Birth and Death Certificate : ಇನ್ಮುಂದೆ ಮನೆ ಬಾಗಿಲಿಗೇ ರವಾನೆಯಾಗಲಿದೆ ಜನನ-ಮರಣ ಪ್ರಮಾಣ ಪತ್ರ!

Birth and Death Certificate : ಅಂಚೆ ಇಲಾಖೆಯು ಹಲವು ಸೌಲಭ್ಯಗಳನ್ನು ಗ್ರಾಹಕರಿಗೆ ಒದಗಿಸುವ ಮೂಲಕ ಸಹಾಯವಾಗುತ್ತಾ ಬಂದಿದೆ. ಇದೀಗ ಇಲಾಖೆಯು ಕಂದಾಯ ಇಲಾಖೆಯ ಜೊತೆ ಸೇರಿ ಹೊಸ ನಿರ್ಧಾರಕ್ಕೆ ಬಂದಿದ್ದು, ಈ ಮೂಲಕ ಜನತೆಗೆ ಸಿಹಿಸುದ್ದಿಯನ್ನು ನೀಡಿದೆ.

ಅದೆಷ್ಟೋ ಅಗತ್ಯ ದಾಖಲೆಗಳನ್ನು ಪಡೆಯಲು ಜನರು ಆ ಇಲಾಖೆ, ಈ ಇಲಾಖೆ ಎಂದು ಸುತ್ತಾಡುತ್ತಾ ಇರಬೇಕಾಗಿದ್ದು. ಇದನ್ನು ಮನವರಿಕೆ ಮಾಡಿಕೊಂಡ ಕಂದಾಯ ಇಲಾಖೆ ಅಂಚೆ ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಹೌದು. ಇಲಾಖೆಯ ಒಪ್ಪಂದದಂತೆ ಇನ್ಮುಂದೆ ಮನೆಬಾಗಿಲಿಗೇ ಜನನ, (Birth and Death Certificate )ಮರಣ ಪತ್ರಗಳು ಬರಲಿವೆ.

ಈ ಕುರಿತು ಉಡುಪಿ ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದ್ದು, ಜನನ ಮತ್ತು ಮರಣ ಪ್ರಮಾಣ ಪತ್ರಗಳನ್ನು ಅಂಚೆ ಸಿಬ್ಬಂದಿಯೇ ತೆರಳಿ ಸ್ಪೀಡ್ ಪೋಸ್ಟ್ ಮೂಲಕ ಮನೆ ಬಾಗಿಲಿಗೆ ತಲುಪಿಸಲಿದ್ದಾರೆ. ಪ್ರಮಾಣ ಪತ್ರಗಳನ್ನು ಆಯಾ ಸಂಬಂಧಪಟ್ಟ ನಾಡ ಕಚೇರಿ, ತಾಲೂಕು ಕಚೇರಿ, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆಗಳಿಗೆ ಅಂಚೆ ಸಿಬ್ಬಂದಿಯೇ ತೆರಳಿ, ಅವುಗಳನ್ನು ಸ್ಪೀಡ್ ಪೋಸ್ಟ್ ಮೂಲಕ ಮನೆ ಬಾಗಿಲಿಗೆ ತಲುಪಿಸಲಿದ್ದಾರೆ. ಜನನ ಮತ್ತು ಮರಣ ಪ್ರಮಾಣ ಪತ್ರಗಳಿಗೆ ಅರ್ಜಿ ಸಲ್ಲಿಸಿದ ಕೆಲವೇ ದಿನಗಳಲ್ಲಿ ಪ್ರಮಾಣ ಪತ್ರಗಳು ಸಿದ್ದವಾಗುತ್ತವೆ.

ಜನನ ಮರಣ ಪ್ರಮಾಣ ಪತ್ರ ಪಡೆಯಲು ಸೂಕ್ತ ವಿಳಾಸ ನಮೂದಿಸಿ, ಸೇವಾ ಶುಲ್ಕ ಪಾವತಿಸಿ, ಅರ್ಜಿ ಸಲ್ಲಿಸಿದ್ದಲ್ಲಿ, ಸ್ಪೀಡ್ ಪೋಸ್ಟ್ ಮೂಲಕ ಅರ್ಜಿದಾರರ ಮನೆ ಬಾಗಿಲಿಗೆ ರವಾನಿಸುವ ಪ್ರಕ್ರಿಯೆಯನ್ನು ಕೈಗೊಳ್ಳಲಾಗುತ್ತಿದೆ. ಸಾರ್ವಜನಿಕರು ಈ ಸೇವೆಯ ಸದುಪಯೋಗ ಪಡೆದುಕೊಳ್ಳುವಂತೆ ಇಲಾಖೆ ಮನವಿ ಮಾಡಿದೆ.

 

ಇದನ್ನು ಓದಿ : Electric Car: ದೇಶದ ಅಗ್ಗದ ಎಲೆಕ್ಟ್ರಿಕ್ suv ಕಾರ್ ಯಾವುದು ಗೊತ್ತಾ? 

2 Comments
  1. nimabi says

    Thank you very much for sharing, I learned a lot from your article. Very cool. Thanks. nimabi

  2. rrinimabi says

    Thank you very much for sharing, I learned a lot from your article. Very cool. Thanks.

Leave A Reply

Your email address will not be published.