೆರವಿನಿಂದ ಆರು ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡವು 9 ವಿಕೆಟ್ ಕಳೆದುಕೊಂಡು 151 ರನ್ ಮಾತ್ರ ಗಳಿಸಿತು. ಕನ್ನಡಿಗ ವಿಜಯ್ ಕುಮಾರ್ ವೈಶಾಖ್ (Vijay Kumar Vaishak)ಅವರು ಬಾರಿಸಿದ ಮೂರು ವಿಕೆಟ್ ಹೆಚ್ಚಿನ ಜಯಗಳಿಸಿದೆ. ಪಂದ್ಯದಲ್ಲಿ ಮಾಜಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಮಾಜಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ(Sourav Ganguly) ಅವರ ನಡುವಿನ ಶೀತಲ ಸಮರ ತುಂಬಾನೇ ದೊಡ್ಡದಾಗಿದೆ. ಅದೇನಪ್ಪಾ ಅಂದ್ರೆ

ಪಂದ್ಯ ನಡೆಯುತ್ತಿದ್ದ ಸಮಯದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ವಿರಾಟ್ ಕೊಹ್ಲಿ ಅವರು ಡಗೌಟ್ ನಲ್ಲಿ ಕುಳಿತಿದ್ದ ಸೌರವ್ ಗಂಗೂಲಿಯನ್ನು ಸಿಕ್ಕಾ ಪಟ್ಟೆ ಕೋಪದಿಂದ ದಿಟ್ಟಿಸಿ ನೋಡಿದ್ದ ಫೋಟೊವೊಂದು ಸಾಮಾಜಿಕ ಜಾಲತಾಣದಲ್ಲಿ(social media) ಇದೀಗ ವೈರಲ್ ಆಗುತ್ತಿದೆ. ಪಂದ್ಯ ಮುಗಿದ ಬಳಿಕ ಆಟಗಾರರು ಪರಸ್ಪರ ಹ್ಯಾಂಡ್ ಶೇಕ್ ಮಾಡಿದ ಬಳಿಕ ಪಂದ್ಯ ಮುಕ್ತಾಯವಾಗುತ್ತದೆ. ಆದರೆ ಈ ವೇಳೆ ವಿರಾಟ್ ಕೊಹ್ಲಿ ಮತ್ತು ಗಂಗೂಲಿ (Virat Kohli and Ganguly handshake) ಹ್ಯಾಂಡ್ ಶೇಕ್ ಮಾಡಲಿಲ್ಲ. ಇದು ಇವರಿಬ್ಬರ ನಡುವೆ ಏನೋ ಸರಿ ಇಲ್ಲ ಇವರ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.

ವಿರಾಟ್ ಕೊಹ್ಲಿ (Virat Kohli)ಅವರು ಟೀಂ ಇಂಡಿಯಾದ ಟೀಮ್ ಲೀಡರ್(team leader) ಅನ್ನು ಕಳೆದುಕೊಂಡ ವೇಳೆ ಗಂಗೂಲಿ ಬಿಸಿಸಿಐ ಅಧ್ಯಕ್ಷ ಸ್ಥಾನದಲ್ಲಿದ್ದರು. ಕೊಹ್ಲಿ ಅವರು ಲೀಡರ್ ಸ್ಥಾನವನ್ನು ಕಳೆದುಕೊಳ್ಳಲು ಗಂಗೂಲಿ ಕಾರಣ ಎನ್ನಲಾಗಿದೆ. ಹೀಗಾಗಿ ಅಂದಿನಿಂದ ಈ ಇಬ್ಬರು ಆಟಗಾರರ ನಡುವಿನ ಶೀತಲ ಸಮರ ಇಂದಿನ ತನಕ ಮುಂದುವರಿಯುತ್ತಾ ಬಂದಿದೆ.

ಕೊಹ್ಲಿ ಡೆಲ್ಲಿಯ ಪಾಂಟಿಂಗ್ (Delhi ponting)ಅವರೊಂದಿಗೆ ಮಾತನಾಡುತ್ತಿದ್ದಾಗ ಗಂಗೂಲಿ ಅವರ ಮುಂದೆಯೇ ಹೋದರೂ, ಯಾವುದೇ ರೀತಿಯ ಪ್ರತಿಕ್ರಿಯೆ ಇರಲಿಲ್ಲ. ಕೊಹ್ಲಿ ಮತ್ತು ಗಂಗೂಲಿ ಇಬ್ಬರೂ ಹ್ಯಾಂಡ್ ಶೇಕ್ ಮಾಡುವುದಿಲ್ಲ ಎಂದು ನಿರ್ಧರಿಸಿದ್ದಾರೆಯೇ ಎಂಬ ವಿಷಯವನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಆದರೆ ಅವರು ಇತರ ಆರ್ ಸಿಬಿ (RCB) ಆಟಗಾರರೊಂದಿಗೆ ಹ್ಯಾಂಡ್ ಶೇಕ್ (handshake) ಮಾಡುತ್ತಾರೆ. ಇದೀಗ ಎಲ್ಲರ ಅನುಮಾನಕ್ಕೆ ದೊಡ್ಡ ಬಾಣವಾಗಿದೆ.

Leave A Reply

Your email address will not be published.