Marriage Viral Video : ಆರತಕ್ಷತೆಯಲ್ಲೇ ವಧುವಿನ ಮುಖವಾಡ ಕಳಚಿದ ವರ! ನಂತರ ನಡೆಯಿತು ಭಾರೀ ಕಾಳಗ!!!

Marriage : ಮೊದಲಿನ ಸಂಪ್ರದಾಯದಲ್ಲಿ ಮದುವೆ ಎಂದರೆ ವಧು – ವರ (bride and groom) ಹಸೆಮನೆಗೆ ಏರಿ, ವಧು ಮಾಂಗಲ್ಯಕ್ಕೆ ತಲೆಕೊಟ್ಟು ಜೀವನ  ಪರ್ಯಂತ ತನ್ನ ಗಂಡನ ಮನೆಯಲ್ಲಿ ಮರ್ಯಾದೆಯಿಂದ ಜೀವನ ಸಾಗಿಸುವುದೇ  ಮದುವೆ. ಇದು ಒಂದು ಪವಿತ್ರವಾದ ಬಂಧವಾಗಿತ್ತು, ಆದರೆ ಈಗೆಲ್ಲಾ ಮದುವೆ(marriage) ಅನ್ನೋದು ನೀರಲ್ಲಿ(water) ಬಿಟ್ಟ ಹೋಮದಂತಾಗಿದೇ ಎಂದು ಹೇಳಿದರು ತಪ್ಪಾಗಲಾರದು. ಏಕೆಂದರೆ ನೀರಿನಲ್ಲಿ  ಹೋಮವನ್ನು ಹಾಕಿದ ತಕ್ಷಣ ಅದು ನಮ್ಮ ಕಣ್ಣಿಂದನೆ ಮರೆಯಾಗಿ ಹೋಗುತ್ತದೆ. ಹಾಗೆಯೇ ಇತ್ತೀಚಿನ ಮದುವೆಗಳು ಮದುವೆ ಮಂಟಪದಲ್ಲಿಯೇ ಚಿಕ್ಕ-ಪುಟ್ಟ ಕಾರಣಕ್ಕಾಗಿ ಮುರಿದು ಬಿದ್ದು ನಮ್ಮ ಕಣ್ಣ ಮುಂದೆ ಇದ್ದ ಅ ಸುಂದರ ಕ್ಷಣವೇ ಮಾಯವಾಗಿ ಹೋಗುತ್ತದೆ.

ಈಗಂತೂ ಸಾಮಾಜಿಕ ಮಾಧ್ಯಮದಲ್ಲಿ (Social Media) ಈ ಮದುವೆಗಳಲ್ಲಿ ಆಗುವ ರಂಪಾಟಗಳ ಗಲಾಟೆಯ ವಿಡಿಯೋಗಳು (Viral Video) ತುಂಬಾನೇ ಹರಿದಾಡುತ್ತಿವೆ. ಅದೇ ರೀತಿ ಚೀನಾದಲ್ಲಿ ನಡೆದ ಈ ಒಂದು ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ ಅದೇನಪ್ಪ ಅಂದ್ರೆ, ಆರತಕ್ಷತೆಯಲ್ಲಿಯೇ ಮುರಿದು ಬಿದ್ದಂತ ವಿವಾಹ. ಅಷ್ಟಕ್ಕೂ ಮದುವೆ ಮುರಿದು ಬೀಳುವುದಕ್ಕೆ ಕಾರಣ ಏನು ಇರಬಹುದು ನೋಡಿ.

ಚೀನಾದಲ್ಲಿ(China) ನಡೆದ ಒಂದು ಮದುವೆ ಆರತಕ್ಷತೆಯ ಸಮಯದಲ್ಲಿಯೇ ಮುರಿದು ಬಿದ್ದಿದೆ ನೋಡಿ. ವರನು ಆರತಕ್ಷತೆಯ ಸಮಯದಲ್ಲಿ ವಧುವು(bried) ತನ್ನ ಅತ್ತೆ ಮಗನ ಜೊತೆ ಅಂದರೆ ಬಾವನೊಂದಿಗೆ ಹೊಂದಿರುವ ಸಂಬಂಧವನ್ನು ವರನ ಕುಟುಂಬ ಮತ್ತು ಮದುವೆಗೆ ಬಂದಿದ್ದ ಅತಿಥಿಗಳ ನಡುವೆ ಈ ಮಾತಿನ ಚಕಮಕಿ ನಡೆದಾಗ ಈ ಜೋಡಿಯ ಮದುವೆ ಕೆಲವು ಗಂಟೆಗಳ ಕಾಲವೂ ಸಹ ಉಳಿಯಲಿಲ್ಲ ಅಂತ ಹೇಳಬಹುದು.

https://twitter.com/lvmaoshetuite/status/1210542816079646720?ref_src=twsrc%5Etfw%7Ctwcamp%5Etweetembed%7Ctwterm%5E1210542816079646720%7Ctwgr%5E4e250d16ce82d261c3fe1fa918ffd2e65d770930%7Ctwcon%5Es1_c10&ref_url=https%3A%2F%2Fm.dailyhunt.in%2Fnews%2Findia%2Fkannada%2Fnews18kannada-epaper-dhdc999e7569ab4e0f872aed7cd3350cfb%2Fviralvideoaaratakshateyallivadhuvinabannakalachidhavaravedikeyalliyedishumdishunvidiyonodi-newsid-n489313712

ಇನ್ನು ಕೆಲವೇ ಕ್ಷಣಗಳಲ್ಲಿ ಈ ಜೋಡಿಗಳು ಗಂಡ ಹೆಂಡತಿ(husband and wife) ಆಗುವ ಸಂದರ್ಭದಲ್ಲಿ ವಧು ತನ್ನ ಭಾವನ ಜೊತೆ ಹೊಂದಿದ್ದ ಸಂಬಂಧದ ಬಗ್ಗೆ ವಿಡಿಯೋ ಒಂದನ್ನು ಎಲ್ಲರ ಮುಂದೆ ಮದುವೆ ಮಂಟಪದಲ್ಲಿ ಪ್ಲೇ(play) ಮಾಡಿದಾಗ ನಡೆಯುತ್ತಿರುವ ಮದುವೆಯ ವರನ ಕಡೆಯವರು ಈ ವಿಡಿಯೋವನ್ನು ನೋಡಿ ಬಹಳಷ್ಟು ಆಘಾತಕ್ಕೆ ಒಳಗಾಗಿದ್ದಾರೆ. ಹಾಗಾಗಿ ಈ ಮದುವೆ ಕೆಲವೇ ಗಂಟೆಗಳಲ್ಲಿ ನಿಲ್ಲಲು ಕಾರಣವಾಗಿದೆ ಎಂದು ಭಾವಿಸಿದ್ದಾರೆ ಆದರೆ ಅದರ ಜೊತೆಗೆ ಇನ್ನೂ ಒಂದು ವಿಷಯ ಇದೆ ನೋಡು.

ವರ ದೊಡ್ಡ ರೀತಿಯ ತಪ್ಪು ಮಾಡಿದ ಹಾಗೆಯೇ ವಧುವಿನ ಬಾಳು ಹಾಳಾಯಿತು ಎಂದು ಎಲ್ಲಾ ಬಂದ ಅತಿಥಿಗಳು ಭಾವಿಸಿದ್ದರು. ಆದರೆ ಆ ಒಂದು ಆಘಾತದ ಜೊತೆಗೆ ಇನ್ನೊಂದು ಆಘಾತ ಮದುವೆ ಮಂಟಪದಲ್ಲೇ ಕಾದಿದೆ ನೋಡಿ. ಅದೇನಪ್ಪಾ ಅಂದ್ರೆ

ಗಂಡನ ಬಾವನೊಂದಿಗೆ ವಧು ಸಂಬಂಧವನ್ನು ಹೊಂದಿದ್ದಳು. “ವರನು ತನ್ನ ಗರ್ಭಿಣಿ ಸಹೋದರಿಯ (sister) ಗಂಡನೊಂದಿಗೆ ತನ್ನ ಹೆಂಡತಿ ಸಂಬಂಧ ಹೊಂದಿರುವ ವಿಡಿಯೋವನ್ನು ಎಲ್ಲರ ಮುಂದೆ ದೊಡ್ಡ ಸ್ಕ್ರೀನ್ ನಲ್ಲಿ ಪ್ಲೇ ಮಾಡಿ ತೋರಿಸಿದ್ದಾನೆ”

ರಿಸೆಪ್ಷನ್ ಹಾಲ್ (reception hall) ನಲ್ಲಿರುವಂತಹ ಅತಿಥಿಗಳು ಈ ವಿಷಯ ತಿಳಿದು ತುಂಬಾನೇ ಆಘಾತಕ್ಕೊಳಗಾಗಿದ್ದಾರೆ ಮತ್ತು ಈ ವಿಡಿಯೋವನ್ನು ನೋಡುತ್ತಿದ್ದಂತೆ ಬಹಳಷ್ಟು ಭಯಭೀತರಾಗಿದ್ದಾರೆ. ಏನಾಗುತ್ತಿದೆ ಎಂಬ ವಿಷಯ ಯಾರಿಗೂ ತಿಳಿಯದೆ ಇದ್ದರೂ ವಧು ಈ ವಿಷಯದ ಬಗ್ಗೆ ಬಹಳಷ್ಟು ಬೇಗನೆ ಅರಿತುಕೊಂಡಳು.

ಅವಳು ತನ್ನ ಮದುವೆಯ ಹೂಗುಚ್ಛವನ್ನು(flower) ವರನ ಮೇಲೆ ಎಸೆಯುವುದನ್ನು ಈ ವೀಡಿಯೋದಲ್ಲಿ ನಾವು ನೋಡಬಹುದು. ಅಷ್ಟೇ ಅಲ್ಲದೆ ವರನು ಸಹ ಆಕೆಯ ಮೇಲೆ ಜೋರಾಗಿ ಕೂಗುವುದನ್ನು ಕೇಳಬಹುದು. ವರನು ವಧುವಿಗೆ “ನನಗೆ ಇದರ ಬಗ್ಗೆ ತಿಳಿದಿಲ್ಲ ಅಂತ ನೀವು ಭಾವಿಸಿದ್ದೀರಾ?” ಅಂತ ಮುಖಕ್ಕೆ ತಿರುಗೇಟು ನೀಡುವ ರೀತಿ ಕೇಳಿಯೇ ಬಿಟ್ಟಿದ್ದಾರೆ.

2019ರಲ್ಲಿ ಇದು ಸಾಮಾಜಿಕ ಜಾಲತಾಣದಲ್ಲಿ(social media) ವೈರಲ್(viral) ಆದಾಗ ನೆಟ್ಟಿಗರು ಇದರ ಬಗ್ಗೆ ಬಹಳಷ್ಟು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಹಾಗೆಯೇ ವರನ ಬಗ್ಗೆ ಸಹನೆಯನ್ನು ತೋರಿದ್ದಾರೆ ಇನ್ನೂ ಕೆಲವರು ಇಷ್ಟು ಗೊತ್ತಿದ್ದವನು ಏಕೆ ಮದುವೆಗೆ ಒಪ್ಪಿಕೊಂಡರು ಎಂಬ ಪ್ರಶ್ನೆಯನ್ನು(question) ಹಾಕಿದ್ದಾರೆ.

Leave A Reply

Your email address will not be published.