Cashew in jackfruit tree : ಹಲಸಿನ ಮರದಲ್ಲಿ ಗೇರು ಹಣ್ಣು ! ಡುಮ್ಮಣ್ಣ ಖ್ಯಾತಿಯ ಹಲಸು ಈಗ ತೀರಾ ಲಾಚರ್ !

Cashew in jackfruit tree : ಹಲಸಿನ ಮರದಲ್ಲಿ ಗೇರು ಹಣ್ಣು ಬೆಳೆದ ವಿಚಾರವೊಂದು ಎಲ್ಲೆಡೆ ಹಬ್ಬಿ ಮಾಧ್ಯಮಗಳಲ್ಲಿ ಪ್ರಸಾರವಾಗಿ, ಕುತೂಹಲಿಗರ ದಂಡೇ ದೌಡಾಯಿಸುವಷ್ಟರ ಮಟ್ಟಿಗೆ ಅಚ್ಚರಿ ಸೃಷ್ಟಿಸಿದ ಘಟನೆಯೊಂದು ನಡೆದಿದೆ.

 

ಉತ್ತರಕನ್ನಡ ಜಿಲ್ಲೆಯ ಅಂಕೋಲ ಬಂಡೀಕಟ್ಟೆ ಎಂಬ ಗ್ರಾಮವೊಂದರಲ್ಲಿ ಈ ವೈಚಿತ್ರ್ಯ ನಡೆದಿದ್ದು, ಇಲ್ಲಿನ ಕೃಷಿಕ ಮಹಾಬಲೇಶ್ವರ ಎಂಬವರ ಹಿತ್ತಿಲಲ್ಲಿ ಸುಮಾರು 70 ವರ್ಷಗಳಿಂದ ಇರುವ ಹಲಸಿನ ಮರದಲ್ಲೇ ಇಂತಹ ಪ್ರಾಕೃತಿಕ ವಿಸ್ಮಯ ಬೆಳಕಿಗೆ ಬಂದಿದ್ದು, ಈಗ ಭಾರೀ ಸುದ್ದಿಯಾಗಿದೆ. ಪ್ರತೀ ವರ್ಷವೂ ಸೊಂಟದ ತನಕ ಎತ್ತರದ ಹಲಸಿನ ಹಣ್ಣು ಕೊಡುತ್ತಿದ್ದ ಮರ ಈ ವರ್ಷ ಯಾಕೋ ಮುನಿಸಿಕೊಂಡಂತಿದ್ದು, ಗೇರು ಹಣ್ಣಿನ(Cashew in jackfruit tree) ಮಾದರಿಯ ಹಲಸಿನ ಹಣ್ಣು ಬೆಳೆದಿರುವ ವಿಚಾರ ಎಲ್ಲರ ಗಮನಸೆಳೆದಿದೆ.

ಸದ್ಯ ಈ ಸುದ್ದಿ ಗ್ರಾಮದಲ್ಲೇಲ್ಲಾ ಹಬ್ಬಿದ ಪರಿಣಾಮ ಇಡೀ ಊರೇ ಅವರ ಹಿತ್ತಿಲಿಗೆ ಆಗಮಿಸಿ ಮರ ಹಾಗೂ ಹಣ್ಣನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ. ಹಲಸಿನ ಮರದಲ್ಲೂ ಗೇರು ಹಣ್ಣು ಬೆಳೆಯುತ್ತದೆಯೇ ಎನ್ನುವ ಪ್ರಶ್ನೆ ಎಲ್ಲರಲ್ಲೂ ಕಾಡಿದೆ. ಅಲ್ಲಿ ಹಲಸಿನ ಮರದಲ್ಲಿನ ಹಲಸಿನ ಹಣ್ಣು ಗಾತ್ರದಲ್ಲಿ ಮತ್ತು ಆಕಾರದಲ್ಲಿ ಥೇಟು ಗೇರು ಹಣ್ಣನ್ನು ಹೋಲುತ್ತಿದೆ. ಅಕ್ಕ ಪಕ್ಕ ಗೇರು ಮರಗಳೂ ಇದ್ದು, ಅದರ ಸಹವಾಸ ದೋಷ ಎನ್ನುವುದು ಅಲ್ಲಿ ಈಗ ಚಾಲ್ತಿಯಲ್ಲಿರುವ ಹೊಸ ಜೋಕು.

ಪ್ರಾಕೃತಿಕವಾಗಿ ಕೆಲವೊಂದು ಬಾರಿ ಇಂತಹಾ ಅಚ್ಚರಿ ಸಾಮಾನ್ಯವಾಗಿದ್ದು, ಡುಮ್ಮಣ್ಣ ಖ್ಯಾತಿಯ ಹಲಸು ಪಾಪ ಹೊಟ್ಟೆಗೆ ಏನೂ ತಿನ್ನದ ಬಡಪಾಯಿಯಂತೆ ಗಾತ್ರದಲ್ಲಿ ಲಾಚರ್ ಆಗಿ ಸುದ್ದಿಯಲ್ಲಿದ್ದಾನೆ.

ಇದನ್ನು ಓದಿ : Birds Of Death : ಈ ಹಕ್ಕಿಯ ರೆಕ್ಕೆಗಳಲ್ಲಿದೆ ಮಾರಣಾಂತಿಕ ವಿಷ! ಜಸ್ಟ್‌ 30ಸೆಕೆಂಡ್‌ನಲ್ಲಿ ಜೀವ ಹೋಗುತ್ತೆ!

Leave A Reply

Your email address will not be published.