Money Seized at Punjalkatte : ಎಟಿಎಂ ವಾಹನದಲ್ಲಿ ದಾಖಲೆಯಿಲ್ಲದ 10 ಲಕ್ಷ ರೂ. ವಶ!

Money Seized at Punjalkatte : ಚುನಾವಣೆಯ(Election 2023) ಕಾವು ಎಲ್ಲೆಡೆ ರಂಗೇರಿದ್ದು ರಾಜಕೀಯ ಪಕ್ಷಗಳು ಜನರ ಮನವೊಲಿಸುವ ಪ್ರಯತ್ನದಲ್ಲಿ ತೊಡಗಿಸಿಕೊಂಡಿದ್ದಾರೆ. ರಾಜ್ಯ ವಿಧಾನಸಭಾ ಚುನಾವಣೆಯು ಮೇ 10 ರಂದು ನಿಗದಿಯಾಗಿದ್ದು, ಮೇ 13 ರಂದು ರಾಜಕೀಯ ಸಮರದ ಚುನಾವಣೆಯ ತೀರ್ಪು( Election Result) ಹೊರ ಬೀಳಲಿದೆ. ಈ ನಡುವೆ ಚುನಾವಣೆ ನೀತಿ ಸಂಹಿತೆ(Election Code Of conduct) ಜಾರಿಯಲ್ಲಿದ್ದು, ಎಟಿಎಂ ವಾಹನದಲ್ಲಿ ದಾಖಲೆಯಿಲ್ಲದ 10 ಲಕ್ಷ ರೂ. ವಶ ಮಾಡಿರುವ(Money Seized at Punjalkatte) ಪುಂಜಾಲಕಟ್ಟೆಯಲ್ಲಿ ನಡೆದಿದೆ.

ಇದೀಗ, ಮೊದಲ ಬಾರಿಗೆ ದೊಡ್ಡ ಮೊತ್ತವೊಂದನ್ನು ದಾಖಲೆಯಿಲ್ಲದೆ ಎಟಿಎಂ ವಾಹನದಲ್ಲಿ ಸಾಗಾಟ ಮಾಡಿರುವುದು ತಿಳಿದುಬಂದಿದೆ. ಈ ವೇಳೆ KA-53C 2542 ವಾಹನದಲ್ಲಿ ಸಮರ್ಪಕ ದಾಖಲೆಗಳಿಲ್ಲದೆ ಅವಧಿ ಮೀರಿದ 10 ಲಕ್ಷ ರೂ. ಮೊತ್ತವನ್ನು ರಾತ್ರಿ 10 ಗಂಟೆ ವೇಳೆಗೆ ಸಾಗಾಟ ಮಾಡುತ್ತಿದ್ದರು ಎನ್ನಲಾಗಿದೆ.

ಬೆಳ್ತಂಗಡಿ ತಾಲೂಕಿನ ಪೂಂಜಾಲಕಟ್ಟೆ ದಾಖಲೆ ರಹಿತ 10 ಲಕ್ಷ ರೂ. ಸಾಗಾಟ ಮಾಡುತ್ತಿದ್ದ ಎಟಿಎಂ ವಾಹನವನ್ನು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎ.10 ರಂದು ರಾತ್ರಿ 10 ಗಂಟೆಗೆ ವಶಕ್ಕೆ ಮಾಡಲಾಗಿದೆ. ಚುನಾವಣೆ ನೀತಿ ಸಂಹಿತೆ ಜಾರಿಯಿರುವ ಹಿನ್ನಲೆ, ಪುಂಜಾಲಕಟ್ಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕರ್ತವ್ಯ ದಲ್ಲಿದ್ದ ಫ್ಲೈಯಿಂಗ್ ಸ್ಕ್ವಾಡ್ ಕಾರ್ತಿ ಮಧುಬಾಬು ಅವರ ತಂಡ ಕುಕ್ಕಳ ಗ್ರಾಮದ ಬಸವೇಶ್ವರ ದೇವಸ್ಥಾನದ ಬಳಿ ವಾಹನ ತಪಾಸಣೆ ಮಾಡಲಾಗಿದೆ. ಈ ಪ್ರಕರಣದ ಕುರಿತಂತೆ ಹಣ ಹಾಗೂ ವಾಹನವನ್ನು ವಶಕ್ಕೆ ಪಡೆದು ಮುಂದಿನ ಕ್ರಮಕ್ಕೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

 

ಇದನ್ನು ಓದಿ : Guinness World Records : TV Remote ಗಿಂತಲೂ ಸಣ್ಣದಾದ ನಾಯಿ ಇದು! ಗಿನ್ನೆಸ್‌ ದಾಖಲೆಯ ಪುಟ ಸೇರಿತು ಈ ಪುಟ್ಟ ಶ್ವಾನ!

3 Comments
  1. Thanks for sharing. I read many of your blog posts, cool, your blog is very good.

  2. Bonus Referal Binance says

    Thanks for sharing. I read many of your blog posts, cool, your blog is very good.

  3. Your article helped me a lot, is there any more related content? Thanks!

Leave A Reply

Your email address will not be published.