Home Interesting Summer Hacks : ನಿಮ್ಮ ಮನೆ ಫ್ಯಾನ್ ನಿಂದ ಬಿಸಿ-ಬಿಸಿ ಗಾಳಿ ಬರುತ್ತಿದೆಯೇ? : ಜಸ್ಟ್...

Summer Hacks : ನಿಮ್ಮ ಮನೆ ಫ್ಯಾನ್ ನಿಂದ ಬಿಸಿ-ಬಿಸಿ ಗಾಳಿ ಬರುತ್ತಿದೆಯೇ? : ಜಸ್ಟ್ 70 ರೂಪಾಯಿ ಮೂಲಕ ಆನಂದಿಸಿ ತಂಪಾದ ಗಾಳಿ!

Summer Hacks

Hindu neighbor gifts plot of land

Hindu neighbour gifts land to Muslim journalist

Summer Hacks :ಈ ಉರಿ ಬಿಸಿಲಿಗೆ ಫ್ಯಾನ್ ಇಲ್ಲದೆ ಇರಲು ಸಾಧ್ಯವೇ ಇಲ್ಲ. ಹೀಗಾಗಿ ಹೆಚ್ಚಿನವರು ಫ್ಯಾನ್ (Fan) ನ ತಣ್ಣನೆಯ ಗಾಳಿಯ ಬಳಿಯೇ ಕೂರಲು ಬಯಸುತ್ತಾರೆ. ಆದ್ರೆ, ಇಂದಿನ ದುಬಾರಿ ದುನಿಯಾದಲ್ಲಿ ಕೂಲರ್ ಗಳನ್ನು ಖರೀದಿಸುವಷ್ಟು ಹಣ ಇರುವುದಿಲ್ಲ. ಹೀಗಾಗಿ ಉತ್ತಮವಾದ ತಂಪಾದ ಗಾಳಿ ಬೀಸುವ ಫ್ಯಾನ್(Summer Hacks) ಅನ್ನು ಖರೀದಿಸಲು ಬಯಸುತ್ತಾರೆ.

ಹೊಸ ಫ್ಯಾನ್ ಅಲ್ಲದೆ, ಹಳೆಯ ಫ್ಯಾನ್ ಗಾಳಿ ತಣ್ಣಗೆ ಬರಬೇಕು ಎಂದರೆ ಜಸ್ಟ್ 70-80 ರೂಪಾಯಿ ಖರ್ಚು ಮಾಡಿದ್ರು ಸಾಕಾಗುತ್ತದೆ. ಹೌದು. ಬೇಸಿಗೆಯಲ್ಲಿ ಫ್ಯಾನ್ ವೇಗವಾಗಿ ಓಡದಿದ್ದರೆ, ಇದಕ್ಕಾಗಿಯೇ ಇದೆ ಕೆಲವೊಂದು ಐಡಿಯಾಗಳು. ಫ್ಯಾನ್ ಗಳು ಕೂಲಾದ ಗಾಳಿ ಯಾಕೆ ನೀಡುವುದಿಲ್ಲ ಎಂಬುದಕ್ಕೆ ಕಾರಣ ಇಲ್ಲಿದೆ ನೋಡಿ.

ನಿಮ್ಮ ಫ್ಯಾನ್ ನಿಧಾನಕ್ಕೆ ಓಡಲು ಅಥವಾ ಬಿಸಿ ಗಾಳಿ ಕೊಡಲು ಪ್ರಮುಖ ಕಾರಣವೆಂದರೆ ಫ್ಯಾನ್ ಬ್ಲೇಡ್ ಗಳು ಧೂಳಿನಿಂದ ತುಂಬಿರುವುದು. ಇದು ಫ್ಯಾನ್ ನಿಂದ ಉತ್ಪತ್ತಿಯಾಗುವ ಗಾಳಿಯ ಪ್ರಸರಣದ ಮೇಲೆ ಗಂಭೀರವಾಗಿ ಪರಿಣಾಮ ಬೀರುತ್ತದೆ. ಫ್ಯಾನಿನ ರೆಕ್ಕೆಗಳನ್ನು ಸ್ವಚ್ಛಗೊಳಿಸುವ ಮೊದಲು ಫ್ಯಾನ್ ಅನ್ನು ಸ್ವಿಚ್ ಆಫ್ ಮಾಡಬೇಕು. ಫ್ಯಾನ್ ಅನ್ನು ಸ್ವಿಚ್ ಆಫ್ ಮಾಡಿದ ನಂತರ, ಫ್ಯಾನ್ ಬ್ಲೇಡ್ ಗಳನ್ನು ಮೊದಲು ಒಣ ಬಟ್ಟೆಯಿಂದ ಮತ್ತು ನಂತರ ಒದ್ದೆಯಾದ ಬಟ್ಟೆಯಿಂದ ಸ್ವಚ್ಛಗೊಳಿಸಬೇಕು.

ನೀವು ಮೊದಲು ಒದ್ದೆಯಾದ ಬಟ್ಟೆಯನ್ನು ಬಳಸಿದರೆ, ಎಲ್ಲಾ ಧೂಳಿನ ಕಣಗಳು ಫ್ಯಾನಿನ ರೆಕ್ಕೆಗಳಿಗೆ ಅಂಟಿಕೊಳ್ಳುತ್ತವೆ. ಫ್ಯಾನ್ ಸರಿಯಾಗಿ ಕ್ಲೀನ್ ಆಗಲ್ಲ. ಹೀಗಾಗಿ ಒಣ ಬಟ್ಟೆಯಿಂದ ಸ್ವಚ್ಛಗೊಳಿಸುವುದು ಉತ್ತಮ. ಈ ಟ್ರಿಕ್ಸ್ ಫಾಲೋ ಮಾಡಿದ ಬಳಿಕವೂ ಫ್ಯಾನ್ ಜೋರಾಗಿ ಓಡದಿದ್ದರೆ, ಕೆಪಾಸಿಟರ್ ಅನ್ನು ಹೆಚ್ಚಿಸುವ ಮೂಲಕ ನೀವು ಫ್ಯಾನ್ ವೇಗವನ್ನು ಗಮನಿಸಬಹುದು. ಆಗಲೂ ತಣ್ಣಗೆ ಗಾಳಿ ಬರದಿದ್ದರೆ ಕೇವಲ 70-80 ರೂ. ವೆಚ್ಚದ ಹೊಸ ಕೆಪಾಸಿಟರ್ ಹಾಕುವುದು ಉತ್ತಮ. ಈ ರೀತಿ ಕೆಪಾಸಿಟರ್ ಅನ್ನು ಬದಲಾಯಿಸುವ ಮೂಲಕ ಫ್ಯಾನ್ ವೇಗವನ್ನು ಹೆಚ್ಚಿಸಬಹುದು.

ಚಳಿಗಾಲದಲ್ಲಿ ಅನೇಕ ದಿನಗಳವರೆಗೆ ಫ್ಯಾನ್ ಆನ್ ಆಗಿರುವುದಿಲ್ಲ. ಇದರಿಂದ ಬೇಸಿಗೆಯಲ್ಲಿ ಅದನ್ನು ಓಡಿಸಿದಾಗ, ಅದರ ವೇಗವು ಕಡಿಮೆಯಾಗಿದೆ ಎಂದುಕೊಳ್ಳುತ್ತಾರೆ. ಆದ್ರೆ ಅದಕ್ಕೆ ನಿಜವಾದ ಕಾರಣ ಧೂಳು ಹಿಡಿದಿರುವುದು. ಹೀಗಾಗಿ ಮೇಲೆ ತಿಳಿಸಿದ ಟ್ರಿಕ್ಸ್ ಫಾಲೋ ಮಾಡಿ ತಂಪಾದ ಗಾಳಿಯನ್ನು ಪಡೆದುಕೊಳ್ಳುವುದೇ ಉತ್ತಮ.