Home Interesting Pregnancy Photoshoot: ಅಯ್ಯೋ ದೇವ್ರೇ! ಅತ್ತೆ, ಸೊಸೆ, ಅಮ್ಮ, ಅಜ್ಜಿ ಎಲ್ಲರೂ ಒಟ್ಟಿಗೆ ಪ್ರೆಗ್ನೆಂಟ್! ವೈರಲ್...

Pregnancy Photoshoot: ಅಯ್ಯೋ ದೇವ್ರೇ! ಅತ್ತೆ, ಸೊಸೆ, ಅಮ್ಮ, ಅಜ್ಜಿ ಎಲ್ಲರೂ ಒಟ್ಟಿಗೆ ಪ್ರೆಗ್ನೆಂಟ್! ವೈರಲ್ ಆಯ್ತು ಪ್ರೆಗ್ನೆನ್ಸಿ ಫೋಟೋಶೂಟ್!

Pregnancy Photoshoot

Hindu neighbor gifts plot of land

Hindu neighbour gifts land to Muslim journalist

Pregnancy Photoshoot :ಇಂದು ಫೋಟೋ ಶೂಟ್(Photo Shoot)ಒಂದು ಟ್ರೆಂಡ್ ಆಗಿ ಬಿಟ್ಟಿದೆ. ಮದುವೆ ಮುಂಚೆ, ಮದುವೆ ನಂತರ, ಹುಟ್ಟಿದ ಹಬ್ಬ, ಮದುವೆ ವಾರ್ಷಿಕೋತ್ಸವ ಹೀಗೆ ಅನೇಕ ವಿಶೇಷತೆಗಳು ಫೋಟೋಶೂಟ್ ಮೂಲಕವೇ ಆರಂಭವಾಗತ್ತವೆ. ಇತ್ತೀಚೆಗೆ ಪ್ರೆಗ್ನೆನ್ಸಿ ಫೋಟೋಶೂಟ್‌(Pregnancy Photoshoot) ಕೂಡ ಮಾಡಿಸಿಕೊಳ್ಳುತ್ತಾರೆ. ಗರ್ಭಿಣಿಯಾಗುವುದು ನಿಜಕ್ಕೂ ಖುಷಿ ನೀಡುವ ವಿಚಾರ. ಹೀಗಾಗಿ ಮಹಿಳೆಯರು ಈ ನೆನಪನ್ನು ಜೋಪಾನವಾಗಿಡಲು ಮೊದಲ್ಲೆಲ್ಲಾ ಸೀಮಂತ ಕಾರ್ಯಕ್ರಮ ಮಾತ್ರ ಮಾಡಲಾಗುತ್ತಿತ್ತು. ಆದರೀಗ ಫೋಟೋಶೂಟ್ ಹೆಚ್ಚು ಟ್ರೆಂಡ್ ಆಗ್ತಿದೆ. ಸಾಮಾನ್ಯವಾಗ್ತಿದೆ. ಆದ್ರೆ ಇಲ್ಲೊಬ್ಬಳು ಗರ್ಭಿಣಿ ಮಾಡಿರೋ ಫೋಟೋಶೂಟ್ ಸಖತ್ ವೈರಲ್ ಆಗ್ತಿದೆ.

ಹೌದು, ಇಂದು ವಿವಿಧ ರೀತಿಯ ಫೋಟೋ ಶೂಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ (Social media) ವೈರಲ್ ಆಗುತ್ತಿವೆ. ಫೋಟೋ ಶೂಟ್‌ಗಳಿಗಾಗಿ ವಿಭಿನ್ನ ಥೀಮ್‌ಗಳನ್ನು ಸಹ ಅನ್ವೇಷಿಸಲಾಗುತ್ತದೆ. ಆದರೀಗ ವಿಭಿನ್ನವಾದ ಪ್ರೆಗ್ನೆನ್ಸಿ ಫೋಟೋ ಶೂಟ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಅಂದಹಾಗೆ ಪ್ರೆಗ್ನೆಂಟ್ ಆಗಿರುವಾಗ ಇತ್ತೀಚಿಗೆ ಎಲ್ಲರೂ ಫೋಟೋಶೂಟ್ ಮಾಡಿಕೊಳ್ತಾರೆ. ಆದ್ರೆ ಈ ಫೋಟೋಶೂಟ್ ಮಾತ್ರ ಸಿಕ್ಕಾಪಟ್ಟೆ ಸ್ಪೆಷಲ್. ಯಾಕಂದ್ರೆ ಈ ಫೋಟೋಶೂಟ್‌ನಲ್ಲಿ ಗರ್ಭಿಣಿಯ ಅತ್ತೆ, ಅಮ್ಮ ಮತ್ತು ಅಜ್ಜಿ ಕೂಡ ಪ್ರೆಗ್ನೆಂಟ್ ಆಗಿದ್ದು, ಫೋಟೋಗೆ ಪೋಸ್ ನೀಡಿದ್ದಾರೆ.

ಪ್ರೆಗ್ನೆನ್ಸಿ ಫೋಟೋ ಶೂಟ್‌ನಲ್ಲಿ ಗರ್ಭಿಣಿಯ ತಾಯಿ ಮಾತ್ರವಲ್ಲದೆ ಅತ್ತೆ (Mother in law) ಮತ್ತು ಅಜ್ಜಿ ಕೂಡ ಕಾಣಿಸಿಕೊಂಡಿದ್ದಾರೆ. ಈ ಮೂರು ತಲೆಮಾರುಗಳನ್ನು (Three generation) ಒಂದೇ ಫೊಟೋದಲ್ಲಿ ನೋಡಲು ನಿಜಕ್ಕೂ ಖುಷಿಯಾಗುತ್ತದೆ. ಆದರೆ ಈ 3 ತಲೆಮಾರುಗಳ ಮಹಿಳೆಯರು (Women) ಒಂದೇ ಸಮಯದಲ್ಲಿ ಗರ್ಭಿಣಿಯಾಗಿದ್ದಾರೆಯೇ? ಇದು ಹೇಗೆ ಸಾಧ್ಯ ಎಂದು ಹಲವರ ಅಚ್ಚರಿಗೆ ಕಾರಣವಾಗಿದೆ. ಆದರೆ ಇದು ನಿಜವಾದ ಫೋಟೋಶೂಟ್ ಅಲ್ಲ. ಕಾಲ್ಪನಿಕ ಎಂಬುದು ಆ ನಂತರ ತಿಳಿದುಬಂದಿದೆ.

ಕೇರಳದ ಜಿಬಿನ್ ಎಂಬವರು ಈ ಪೋಟೋಶೂಟ್ ಮಾಡಿದ್ದಾರೆ. ವೃತ್ತಿಯಲ್ಲಿ ಛಾಯಾಗ್ರಾಹಕರಾಗಿರುವ ಜಿಬಿನ್ ಅವರ ಪತ್ನಿ ಚಿಂಜು ಇತ್ತೀಚೆಗೆ ಗರ್ಭಿಣಿಯಾಗಿದ್ದಾರೆ. ಅವಳು ಗರ್ಭಿಣಿಯಾಗುತ್ತಿದ್ದಂತೆ ಮನೆಯಲ್ಲಿ ಎಲ್ಲರ ಸಂತೋಷಕ್ಕೆ ಮಿತಿಯೇ ಇರಲಿಲ್ಲ. ಛಾಯಾಗ್ರಾಹಕ ಜಿಬಿನ್, ತನ್ನ ಹೆಂಡತಿಯ ಮಗುವಿನ ಬಂಪ್ನ ಫೋಟೋಗಳನ್ನ ತೆಗೆದುಕೊಳ್ಳಲು ನಿರ್ಧರಿಸಿದ್ದು, ಇದನ್ನು ಹೊಸ ರೀತಿಯಲ್ಲೆ ಪ್ರಯತ್ನಿಸಲು ಯೋಚಿಸಿದ್ದಾರೆ. ಕೊನೆಗೆ ತನ್ನ ತಾಯಿ ಅಜ್ಜಿ ಹಾಗೂ ಅಪ್ಪ ಅಜ್ಜನನ್ನೂ ಸೇರಿಸಿಕೊಂಡು ಈ ರೀತಿ ಫೋಟೋಶೂಟ್ ಮಾಡಿಸಿದ್ದಾರೆ.