Rohini silver screen theatre: ಸಿನಿಮಾ ನೋಡಲು ಬಂದ ಅಲೆಮಾರಿ ಜನರನ್ನು ಬಾಗಿಲಲ್ಲೇ ತಡೆದ ಮಲ್ಟಿಫ್ಲೆಕ್ಸ್ ಸಿಬ್ಬಂದಿ, ಮುಂದಾಗಿದ್ದೇನು?

Rohini silver screen theatre : ಸಿನಿಮಾ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಆಡೋ ಮಕ್ಕಳಿಂದ ಹಿಡಿದು ವಯಸ್ಸಾಗಿರುವ ಅಜ್ಜ ಅಜ್ಜಿ ತನಕ ಎಲ್ಲರಿಗೂ ಇಷ್ಟಪ. ಕೆಲವರಿಗೆ ಥಿಯೇಟರ್ಗಳಿಗೆ ಹೋಗಿ ಸಿನಿಮಾ ನೋಡೋದು ಅಂದ್ರೆ ಇನ್ನೂ ಇಷ್ಟ. ಟಿಕೆಟ್ ದರ ಎಷ್ಟಿದ್ದರೂ ಪಾವತಿಸಿ ಸಿನಿಮಾ ನೋಡುತ್ತಾರೆ. ಅಂತೆಯೇ ಚಿತ್ರ ಮಂದಿರಗಳೂ ಅಷ್ಟೆ. ತಾವು ನಿಗದಿ ಮಾಡಿದಷ್ಟು ಹಣವನ್ನು ಕೊಟ್ಟು ಟಿಕೆಟ್ ಪಡೆದರೆ ಯಾರಿಗೆ ಬೇಕದರೂ ಸಿನಿಮಾ ನೋಡಲು ಅವಕಾಶ ಮಾಡಿಕೊಡುತ್ತವೆ. ಆದರೆ ತಮಿಳುನಾಡಿನ(Tamilnadu) ಮಲ್ಟಿಫ್ಲೆಕ್ಸ್‌(Multiplex) ಒಂದರಲ್ಲಿ ಇದಕ್ಕೆ ತದ್ವಿರುದ್ಧವಾದ ಘಟನೆಯೊಂದು ನಡೆದಿದ್ದು ಸಿನಿಮಾ ನೋಡಲು ಬಂದಿದ್ದ ಅಲೆಮಾರಿ ಜನಾಂಗದವರನ್ನು ಅಲ್ಲಿನ ಸಿಬ್ಬಂದಿ ತಡೆದಿರುವುದು ಭಾರೀ ವಿವಾದವನ್ನುಂಟು ಮಾಡಿದೆ.

ಹೌದು, ತಮಿಳಿನ ಸ್ಟಾರ್ ನಟ ಸಿಂಬರಸನ್(Simbarasan) ನಟನೆಯ ಪತ್ತು ತಲಾ(Pattu Tala) ಚಿತ್ರ ವೀಕ್ಷಿಸಲು ಮಲ್ಟಿಪ್ಲೆಕ್ಸ್‌ಗೆ ಹೋಗಿದ್ದ ನಾರಿಕರುವ ಸಮುದಾಯದ ಅಲೆಮಾರಿ ಜನರನ್ನು ಸಿಬ್ಬಂದಿ ಸಿನಿಮಾ ವೀಕ್ಷಿಸಲು ಥಿಯೇಟರ್ ಒಳಗೆ ಬಿಡದಿರುವುದು ತಮಿಳುನಾಡಿನಲ್ಲಿ ಹೊಸ ವಿವಾದವನ್ನ ಹುಟ್ಟುಹಾಕಿದೆ. ಚೆನೈನ ಕೋಯೆಂಬಾಡು(Koyembadu) ಪ್ರದೇಶದಲ್ಲಿರುವ ರೋಹಿಣಿ ಸಿಲ್ವರ್ ಸ್ಕ್ರೀನ್ಸ್(Rohini Silver Screen) ಮಲ್ಟಿಪ್ಲೆಕ್ಸ್‌ನಲ್ಲಿ ಘಟನೆ ನಡೆದಿದೆ. ನಾರಿಕರುವ ಸಮುದಾಯದ ಮಹಿಳೆ ಹಾಗೂ ಮಕ್ಕಳು ಟಿಕೆಟ್ ಖರೀದಿಸಿ ಚಿತ್ರವನ್ನ ವೀಕ್ಷಿಸಲು ಬಂದಿದ್ದರು. ಆದರೆ, ಟಿಕೆಟ್ ತಪಾಸಣೆ ವೇಳೆ ಸಿಬ್ಬಂದಿ ಇವರುಗಳನ್ನು ತಡೆದಿದ್ದು ಚಿತ್ರಮಂದಿರ ಪ್ರವೇಶಕ್ಕೆ ಅನುವು ಮಾಡಿಕೊಟ್ಟಿಲ್ಲ.

ಈ ಘಟನೆಗೆ ಸಂಬಂಧಿಸಿದ ಸುದ್ದಿ ಹಾಗೂ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ನಂತರ ವಿವಾದವುಂಟಾಗಿ, ಅನೇಕರು ರೋಹಿಣಿ ಸಿಲ್ವರ್ ಸ್ಕ್ರೀನ್ಸ್ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ‘ಇದು ಅಮಾನವೀಯ’ ನಡೆ ಎಂದು ಖಂಡಿಸಿದ್ದಾರೆ.

ಬಳಿಕ ಎಚ್ಚೆತ್ತುಕೊಂಡು ಸ್ಪಷ್ಟನೆ ನೀಡಿರುವ ರೋಹಿಣಿ ಸಿಲ್ವರ್ ಸ್ಕ್ರೀನ್ಸ್ ಸಂಸ್ಥೆ, ಈ ಕುರಿತು ಪ್ರತಿಕ್ರಿಯಿಸಿದ್ದು ಗುರುವಾರ ಬೆಳಿಗ್ಗೆ ಪಾಠು ತಲಾ ಸಿನಿಮಾ ನೋಡಲು ಬಂದಿದ್ದ ಅಲೆಮಾರಿ ಜನಾಂಗದವರು ನಮ್ಮ ಮಲ್ಟಿಪ್ಲೆಕ್ಸ್ ಗೆ ಬಂದಿದ್ದು ಅವರಲ್ಲಿ ಮಕ್ಕಳಿದ್ದಾರೆ ಎಂಬ ಕಾರಣಕ್ಕಾಗಿ ಚಿತ್ರ ಮಂದಿರದ ಒಳಗೆ ಹೋಗಲು ಬಿಡಲಿಲ್ಲ ಅಷ್ಟೆ. ‘ಪಾಠು ತಲಾ’ ಸಿನಿಮಾ U/A ಪ್ರಮಾಣಪತ್ರ ಇರುವ ಸಿನಿಮಾ. ಹಾಗಾಗಿ 12 ವರ್ಷಕ್ಕಿಂತ ಕೆಳಗಿದ್ದ ಅವರನ್ನು ಚೆಕಿಂಗ್ ಕೌಂಟರ್ ಬಳಿ ತಡೆಯಲಾಗಿತ್ತು. ನಂತರ ಅವರಿಗೆ ಸಿನಿಮಾ ನೋಡಲು ಅನುಮತಿ ಕೊಡಲಾಗಿತ್ತು, ಸಿನಿಮಾ ನೋಡಿ ತೆರಳಿದ್ದಾರೆ ಎಂದು ಹೇಳಿ ಅವರು ಮಲ್ಟಿಫ್ಲೆಕ್ಸ್‌ನಲ್ಲಿ ಕುಳಿತು ಸಿನಿಮಾ ನೋಡಿದ್ದ ವಿಡಿಯೊವನ್ನು ಸ್ಪಷ್ಟನೆ ಜೊತೆಗೆ ಹಂಚಿಕೊಂಡಿದೆ.

ರೋಹಿಣಿ ಸಿಲ್ವರ್​ ಸ್ಕ್ರೀನ್ಸ್​ (Rohini silver screen theatre) ಸಂಸ್ಥೆಯ ನಡೆಗೆ ಅನೇಕರು ಆಕ್ಷೇಪಿಸಿದ್ದು ಅನುಮತಿ ಇಲ್ಲದೆ ವಿಡಿಯೋವನ್ನು ತೆಗೆದು ಪ್ರಕಟಿಸಿದ್ದು ತಪ್ಪು. ಇದು ಅಮಾಯಕರನ್ನು ಗೇಲಿ ಮಾಡುವಂತಿದೆ ಸರ್ಕಾರ ರೋಹಿಣಿ ಸಂಸ್ಥೆಯ ವಿರುದ್ದ ಕಠಿಣ ಕ್ರಮವನ್ನು ಜರುಗಿಸಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ. ಅಂದಹಾಗೆ ಪಾಠು ತಲಾ’ ಸಿನಿಮಾ ಎನ್. ಕೃಷ್ಣಾ ಅವರ ನಿರ್ದೇಶನದಲ್ಲಿ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಚಿತ್ರ ಕನ್ನಡದ ಮಫ್ತಿ ಸಿನಿಮಾದ ರಿಮೇಕ್ ಆಗಿದೆ.

 

5 Comments
  1. MichaelLiemo says

    ventolin medication: Ventolin inhaler price – buy ventolin online
    ventolin generic brand

  2. Josephquees says

    prednisone 300mg: prednisone 5 mg tablet price – 20 mg prednisone

  3. Josephquees says

    ventolin 100: Ventolin inhaler price – buy ventolin online no prescription

  4. Timothydub says

    northwest pharmacy canada: Canadian Pharmacy – northwest pharmacy canada

  5. Timothydub says

    п»їbest mexican online pharmacies: mexican drugstore online – mexican online pharmacies prescription drugs

Leave A Reply

Your email address will not be published.