Kim Jong-un : ನಿಲ್ಲದ ಕಿಮ್ ಜಾಂಗ್ ಕ್ರೌರ್ಯ, ಅಂಗವಿಕಲರಿಗೆ ವಿಷವುಣಿಸಿ, ಗರ್ಭಿಣಿ, ಸಲಿಂಗಿಗಳಿಗೆ ನೇಣಿಗೇರಿಸುತ್ತಾನೆ ಈ ಸರ್ವಾಧಿಕಾರಿ, ಯಾಕೆ ಗೊತ್ತಾ?
Kim Jong-un : ಉತ್ತರ ಕೊರಿಯಾದಲ್ಲಿ(North Korea) ಎಲ್ಲರಿಗೂ ತಿಳಿದಂತೆ ಅಲ್ಲಿನ ಸರ್ವಾಧಿಕಾರಿ ಕಿಮ್ ಜಾಂಗ್ ಉನ್(Kim Jong-un) ಹೇಳಿದ್ದೆ ವೇದವಾಕ್ಯವಾಗಿದೆ. ಒಂದು ವೇಳೆ ಆತನ ಮಾತನ್ನು ಪಾಲಿಸದಿದ್ದರೆ ಯಾರಿಗೂ ಉಳಿಗಾಲವಿಲ್ಲ. ಆತನ ಹಲವು ನಿರ್ಧಾರಗಳು ಇಡೀ ಜಗತ್ತನ್ನೇ ಅಚ್ಚರಿಗೆ ಉಂಟುಮಾಡಿವೆ. ಆದರೂ ಆತ ವಿಚಿತ್ರ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ಇನ್ನೂ ಬಿಟ್ಟಿಲ್ಲ. ಮತ್ತೀಗ ಅಂತದೇ ಕೆಲವು ವಿಚಿತ್ರ ನಿಯಮಗಳನ್ನು ಹೊರಡಿಸೋ ಮೂಲಕ ಜಾಂಗ್ ಸುದ್ಧಿಯಾಗುತ್ತಿದ್ದು ಉತ್ತರಕೊರಿಯಾದಲ್ಲಿ ವ್ಯಾಪಕವಾಗಿರುವ ಮಾನವ ಹಕ್ಕುಗಳ ಉಲ್ಲಂಘನೆಯನ್ನು ದಕ್ಷಿಣ ಕೊರಿಯಾ(South Korea) ವರದಿ ಮಾಡಿದೆ.
ಹೌದು, ದಕ್ಷಿಣ ಕೊರಿಯಾದ ಏಕೀಕರಣ ಸಚಿವಾಲಯವು ಆಘಾತಕಾರಿ ವರದಿಯನ್ನು ನೀಡಿದ್ದು, 450 ಪುಟಗಳ ಈ ವರದಿಯಲ್ಲಿ ಉತ್ತರ ಕೊರಿಯಾದಲ್ಲಿ ಸರ್ವಾಧಿಕಾರಿ(dictatorship) ಕಿಮ್ ಜಾಂಗ್ ಉನ್ ಸೂಚನೆಯ ಅನ್ವಯ ಮಕ್ಕಳು ಹಾಗೂ ಗರ್ಭಿಣಿಯರನ್ನು ಅಮಾನುಷವಾಗಿ ಗಲ್ಲಿಗೇರಿಸಲಾಗುತ್ತಿದೆ. ಅಂಗವಿಕಲರಾದವರಿಗೆ ಬಲವಂತವಾಗಿ ಕ್ರಿಮಿನಾಶಕ ನೀಡಿ ಸಾಯಿಸುವ ಮೂಲಕ ಭಯಾನಕ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಮಾಡಿದೆ ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ.
ಇತ್ತೀಚೆಗೆ ಮಾನವ ಪ್ರಯೋಗಗಳಿಗೆ ಬಳಸಿಕೊಳ್ಳಲಾದ ಆರು ತಿಂಗಳ ಗರ್ಭಿಣಿ ತಾಯಿಯನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಲಾಗಿದೆ. ಅದರೊಂದಿಗೆ ‘ಕುಬ್ಜರ ಪಟ್ಟಿ’ಯಲ್ಲಿರುವ ಮಹಿಳೆಯರನ್ನು ಗರ್ಭಕಂಠಕ್ಕೆ ಒಳಗಾಗುವಂತೆ ಒತ್ತಾಯಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆಸ್ಪತ್ರೆಯಲ್ಲಿರುವ ನರ್ಸ್ಗಳಿಗೆ ಕುಬ್ಜರ ಪಟ್ಟಿಯನ್ನು ಸಿದ್ಧ ಮಾಡುವಂತೆ ಸೂಚಿಸಲಾಗಿದ್ದು, ಕುಬ್ಜತೆ ಹೊಂದಿರುವ ಮಹಿಳೆಯ ಮೇಲೆ ಗರ್ಭಕಂಠವನ್ನು ನಡೆಸಲಾಗಿದೆ. ಅದಲ್ಲದೆ, ಚಿತ್ರವಿಚಿತ್ರ ಮಾನವ ಪ್ರಯೋಗಗಳಿಗೆ ಒಳಗಾದ ಮಹಿಳೆಯರನ್ನು ಗಲ್ಲಿಗೇರಿಸಲಾಗಿದ್ದು, ಈ ಸಾಕ್ಷ್ಯ ಹೊರಗೆ ಬರದಂತೆ ತಡೆಹಿಡಿಯಲಾಗಿದೆಯಂತೆ!
ಅಲ್ಲದೆ ಈ ಆರು ತಿಂಗಳ ಗರ್ಭಣಿಯನ್ನು ಸಾವರ್ಜನಿಕವಾಗಿ ನೇಣುಗಂಬಕ್ಕೇರಿಸಲು ಕಾರಣವವೂ ಇದೆ. ಈ ಗರ್ಭಿಣಿಯು ದಿವಂಗತ ಕಿಮ್ ಇಲ್-ಸಂಗ್ ಅವರ ಭಾವ ಚಿತ್ರದ ಮುಂದೆ ಡ್ಯಾನ್ಸ್ ಮಾಡುತ್ತಿದ್ದಳಂತೆ. ಈ ವಿಡಿಯೋ ವೈರಲ್ ಆದ ಕಾರಣಕ್ಕೆ ಆಕೆಯನ್ನು ಹುಡುಕಿ ಸಾರ್ವಜನಿಕವಾಗಿ ಗಲ್ಲಿಗೇರಿಸಲಾಗಿದೆ.
ಇದಿಷ್ಟೇ ಅಲ್ಲದೆ ದಕ್ಷಿಣ ಕೊರಿಯಾದ ಏಕೀಕರಣ ರಾಜ್ಯಗಳ ಸಚಿವಾಲಯದ ವರದಿಯಲ್ಲಿ ಇನ್ನೂ ಭಯಾನಕ ವಿವರಗಳು ದಾಖಲಾಗಿವೆ. ಜಗತ್ತಿನಲ್ಲಿ ಏಕಾಂಗಿಯಾಗಿರುವ ಈ ರಾಷ್ಟ್ರವು ಸಲಿಂಗಕಾಮಿ ಹಾಗೂ ಅವರ ಧರ್ಮಕ್ಕಾಗಿ ಮತ್ತು ದೇಶದಿಂದ ಪಲಾಯನ ಮಾಡಲು ಪ್ರಯತ್ನಿಸಿದ ನಾಗರಿಕರಿಗೆ ಮರಣದಂಡನೆ ಶಿಕ್ಷೆ ಜಾರಿ ಮಾಡಿದೆ. ಡ್ರಗ್ಸ್ ಮಾರಾಟ ಮಾಡಿದ, ದಕ್ಷಿಣ ಕೊರಿಯಾ ಮಾಧ್ಯಮಗಳೊಂದಿಗೆ ಮಾತನಾಡಿದ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾದ ವ್ಯಕ್ತಿಗಳನ್ನೂ ಗಲ್ಲಿಗೇರಿದೆ ಎಂದು ಹೇಳಿದೆ.
ಅಂದಹಾಗೆ 2017 ರಿಂದ 2022 ರವರೆಗೆ ತಮ್ಮ ತಾಯ್ನಾಡಿನಿಂದ ಪಲಾಯನ ಮಾಡಿದ 500 ಕ್ಕೂ ಹೆಚ್ಚು ಉತ್ತರ ಕೊರಿಯನ್ನರಿಂದ ಉತ್ತರ ಕೊರಿಯಾದಲ್ಲಿ ಆಗುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯ ವಿವರಗಳನ್ನು ದಕ್ಷಿಣ ಕೊರಿಯಾ ಸಂಗ್ರಹಿಸಿ ವರದಿ ಸಿದ್ಧಪಡಿಸಿದೆ. ಈ ಬಗ್ಗೆ ಇಂಗ್ಲೆಂಡ್ನ ಡೇಲಿ ಮೇಲ್ ಪತ್ರಿಕೆ ವರದಿ ಮಾಡಿದೆ.
ಈ ಕುರಿತು ಮಾತನಾಡಿದ ದಕ್ಷಿಣ ಕೊರಿಯಾದ ಏಕೀಕರಣ ಇಲಾಖೆಯ ಸಚಿವರು ‘ಉತ್ತರ ಕೊರಿಯಾದಲ್ಲಿ ನಾಗರಿಕರು ಬದುಕುವ ಹಕ್ಕಿಗೆ ಹೆಚ್ಚಿನ ಬೆದರಿಕೆ ಇದೆ ಎಂದು ತೋರುತ್ತದೆ. ಮಾದಕವಸ್ತು ಅಪರಾಧಗಳು, ದಕ್ಷಿಣ ಕೊರಿಯಾದ ಮಾಧ್ಯಮಗಳೊಂದಿಗೆ ಮಾತನಾಡುವುದು ಮತ್ತು ಧಾರ್ಮಿಕ ಮತ್ತು ಮೂಢನಂಬಿಕೆಗಳ ಆಚರಣೆ ಮಾಡಿದವರಿಗೆ ಮರಣದಂಡನೆಯನ್ನು ನೀಡಲಾಗುತ್ತಿದೆ’ ಎಂದು ತಿಳಿಸಿದ್ದಾರೆ.