Home Social IFS officer post viral : ‘ಬೇಟೆಗಾರನೇ ಬೇಟೆಯಾದಾಗ…’ ವೈರಲ್ ಆಯ್ತು IFS ಅಧಿಕಾರಿಯ ಪೋಸ್ಟ್​!...

IFS officer post viral : ‘ಬೇಟೆಗಾರನೇ ಬೇಟೆಯಾದಾಗ…’ ವೈರಲ್ ಆಯ್ತು IFS ಅಧಿಕಾರಿಯ ಪೋಸ್ಟ್​! ನೋಡಿದ್ರೆ ನಿಜಕ್ಕೂ ಗಾಬರಿಯಾಗುತ್ತೆ!

IFS officer post viral

Hindu neighbor gifts plot of land

Hindu neighbour gifts land to Muslim journalist

IFS officer post viral : ಬೇಟೆಗಾರ ಬಂದ, ರಣ ಬೇಟೆಗಾರ ಬಂದ, ಬೇಟೆಗಾರನನ್ನೇ ಬೇಟೆಯಾಡೋನು ಬಂದ ಹೀಗೆ ಖಡಕ್ ಆದ ಹೇಳಿಕೆಗಳನ್ನು ನಾವು ಅನೇಕ ಸಿನಿಮಾಗಳಲ್ಲಿ ನೋಡಿರ್ತೇವೆ. ಹೀರೋ ಗಳ ಎಂಟ್ರಿಗೋ, ಅವರನ್ನು ಹೊಗಳಲೋ ಈ ಡೈಲಾಗ್ ಗಳನ್ನು ಬಳಸುತ್ತಾರೆ. ಆದರೆ ಇದು ಅರಣ್ಯದಲ್ಲಿ ನಿಜವಾದರೆ ಹೇಗಿರಬಹುದು? ಸದ್ಯ ಇಂತದೇ ಒಂದು ಹೇಳಿಕೆ ಇದೀಗ ಟ್ವಿಟರ್ ನಲ್ಲಿ ಭಾರೀ ಸದ್ಧು ಮಾಡ್ತಿದೆ. ಆ ಶೀರ್ಷಿಕೆಯ ಪೋಸ್ಟರ್ ಕೂಡ ನೋಡುಗರಿಗೆ ಭಯ ಹುಟ್ಟಿಸುವಂತಿದೆ.

ಹೌದು, ಐಎಫ್​ಎಸ್​(IFS) ಅಧಿಕಾರಿಯೊಬ್ಬರು ಅಪ್ಲೋಡ್ ಮಾಡಿರುವ ‘ಬೇಟೆಗಾರನೇ ಬೇಟೆಯಾದಾಗ…’ ಎಂಬಂತಹ ಶೀರ್ಷಿಕೆಯ ಪೋಸ್ಟರ್ (IFS officer post viral) ಒಂದು ಟ್ವಿಟರ್ ನಲ್ಲಿ ಸಖತ್ ಸದ್ಧು ಮಾಡ್ತಿದ್ದು, ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಆ ಪೋಸ್ಟ್ ನಲ್ಲಿನ ವಿಡಿಯೋ ಎಂತವರನ್ನು ಒಮ್ಮೆ ಗಾಬರಿಗೊಳಿಸುತ್ತದೆ. ಯಾಕೆಂದರೆ ಚಿರತೆಯಂತಹ ಉತ್ತಮ ಬೇಟೆಗಾರ ಪ್ರಾಣಿಯನ್ನು ಹುಲಿಯೊಂದು ತಿನ್ನುತ್ತಿರುವ ದೃಶ್ಯವನ್ನು ನಾವಲ್ಲಿ ಕಾಣಬಹುದು!

ಅಂದಹಾಗೆ ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಪರ್ವೀನ್ ಕಸ್ವಾನ್, ಶನಿವಾರ ರಾಜಸ್ಥಾನದ ರಣಥಂಬೋರ್ ರಾಷ್ಟ್ರೀಯ ಉದ್ಯಾನವನದಲ್ಲಿ ಹುಲಿಯೊಂದು ಚಿರತೆಯನ್ನು ತಿನ್ನುತ್ತಿರುವ ಚಿತ್ರವನ್ನು ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವರದಿಗಳ ಪ್ರಕಾರ ಚಿರತೆ ಮತ್ತು ಗಂಡು ಹುಲಿ T-101 ನಡುವೆ ಸೆಣೆಸಾಟ ನಡೆದಿತ್ತು. ಅದರಲ್ಲಿ ಹುಲಿ ಗೆಲುವಿನ ನಗೆ ಬೀರಿದೆ. ಅಧಿಕಾರಿ ಈ ಫೋಟೊಗಳನ್ನು ಪೋಸ್ಟ್ ಮಾಡಿದ ನಂತರ ಟ್ವೀಟ್ ವೈರಲ್ ಆಗಿದೆ.

ಈ ಪೋಸ್ಟರ್ ಗೆ ಬಗೆ ಬಗೆಯಾಗಿ ಕಾಮೆಂಟ್​ ಬಂದಿವೆ. ಒಬ್ಬರು ಪ್ರಾಣಿಗಳ ಈ ರೀತಿಯ ನಡವಳಿಕೆ ಬಗ್ಗೆ ಗೊತ್ತೇ ಇರಲಿಲ್ಲ ಎಂದು ಬರೆದುಕೊಂಡಿದ್ದಾರೆ. ಇನ್ನೊಬ್ಬರು ಹೆಚ್ಚಿನ ಪ್ರಾಣಿಗಳನ್ನು ಬೇಟೆ ಆಡುವುದಕ್ಕಾಗಿ ಕಾಂಪಿಟೇಶನ್​ ಅನ್ನೇ ಈ ಹುಲಿ ಮುಗಿಸಿದೆ ಎಂದು ಬೇರೆ ರೀತಿಯೇ ಯೋಚಿಸಿ ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಹುಲಿ ಯಾವತ್ತಿಗೂ ಹುಲಿಯೇ ಎಂದು ಹೇಳಿದ್ದಾರೆ. ಇನ್ನು ಹಲವು ಕಂಮೆಂಟ್ಗಳು ಬಂದಿದ್ದು, ಎಲ್ಲವೂ ಹುಲಿಯ ಘನತೆಯನ್ನು ಹೆಚ್ಚಿಸುವವುಗಳೇ ಆಗಿವೆ.

https://twitter.com/ParveenKaswan/status/1642003180392415233?t=bGM-o-EzEoKVzlmRoBEv5Q&s=19