Remote Control Ceiling Fans: ಕೈಗೆ ಎಟಕುವ ದರದಲ್ಲಿ ಕೊಂಡುಕೊಳ್ಳಿ ರಿಮೋಟ್ ಕಂಟ್ರೋಲ್ ಸೀಲಿಂಗ್ ಫ್ಯಾನ್

Remote Control Ceiling Fans: ಬೆಳಗ್ಗೆ ಎದ್ದಾಗ ಚುಮು ಚುಮು ಚಳಿಯಾದರೆ, ಸೂರ್ಯ ನೆತ್ತಿಗೆ ಏರುತ್ತಿದ್ದಂತೆ ರಣ ಬಿಸಿಲಿನ ಝಳ. ಅದರಲ್ಲಿಯೂ ಕರಾವಳಿಯ ಜನತೆಯ ಸ್ಥಿತಿ ಕೇಳೋದೇ ಬೇಡ!!! ಉರಿಸೆಕೆಯ ಬೇಗೆಗೆ ಹೈರಾಣಾಗಿ ಹೋಗಿ ಒಮ್ಮೆ ಫ್ಯಾನ್ , ಹವಾ ನಿಯಂತ್ರಣ (AC), ಕೂಲರ್ (cooler) ಯಾವುದಾದ್ರೂ ಒಂದು ಪರಿಹಾರ ಕೊಟ್ಟರೆ ಸಾಕು ಎಂದುಕೊಳ್ಳುವವರೆ ಹೆಚ್ಚು. ಇದೀಗ, ನಿಮಗೊಂದು ಬೊಂಬಾಟ್ ಆಫರ್ ಎದುರು ನೋಡುತ್ತಿದೆ.

ಸಾಮಾನ್ಯವಾಗಿ ಬೇಸಿಗೆ ಸಮೀಪಿಸುತ್ತಿದ್ದಂತೆಯೇ ಎಸಿ, ಕೂಲರ್ ಗಳ ಬೆಲೆ ಗಣನೀಯವಾಗಿ ಹೆಚ್ಚಾಗುತ್ತದೆ. ಈ ಕಾರಣಕ್ಕಾಗಿ ಬಹಳಷ್ಟು ಮಂದಿ ಎಸಿ ಬದಲಿಗೆ ಕೂಲರ್ ಆಯ್ಕೆ ಮಾಡುತ್ತಾರೆ. ಆದರೆ, ಇದೀಗ ನೀವು ಕೈಗೆಟಕುವ ದರದಲ್ಲಿ ಉನ್ನತ ಗುಣಮಟ್ಟದ ಫ್ಯಾನ್ ಗಳನ್ನೂ ಕೊಂಡುಕೊಳ್ಳಲು ಸುವರ್ಣ ಅವಕಾಶ!! ಹೌದು!! ಆನ್ಲೈನ್ ಪ್ಲಾಟ್ಫಾರ್ಮ್(Online Platform) ಮೂಲಕ ನೀವು ಆಫರ್ ಬೆಲೆಯಲ್ಲಿ ಅಗ್ಗದ ಬೆಲೆಯಲ್ಲಿ ಕೊಂಡುಕೊಳ್ಳಲು ಸೂಪರ್ ಡೂಪರ್ ಆಫರ್ ನಿಮಗಾಗಿ ಕಾದಿದೆ.

ಜೋನ್ಸ್ ಎಕ್ಸೆಲ್-1 P1 600 mm ರಿಮೋಟ್ ಕಂಟ್ರೋಲ್ ಸೀಲಿಂಗ್ ಫ್ಯಾನ್ : (Jones Excel-1 P1 600 mm Remote Controlled 4 Blade Ceiling Fan )
ಈ ರಿಮೋಟ್ ಕಂಟ್ರೋಲ್ ಸೀಲಿಂಗ್ ಫ್ಯಾನ್ (Remote control ceiling fans)50W ಪವರ್ ಬಳಕೆ ಮಾಡುತ್ತದೆ. 600mm ನ ನಾಲ್ಕು ಬ್ಲೇಡ್‌ಗಳನ್ನು ಹೊಂದಿರುವ ಫ್ಯಾನ್ ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ ಇದನ್ನು 3,999 ಬದಲು 1,999 ರೂ.ಗೆ ಮಾರಾಟ ಮಾಡುತ್ತಿದೆ.

ಮ್ಯಾಕ್ಸೊಟೆಕ್ ಡೆಕೊ ಅಲ್ಟ್ರಾ ಹೈ ಸ್ಪೀಡ್ ರಿಮೋಟ್ ಕಂಟ್ರೋಲ್ ಸೀಲಿಂಗ್ ಫ್ಯಾನ್
ಮ್ಯಾಕ್ಸೊಟೆಕ್ ಡೆಕೊ ಅಲ್ಟ್ರಾ ಹೈ ಸ್ಪೀಡ್ ರಿಮೋಟ್ ಕಂಟ್ರೋಲ್ ಸೀಲಿಂಗ್ ಫ್ಯಾನ್ (Remote Control Ceiling Fans)ಅನ್ನು ನಾಲ್ಕು ಆಂಟಿ-ಡಸ್ಟ್ 600 ಎಂಎಂ ಬ್ಲೇಡ್‌ಗಳನ್ನು ನೀಡಲಾಗಿದ್ದು, 3,790 ರೂ. ಬೆಲೆಯ ಈ ರಿಮೋಟ್ ಕಂಟ್ರೋಲ್ಡ್ ಸೀಲಿಂಗ್ ಫ್ಯಾನ್ ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ 1,899 ರೂ.ಗೆ ಮಾರಾಟ ಮಾಡಲಾಗುತ್ತಿದೆ.

ಲಾಂಗ್‌ವೇ ರಿಮೋಟ್ ಕಂಟ್ರೋಲ್ ಸೀಲಿಂಗ್ ಫ್ಯಾನ್(Longway Creta P1 1200 mm) 1,200 ಎಂಎಂ ನ ಮೂರು ಬ್ಲೇಡ್‌ಗಳೊಂದಿಗೆ ಬರುತ್ತದೆ. ಮೂರು ಸ್ಪೀಡ್ ಸೆಟ್ಟಿಂಗ್‌ಗಳನ್ನು ನೀಡಲಾಗಿದೆ. 3,781 ರೂಪಾಯಿ ಬದಲಿಗೆ, ಈ ಫ್ಯಾನ್ ಅನ್ನು ಫ್ಲಿಪ್‌ಕಾರ್ಟ್‌ನಿಂದ 1,839 ರೂ.ಗೆ ಖರೀದಿಸಬಹುದು. ಇದಲ್ಲದೇ ನಿಮಗೆ ಹಲವು ಬ್ಯಾಂಕ್ ಆಫರ್‌ಗಳು ಸಿಗಲಿವೆ.

OSTN ARC 4 ಬ್ಲೇಡ್ ಸೀಲಿಂಗ್ ಫ್ಯಾನ್
OSTN ARC 4 ಬ್ಲೇಡ್ ಸೀಲಿಂಗ್ ಫ್ಯಾನ್ ಕೂಡ ಉತ್ತಮ ಆಯ್ಕೆಯಾಗಿವೆ. ಇದರ ಬೆಲೆ 5,299 ರೂಪಾಯಿಯನ್ನು ಫ್ಲಿಪ್‌ಕಾರ್ಟ್‌ನಲ್ಲಿ 3,899 ರೂ.ಗೆ ಖರೀದಿ ಮಾಡಲು ಸುವರ್ಣ ಅವಕಾಶ ಕಲ್ಪಿಸಿದೆ.

ಸ್ಟಾರ್‌ಡಮ್ ಡೀ ಸಿ ವೈರ್‌ಲೆಸ್ ರಿಮೋಟ್ ಕಂಟ್ರೋಲ್ ಸೀಲಿಂಗ್ ಫ್ಯಾನ್ :
ಸ್ಟಾರ್‌ಡಮ್ ಡೀ ಸಿ ವೈರ್‌ಲೆಸ್ ರಿಮೋಟ್ ಕಂಟ್ರೋಲ್ ಸೀಲಿಂಗ್ ಫ್ಯಾನ್ ವೈರ್‌ಲೆಸ್ ರಿಮೋಟ್ ಚಾಲಿತ ಸೀಲಿಂಗ್ ಫ್ಯಾನ್ ತಲಾ 600 ಎಂಎಂ ನಾಲ್ಕು ಬ್ಲೇಡ್‌ಗಳನ್ನು ಹೊಂದಿದೆ. ಇದರ ಬೆಲೆ 2,499 ರೂ. ಆದರೆ ಫ್ಲಿಪ್ ಕಾರ್ಟ್ ನಿಂದ 1,946 ರೂ. ಗೆ ಖರೀದಿ ಮಾಡಬಹುದು.

Leave A Reply

Your email address will not be published.