Self marriage: ತನ್ನನ್ನು ತಾನೇ ಮದುವೆಯಾದ ವಿದೇಶಿ ಪೋರಿ! 24 ಗಂಟೆಯೊಳಗೆ ವಿಚ್ಛೇದನವನ್ನೂ ಘೋಷಿಸಿದಳು!

Share the Article

Self marriage :ಇತ್ತೀಚೆಗಂತೂ ವಿಭಿನ್ನವಾದಂತಹ ಮದುವೆಗಳು(Marriage) ಸೃಷ್ಟಿಯಾಗಿ ನಮಗೆಲ್ಲರಿಗೂ ಅಚ್ಚರಿಯನ್ನು ಉಂಟುಮಾಡುತ್ತಿವೆ. ಕಳೆದ ವರ್ಷ ಭಾರತದಲ್ಲಿಯೇ ಇಂತಹ ಮದುವೆ ಪ್ರಕರಣಗಳು ಬೆಳಕಿಗೆ ಬಂದಿದ್ದು, ಒಬ್ಬಳು ದೇವರನ್ನು ಮದುವೆಯಾದರೆ ಮತ್ತೊಬ್ಬಳು ತನ್ನನ್ನು ತಾನೇ ಮದುವೆ ಆಗಿ ಸುದ್ಧಿಯಾಗಿದ್ದಳು. ಅಂತೆಯೇ ಇಲ್ಲೊಬ್ಬಳು ವಿದೇಶಿ ಪೋರಿ ಇದೇ ರೀತಿ ತನ್ನನ್ನು ತಾನು ಮದುವೆಯಾಗುವುದಲ್ಲೆ 24 ಗಂಟೆಯೊಳಗೆ ವಿಚ್ಛೇದನವನ್ನೂ ಪಡೆದುಕೊಂಡಿದ್ದಾಳೆ!

ಹೌದು, ಇಂತಹ ಒಂದು ವಿಚಿತ್ರ ಪ್ರಕರಣ ಅರ್ಜೇಂಟಿನಾ(Argentina)ದಲ್ಲಿ ನಡೆದಿದೆ. ಸೋಫಿ ಮೌರ್( Sophie Pour) (25) ಎಂಬಾಕೆ ತನ್ನನ್ನು ತಾನೇ ಮದುವೆಯಾದ ಮಹಿಳೆ. ಈಕೆ ಈ ಬಗ್ಗೆ ಟ್ವೀಟ್ ಮಾಡಿ, ವಧುವಿನ ಡ್ರೇಸ್‍ನಲ್ಲಿರುವ ಫೋಟೋವನ್ನು ಹಂಚಿಕೊಂಡಿದ್ದಳು.

ಟ್ವೀಟ್ ನಲ್ಲಿ ‘ಇಂದು ನನ್ನ ಜೀವನದ ಅತ್ಯಂತ ಸಂತೋಷದ ಕ್ಷಣ. ನಾನು ಮದುವೆಯ ಉಡುಪನ್ನು ಖರೀದಿಸಿದೆ. ಅಲ್ಲದೇ ನನ್ನನ್ನು ನಾನೇ ಮದುವೆಯಾಗುತ್ತಿದ್ದು, ಈ ಸಂಭ್ರಮದ ಆಚರಣೆಗೆ (self Marriage) ಕೇಕ್ ಅನ್ನು ಖರೀದಿಸಿದ್ದೇನೆ’ ಎಂದು ತಿಳಿಸಿದ್ದಳು. ಈ ಕುರಿತು ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಚರ್ಚೆಯಾಗಿತ್ತು. ಟ್ವೀಟ್‍ಗೆ ಅನೇಕರು ಸಕಾರತ್ಮಕವಾಗಿ ಉತ್ತರಿಸಿದರೆ, ಕೆಲವರು ನಕಾರಾತ್ಮಕವಾಗಿ ಟ್ವೀಟ್ ಮಾಡಿದ್ದರು.

ಆದರೆ ವಿಚಿತ್ರ ಎನ್ನುವಂತೆ ಅದಾದ ಕೇವಲ ಒಂದು ದಿನದ ನಂತರ ಈ ಸೋಫೀ ತಾನು ವಿಚ್ಛೇದನ(Divorce) ಪಡೆದುಕೊಳ್ಳುತ್ತಿದ್ದೇನೆ ಎಂದು ಪುನಃ ಟ್ವೀಟ್ ಮಾಡಿದ್ದಾಳೆ. ಟ್ವೀಟ್‍ನಲ್ಲಿ ‘ನಾನು ನನ್ನೊಂದಿಗೆ ಮದುವೆಯಾಗಿ ಒಂದು ದಿನವಾಗಿದೆ. ಈ ನಿರ್ಧಾರವನ್ನು ಮುದುವರಿಸಲು ಸಾಧ್ಯವಿಲ್ಲ. ಹೀಗಾಗಿ ವಿಚ್ಛೇದನ ಪಡೆದುಕೊಳ್ಳಲು ಯೋಚಿಸುತ್ತಿದ್ದೇನೆ’ ಎಂದು ಹೇಳಿದ್ದಾಳೆ.

ಈ ಹುಂಬ ಹುಡುಗಿಯ ಪೋಸ್ಟ್‌ಗೆ ನೆಟ್ಟಿಗರು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಒಬ್ಬ ‘ವಿಚ್ಛೇದನ ಪಡೆಯಲು ಒಳ್ಳೆಯ ವಕೀಲರನ್ನು ಪಡೆಯಿರಿ’ ಎಂದು ಹೇಳಿದ್ದಾನೆ. ಮತ್ತೋರ್ವ ‘ ಇಂದು ಮೂರ್ಖತನಕ್ಕೆ ಮಿತಿಯೇ ಇಲ್ಲ, ಜಿಗುಪ್ಸೆ ಹುಟ್ಟಿಸುವಾಕೆ, ಇದರಿಂದ ಹೆಚ್ಚು ನಿರೀಕ್ಷಿಸಬೇಡಿ’ ಎಂದಿದ್ದಾನೆ. ಇನ್ನೋರ್ವ ‘ಅದಕ್ಕೇ ಮದುವೆ ಆಗುವ ಮುನ್ನ ಹಿಂದೆ ಮುಂದೆ ಸರಿಯಾಗಿ ಯೋಚಿಸಬೇಕು ಸೋಫಿಯವರೇ’ ಎಂದು ತಿಳಿಸಿದ್ದಾನೆ.

ಇದನ್ನೂ ಓದಿ : ‘ಪ್ರೀತಿಯ ಪಾರಿವಾಳ’ ಅಂತ ಕಾಳು ಹಾಕಲು ಹೋದ್ರೆ ಬೀಳುತ್ತೆ ಭಾರೀ ದಂಡ!

https://twitter.com/sofimaure07/status/1627439026239053826?t=f9u1CJ7BsONcWXt8n1itQA&s=08

Leave A Reply