Birds Of Death : ಈ ಹಕ್ಕಿಯ ರೆಕ್ಕೆಗಳಲ್ಲಿದೆ ಮಾರಣಾಂತಿಕ ವಿಷ! ಜಸ್ಟ್‌ 30ಸೆಕೆಂಡ್‌ನಲ್ಲಿ ಜೀವ ಹೋಗುತ್ತೆ!

Birds Of Death : ಪಕ್ಷಿಗಳೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಅದರಲ್ಲೂ ಪುಟ್ಟ ಪುಟ್ಟ ಹಕ್ಕಿಗಳೆಂದರೆ ಎಲ್ಲರಿಗೂ ಪ್ರಾಣ. ಅಂದ ಹಾಗೆ ನಮಗೆ ಆಕಾಶದಲ್ಲಿ ಹಾರಾಡುವ ವರ್ಣರಂಜಿತ ಸುಂದರ ಪಕ್ಷಿಗಳು ತುಂಬಾ ಆಕರ್ಷಕವಾಗಿ ಕಾಣುತ್ತವೆ. ಆದರೆ ಅವುಗಳಲ್ಲಿ ಕೆಲವು ನಿಮ್ಮನ್ನು ಕ್ಷಣಮಾತ್ರದಲ್ಲಿ ಚಿರ ನಿದ್ದೆಯ ಲೋಕಕ್ಕೆ ಕಳುಹಿಸುತ್ತದೆ ಎಂದರೆ ನಂಬುತ್ತೀರಾ? ಹೌದು, ಡೆನ್ಮಾರ್ಕ್‌ನ ಸಂಶೋಧಕರು ಅಂತಹ ಎರಡು ಜಾತಿಯ ಪಕ್ಷಿಗಳನ್ನು ಕಂಡುಹಿಡಿದಿದ್ದಾರೆ. ಈ ಪಕ್ಷಿಗಳು ತಮ್ಮ ಗರಿಗಳಲ್ಲಿ ನ್ಯೂರೋಟಾಕ್ಸಿನ್ ನ್ನು ಹೊಂದಿರುತ್ತದೆ. ನ್ಯೂರೋಟಾಕ್ಸಿನ್ ಒಂದು ರೀತಿಯ ವಿಷವಾಗಿದ್ದು ಅದು 30 ಸೆಕೆಂಡುಗಳಲ್ಲಿ ಯಾರನ್ನಾದರೂ ಕೊಲ್ಲುತ್ತದೆ (Birds Of Death) ಎಂದು ಹೇಳಿದ್ದಾರೆ.

ಈ ಜಾತಿಯ ಪಕ್ಷಿಗಳು ನ್ಯೂ ಗಿನಿಯಾದ ಕಾಡುಗಳಲ್ಲಿ ಕಂಡುಬರುತ್ತವೆ ಎಂದು ಸಂಶೋಧಕರು ಹೇಳುತ್ತಾರೆ. ವಿಶೇಷವೆಂದರೆ ಈ ಪಕ್ಷಿಗಳು ತಿನ್ನುವ ಆಹಾರ ವಿಷವಾಗಿ ಪರಿವರ್ತನೆಯಾಗುತ್ತದೆ. ಈ ಸಾಮರ್ಥ್ಯವನ್ನು ಈ ಪಕ್ಷಿಗಳು ಸ್ವತಃ ಅಭಿವೃದ್ಧಿಪಡಿಸಿವೆ. ವಿಶೇಷವೆಂದರೆ ಈ ಹಕ್ಕಿಗಳು ಈ ವಿಷವನ್ನು ತಮ್ಮ ರೆಕ್ಕೆಗಳಲ್ಲಿ ಸಂಗ್ರಹಿಸುತ್ತಾರೆ. ಈ ರೀತಿಯ ವಿಶೇಷ ವಸ್ತುವಿನಿಂದ ಈ ಹಕ್ಕಿಗಳು ಉಳಿದ ಪಕ್ಷಿಗಳಿಗಿಂತ ಬೇರೆಯಾಗಿಯೇ ಕಾಣುತ್ತದೆ.

ವಿಷವು ಕಂಡುಬರುವ ಪಕ್ಷಿಗಳು ರೀಜೆಂಟ್ ವಿಸ್ಲರ್ ಮತ್ತು ಇತರ ರಫ್ಸ್-ನೇಪ್ಡ್ ಬೆಲ್ಬರ್ಡ್ ಎಂಬ ಜಾತಿಗೆ ಸೇರಿದವುಗಳು ಎನ್ನಲಾಗಿದೆ. ಡೆನ್ಮಾರ್ಕ್‌ನ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂನ ಕ್ನೂಡ್ ಜಾನ್ಸೆನ್ ಪ್ರಕಾರ, ನ್ಯೂ ಗಯಾನಾದ ಕಾಡುಗಳಲ್ಲಿ ಕಂಡುಬರುವ ಈ ಎರಡೂ ಪ್ರಭೇದಗಳು ಬಹಳ ವಿಶೇಷವಾದವು. ರೀಜೆಂಟ್ ವಿಸ್ಲರ್ ಎಂಬುದು ಒಂದು ಕಾಲದಲ್ಲಿ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ವಾಸಿಸುತ್ತಿದ್ದ ಕುಟುಂಬದ ಭಾಗವಾಗಿದ್ದ ಒಂದು ಜಾತಿಯಾಗಿದೆ. ಈ ಹಕ್ಕಿಗಳು ತಮ್ಮ ರೆಕ್ಕೆಗಳಲ್ಲಿ ನ್ಯೂರೋಟಾಕ್ಸಿನ್ ಅನ್ನು ಮರೆಮಾಡುವ ಸಾಮರ್ಥ್ಯವನ್ನು ಹೊಂದಿದೆ. ಸಮಯ ಬಂದಾಗ, ಈ ವಿಷದಿಂದ ಯಾರನ್ನಾದರೂ ಕೊಲ್ಲಬಹುದು.

ಈ ಪಕ್ಷಿಗಳು ವರ್ಣರಂಜಿತ ಡಾರ್ಟ್ ಕಪ್ಪೆಯಂತೆಯೇ ವಿಷವನ್ನು ಹೊಂದಿರುತ್ತವೆ. ದಕ್ಷಿಣ ಮತ್ತು ಮಧ್ಯ ಅಮೆರಿಕಾದಲ್ಲಿ ಕಂಡುಬರುವ ಈ ಕಪ್ಪೆಯನ್ನು ಸ್ಪರ್ಶಿಸಿದರೂ ಸಹ ಸಾವಿನ ಅಪಾಯವಿದೆ. ಸಂಶೋಧಕರ ಪ್ರಕಾರ, ಅವುಗಳಲ್ಲಿ ಬ್ಯಾಟ್ರಾಕೊಟಾಕ್ಸಿನ್ (ನ್ಯೂರೋಟಾಕ್ಸಿನ್) ಇರುವಿಕೆಯು ತುಂಬಾ ಅಪಾಯಕಾರಿ ಸಂಕೇತವಾಗಿದೆ. ಪಕ್ಷಿಗಳ ಸಂಪರ್ಕಕ್ಕೆ ಬಂದ ತಕ್ಷಣ ಸ್ನಾಯು ಸೆಳೆತ ಉಂಟಾಗುತ್ತದೆ ಮತ್ತು ಹೃದಯ ಸ್ತಂಭನಕ್ಕೆ ಕಾರಣವಾಗುತ್ತದೆ ಎಂದು ಹೇಳಲಾಗುತ್ತದೆ.

ವಿಷಕಾರಿ ಪಕ್ಷಿಯು ಗರಿಗಳಲ್ಲಿರುವ ನ್ಯೂರೋಟಾಕ್ಸಿನ್ ಅನ್ನು ನಿಯಂತ್ರಿಸುತ್ತದೆ ಎಂದು ಸಂಶೋಧಕ ಕಸುನ್ ಬೋಡವಟ್ಟ ತಿಳಿಸಿದ್ದಾರೆ. ಉದಾಹರಣೆಗೆ, ಈ ಹಕ್ಕಿ ಹಿಂಸಾತ್ಮಕವಾಗಿ ದಾಳಿ ಮಾಡಿದಾಗ, ಈ ವಿಷ ಮಾತ್ರ ಜನರನ್ನು ತಲುಪುತ್ತದೆ ಮತ್ತು ಸಾವಿಗೆ ಕಾರಣವಾಗುತ್ತದೆ. ಮಾರಣಾಂತಿಕ ನ್ಯೂರೋಟಾಕ್ಸಿನ್ ಅನ್ನು ಪಕ್ಷಿ ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಂಶೋಧಕರ ತಂಡ ಪ್ರಯತ್ನಿಸಿದೆ.

ಡಾರ್ಟ್ ಕಪ್ಪೆಗಳು ಏನು ಮಾಡಲು ಸಾಧ್ಯವಿಲ್ಲ. ಈ ಸಂಶೋಧನೆ ಆರಂಭವಷ್ಟೇ, ಈ ಪಕ್ಷಿಗಳು ವಿಷವನ್ನು ಹೇಗೆ ನಿಯಂತ್ರಿಸುತ್ತವೆ ಎಂಬುದನ್ನು ಪತ್ತೆ ಹಚ್ಚಲು ನಮ್ಮ ತಂಡ ಪ್ರಯತ್ನಿಸುತ್ತಿದೆ ಎನ್ನುತ್ತಾರೆ ಮೂಡ್ ಜಾನ್ಸನ್. ಪಕ್ಷಿಗಳ ನರಮಂಡಲವು ಅದನ್ನು ಹೇಗೆ ಸಂಗ್ರಹಿಸಲು ಸಾಧ್ಯವಾಗುತ್ತದೆ ಎಂಬುವುದು ಸಂಶೋಧನೆಯಿಂದ ಇನ್ನಷ್ಟೇ ತಿಳಿಯಬೇಕಿದೆ.

 

 

 

ಇದನ್ನು ಓದಿ : Rahul Gandhi: ರಾಹುಲ್‌ ಗಾಂಧಿ ವಿರುದ್ಧ ದಾಖಲಾಯ್ತು ಮತ್ತೊಂದು ಮಾನನಷ್ಟ ಕೇಸ್‌! ಅಷ್ಟಕ್ಕೂ ರಾಗಾ ಮಾಡಿದ ತಪ್ಪೇನು?

Leave A Reply

Your email address will not be published.