Abhishek Ambareesh: ಅವಿವಾ ಬಿದ್ದಪ್ಪರನ್ನು 2ನೇ ಮದುವೆ ಆಗ್ತಿರೋ ಕುರಿತು ಮಾತನಾಡಿದ ಅಭಿಷೇಕ್ ಅಂಬರೀಶ್! ಇಲ್ಲಿದೆ ನೋಡಿ ಯಾರೂ ತಿಳಿಯದ ರಹಸ್ಯ.

Abhishek Ambareesh :ಕಳೆದ ವರ್ಷ ಕನ್ನಡದ ಹೆಸರಾಂತ ನಟ, ರೆಬೆಲ್ ಸ್ಟಾರ್ ಅಂಬರೀಷ್ ಅವರ ಮಗ ಅಭಿಷೇಕ್ ಅಂಬರೀಷ್, ಖ್ಯಾತ ಉದ್ಯಮಿಯಾದ ಪ್ರಸಾದ್ ವಿದ್ದಪ್ಪರ ಮಗಳು ಅವಿವಾ ವಿದ್ದಪ್ಪ ಅವರರೊಂದಿಗೆ ಎಂಗೇಜ್ಮೆಂಟ್ ಮಾಡಿಕೊಂಡಿದ್ರು. ಅಂದಹಾಗೆ ಅವರ ಭಾವಿ ಪತ್ನಿ ಅವಿವಾ ವಿದ್ದಪ್ಪ ಎಂಗೇಜ್ಮೆಂಟ್ ಆದ ಕೂಡಲೇ ಸಾಕಷ್ಟು ಸುದ್ಧಿಯಾಗಿದ್ದರು. ಯಾಕಂದರೆ ಅವಿವಾ ಅವರಿಗೆ ಇದು ಎರಡನೇ ಮದುವೆ ಎಂಬ ವಿಚಾರದಿಂದ. ಆದರೆ ಈ ಕುರಿತು ಅಭಿಷೇಕ್ ಏನೂ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೀಗ ಅಭಿಷೇಕ್ ಅವರು ಈ ಕುರಿತು ಮೌನ ಮುರಿದಿದ್ದಾರೆ. ಅಭಿಷೇಕ್ ಅಂಬರೀಷ್ ಏನು ಹೇಳಿದ್ದಾರೆ ನೋಡೋಣ. ಅದಕ್ಕಿಂತ ಮೊದಲು ಗಮನಿಸಬೇಕಾದ ಅಂಶ ಏನೆಂದರೆ, ಅಭಿಷೇಕ್ ಗೆ ಇದು ಮೊದಲನೇ ಮದುವೆಯಾಗಿದ್ದಾರೆ, ಆತನನ್ನು ವರಿಸಲಿರುವ ಅವೀವಾ ಬಿದ್ದಪ್ಪಗೆ ಇದು ಎರಡನೆಯ ವಿವಾಹ. ಈಗಾಗಲೇ ಮದುವೆಯಾಗಿರುವ ಹುಡುಗಿಯನ್ನು ಅಭಿಷೇಕ್ ಅವರು ವರಿಸುತ್ತಿದ್ದಾರೆ. ಈ ಸುದ್ದಿ ಕೇಳಿ ಕನ್ನಡದ ಆತನ ಅಭಿಮಾನಿಗಳು ಹುಬ್ಬೇರಿಸಿದ್ದಾರೆ.

ಅಷ್ಟೇಅಲ್ಲ, ಇದೀಗ ಅಭಿಷೇಕ್ ವರಿಸಲಿರುವ ಅವಿವಾ ವಿವಾಹಿತೆ ಮಾತ್ರವಲ್ಲ, ಅಭಿಷೇಕ್ ಅಂಬರೀಷ್ ಗಿಂತ ತುಂಬಾ ದೊಡ್ಡವರು. ಆಕೆ ಅಭಿಷೇಕ್ ಅವರಿಗಿಂತ 11 ವರುಷ ದೊಡ್ಡವರಿದ್ದಾರೆ. ಅಂದರೆ ಅಭಿಷೇಕ್ ಗೆ ಪ್ರಸ್ತುತ 29 ವರ್ಷವಷ್ಟೇ. ಆದರೆ ಅವಿವಾಗೆ ಇದೀಗ ಸುಮಾರು 40 ವರುಷ ವಯಸ್ಸಾಗಿದೆ. ಆಕೆಗೆ 40 ವರ್ಷ ವಯಸ್ಸಾದರೂ, ಸಕತ್ ಫಿಗರ್ ಮೆಂಟೈನ್ ಮಾಡಿದ್ದಾರೆ. ಅವಿವಾ ಅವರು ಮಾಡೆಲ್ ಆಗಿಯೂ ತಮ್ಮನ್ನು ಗುರುತಿಸಿಕೊಂಡ ಕಾರಣ ಯುವತಿಯರು ನಾಚುವಂತಹ ಮೈಮಾಟವನ್ನು ಹೊಂದಿದ್ದಾರೆ.

ಆದರೀಗ ವಿವಾಹವಾಗಿ ವಿಚ್ಛೇದನವನ್ನು ಪಡೆದುಕೊಂಡಿರುವ ಹಾಗೂ ವಯಸ್ಸಿನಲ್ಲಿ ದೊಡ್ಡವರಾಗಿರುವ ಹುಡುಗಿಯನ್ನು ಯಾಕೆ ಮದುವೆ ಆಗುತ್ತಿದ್ದೀರಿ ಎನ್ನುವ ಪ್ರಶ್ನೆಗಳು ಕೂಡ ಅಭಿಷೇಕ್ ಅಂಬರೀಶ್ ಅವರನ್ನು ಹುಡುಕಿಕೊಂಡು ಬಂದಿವೆ. ಇದಕ್ಕೆ ಅಭಿಷೇಕ್ ಅಂಬರೀಶ್ ಅವರು  ನೀಡಿರುವ ಉತ್ತರವಾದರೂ ಏನು ಗೊತ್ತಾ? ಸಹಜವಾಗಿ ಇಂತಹಾ ಪ್ರಶ್ನೆಗಳು ಅಭಿಷೇಕ್ ಅಭಿಮಾನಿಗಳಲ್ಲಿ ಉಂಟಾಗಿದೆ. ವಯಸ್ಸಿನ ಹಿರಿಯಳಷ್ಟೇ ಅಲ್ಲ, ಆಕೆಗೆ ಈಗಾಗಲೇ ವಿವಾಹ ಆಗಿದ್ದು, ಅದು ಅಂಬಿ ಅಭಿಮಾನಿಗಳನ್ನು ಕಾಡಿದೆ.

ಈ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಅಭಿಷೇಕ್ ಅಂಬರೀಶ್ ಅವರು ಅವಿವಾ ಅವರನ್ನು ಸ್ನೇಹಿತರ ಮೂಲಕ ಪಾರ್ಟಿ ಒಂದರಲ್ಲಿ ನೋಡಿದ್ದೆ. ಅಲ್ಲಿಂದಲೇ ನಮ್ಮಿಬ್ಬರ ನಡುವೆ ಪರಿಚಯ ಪ್ರಾರಂಭವಾಯಿತು. ಪರಿಚಯ ಸ್ನೇಹಕ್ಕೆ ತಿರುಗಿ ಸ್ನೇಹ ಪ್ರೀತಿಗೆ ತಿರುಗಿ ಈಗ ನಮ್ಮ ಜೀವನವನ್ನು ಒಟ್ಟಾಗಿ ಕಳೆಯಲು ನಿರ್ಧರಿಸಿದ್ದೇವೆ ಎಂಬುದಾಗಿ ಶಾಂತವಾಗಿ ಉತ್ತರ ನೀಡಿದ್ದಾರೆ. ಆದರೆ ಅಭಿಷೇಕ್ (Abhishek Ambareesh) ಅವರು ಅವಿವಾ ಅವರ ಮೊದಲನೆಯ ಮದುವೆ ಕುರಿತು ಏನೂ ಮಾತನಾಡಿಲ್ಲ. ಅಲ್ಲದೆ ಆಕೆಯ ವಯಸ್ಸಿನ ವಿಷ್ಯವಾಗಿಯೂ ಏನೂ ಚಕಾರ ಎತ್ತಿಲ್ಲ. ತನ್ನ ಮಗ ವಯಸ್ಸಿನಲ್ಲಿ ತನಗಿಂತ ಹಿರಿಯಳನ್ನು ಮದುವೆಯಾಗುತ್ತಿರುವುದಕ್ಕೆ ನಟಿ ರಾಜಕಾರಣಿ ಸುಮಲತಾ ಅವರ ಪ್ರತಿಕ್ರಿಯೆ ಏನು ಎನ್ನುವುದು ಯಾರಿಗೂ ಗೊತ್ತಾಗಿಲ್ಲ. ಅಮ್ಮನ ಒಪ್ಪಿಗೆ ಇದ್ದೇ, ಅಮ್ಮನ ಪ್ರೀತಿಯ ಮಗ ಮದುವೆ ಆಗುತ್ತಿದ್ದಾನೆ ಎನ್ನುತ್ತಿದೆ ಒಂದು ಸುದ್ದಿ ಮೂಲ.

Leave A Reply

Your email address will not be published.