Home Interesting Women: ಈಕೆ 40 ನೇ ವಯಸ್ಸಿಗೆ 44 ಮಕ್ಕಳಿಗೆ ಜನ್ಮ ನೀಡಿದ್ದಾಳೆ ; ದೈತ್ಯ ಕುಟುಂಬ...

Women: ಈಕೆ 40 ನೇ ವಯಸ್ಸಿಗೆ 44 ಮಕ್ಕಳಿಗೆ ಜನ್ಮ ನೀಡಿದ್ದಾಳೆ ; ದೈತ್ಯ ಕುಟುಂಬ ಕಂಡು ದೂರ ಸರಿದ ಪತಿ!!

Women

Hindu neighbor gifts plot of land

Hindu neighbour gifts land to Muslim journalist

Women given birth to 44-children : ಇತ್ತೀಚೆಗೆ ಹೆಚ್ಚಾಗಿ ಮಹಿಳೆಯರಿಗೆ (women given birth to 44-children) ಒಂದೋ ಎರಡೋ ಮಕ್ಕಳಿರುತ್ತಾರೆ. ಆದರೆ, ಇಲ್ಲೊಬ್ಬ ಮಹಿಳೆಗೆ ಬರೋಬ್ಬರಿ 44 ಮಕ್ಕಳಿದ್ದಾರೆ. ಹೌದು, ಮರಿಯಮ್ ನಬಟಾಂಜಿ ಎಂಬ ಮಹಿಳೆ ತನ್ನ 40 ನೇ ವಯಸ್ಸಿಗೇ 44 ಮಕ್ಕಳನ್ನು ಹೊಂದಿದ್ದಾಳೆ. ಈಕೆ ಪೂರ್ವ ಆಫ್ರಿಕಾದ ಉಗಾಂಡಾದಿಂದ ಬಂದವರು ಎನ್ನಲಾಗಿದೆ.

ಮರಿಯಮ್ ಕೇವಲ 12 ವರ್ಷದವಳಿದ್ದಾಗ ಆಕೆಯ ಪೋಷಕರು ಅವಳಿಗೆ ಮದುವೆ (marriage) ಮಾಡಿದರು. ಈಕೆ 13 ವರ್ಷ ವಯಸ್ಸಿನವಳಾಗಿದ್ದಾಗ ಮೊದಲ ಅವಳಿಗಳಿಗೆ ತಾಯಿಯಾದಳು. ನಂತರ ಮರಿಯಮ್ 36 ವರ್ಷಕ್ಕೆ ಕಾಲಿಡುವ ಹೊತ್ತಿಗೆ 42 ಶಿಶುಗಳಿಗೆ (child) ಜನ್ಮ ನೀಡಿದ್ದಳು. ನಂತರ ಮತ್ತೆರಡು ಶಿಶುವಿಗೆ ಜನ್ಮ ನೀಡಿ, ಇದೀಗ 40 ನೇ ವಯಸ್ಸಿಗೆ ಆಕೆ 44 ಮಕ್ಕಳನ್ನು ಹೊಂದಿದ್ದಾಳೆ.

ಈಕೆ ಜನ್ಮ ನೀಡಿದ ನಾಲ್ಕು ಜೋಡಿ ಅವಳಿ, ಐದು ತ್ರಿವಳಿ ಮತ್ತು ಐದು ಮಕ್ಕಳಲ್ಲಿ ಆರು ಮಕ್ಕಳು ಸಾವನ್ನಪ್ಪಿದರು (death). ಅಲ್ಲದೆ, ಇಷ್ಟೊಂದು ಮಕ್ಕಳನ್ನು ಕಂಡು ಪತಿ ಆಕೆ ಮತ್ತು ಮಕ್ಕಳನ್ನು ತೊರೆದು ದೂರ ಸಾಗಿದನು. ಸದ್ಯ ಮರಿಯಮ್ 20 ಗಂಡು ಮತ್ತು 18 ಹುಡುಗಿಯರನ್ನು ಒಂಟಿಯಾಗಿ ಬೆಳೆಸುತ್ತಿದ್ದಾಳೆ.

ಈ ಬಗ್ಗೆ ಮರಿಯಮ್ ವೈದ್ಯರಲ್ಲಿ ಮಾತನಾಡಿದ್ದು, ವೈದ್ಯಕೀಯ ತಜ್ಞರು ಆಕೆಗೆ ಅಸಹಜವಾಗಿ ದೊಡ್ಡ ಅಂಡಾಶಯಗಳನ್ನು ಹೊಂದಿದ್ದು, ಇದು ಹೈಪರ್ ಓವ್ಯುಲೇಷನ್ ಎಂಬ ಸ್ಥಿತಿಗೆ ಕಾರಣವಾಯಿತು ಎಂದು ತಿಳಿಸಿದರು. ಇದಕ್ಕೆ ಗರ್ಭನಿರೋಧಕ ಮಾತ್ರೆಗಳು ಕೆಲಸ ಮಾಡುವುದಿಲ್ಲ ಮತ್ತು ತೀವ್ರ ಆರೋಗ್ಯ ಪರಿಸ್ಥಿತಿಗಳನ್ನು ಉಂಟುಮಾಡಬಹುದು ಎಂದು ಹೇಳಿದರು.