Courses after 2nd PUC: 2nd PUC ಆದ ನಂತರ ಏನು ಓದುವುದೆಂಬ ಚಿಂತೆಯೇ? ಇಲ್ಲಿದೆ ನೋಡಿ 7 ಆಯ್ಕೆಗಳು
Courses after 2nd PUC :ಪಿಯುಸಿ(PUC ) ಪಾಸ್ ಆದ ವಿದ್ಯಾರ್ಥಿಗಳಲ್ಲಿ (students )ಕಾಡುವ ಗೊಂದಲ ಎಂದರೆ ಮುಂದೆ ಏನು ಮಾಡುವುದು ಎಂದು. ಯಾಕೆಂದರೆ ಆಗ ತಾನೆ ಪ್ರೌಢತೆಗೆ ಬಂದಿರುವ ವಿದ್ಯಾರ್ಥಿಗಳಿಗೆ ಹಲವಾರು ಗೊಂದಲಗಳು ಮುಂದಿನ ಕರಿಯರ್ ಬಗ್ಗೆ ಇದ್ದೇ ಇರುತ್ತದೆ, ಆದರೆ ಒಬ್ಬೊಬ್ಬರು ಒಂದೊಂದು ಸಲಹೆ ನೀಡಿ ನಿಮ್ಮನ್ನು ಗೊಂದಲ ಗೊಳಿಸುತ್ತಾರೆ. ಇನ್ನೊಂದು ಕಡೆ ಹೆತ್ತವರ ಅಭಿಲಾಷೆಗಳು, ಈ ಸಂದರ್ಭದಲ್ಲಿ ನಿಮಗೆ 3-4 ವರ್ಷಗಳ ಡಿಗ್ರಿ ಮಾಡೋದಾ? ಯಾವ ಡಿಗ್ರಿ ಓದೋದು ಬೆಸ್ಟ್? (Courses after 2nd PUC) ಯಾವುದಾದರೂ ಕೋರ್ಸ್ ಮಾಡಿ ಉದ್ಯೋಗ ಶುರು ಮಾಡೋದಾ ಎಂಬ ಕನ್ಫ್ಯೂಷನ್ ಇದ್ದೇ ಇರುತ್ತೆ. ಇದೀಗ ನಿಮ್ಮ ಗೊಂದಲಗಳಿಗೆ ಇಲ್ಲಿ ಸಲಹೆ ನೀಡಲಾಗಿದೆ.
ನಿಮಗಿಲ್ಲಿ 7 ಆಯ್ಕೆಗಳನ್ನು ನೀಡಿದ್ದು, ನಿಮ್ಮ ಆಸಕ್ತಿಗೆ ಅನುಸಾರವಾಗಿ ಆಯ್ಕೆ ಮಾಡುವುದು ಉತ್ತಮ.
ಎಂಜಿನಿಯರಿಂಗ್(Engineering) ಮತ್ತು ತಂತ್ರಜ್ಞಾನವು (technology ) ದೇಶದ ಹೆಚ್ಚಿನ ವಿದ್ಯಾರ್ಥಿಗಳಲ್ಲಿ ಜನಪ್ರಿಯ ಕೋರ್ಸ್ ಆಗಿದೆ. ಎಂಜಿನಿಯರಿಂಗ್ ಕೋರ್ಸ್ ಗಳಲ್ಲಿ ಮೆಕ್ಯಾನಿಕಲ್, ಸಿವಿಲ್, ಎಲೆಕ್ಟ್ರಿಕಲ್, ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್ ಇತ್ಯಾದಿ ಸೇರಿವೆ. ಇದಕ್ಕಾಗಿ, ದೇಶದಲ್ಲಿ ಜೆಇಇ ಮುಖ್ಯ, ಜೆಇಇಸಿಯುಪಿ ಇತ್ಯಾದಿ ಪ್ರವೇಶ ಪರೀಕ್ಷೆಗಳನ್ನು ಪಾಸ್ ಮಾಡಿದರ ಉತ್ತಮ ಆಯ್ಕೆಗಳು ದೊರಕಲಿವೆ.
ಬ್ಯುಸಿನೆಸ್ ಮ್ಯಾನೇಜ್ ಮೆಂಟ್ (Business Management) ಕೋರ್ಸ್, ಇದು ವಿವಿಧ ವಿಭಾಗಗಳಲ್ಲಿ ಪದವಿ ಮತ್ತು ಡಿಪ್ಲೊಮಾ ಕೋರ್ಸ್ ಗಳನ್ನು ಒಳಗೊಂಡಿದೆ. ಪ್ರತಿ ವರ್ಷ ಲಕ್ಷಾಂತರ ವಿದ್ಯಾರ್ಥಿಗಳು ಈ ಕೋರ್ಸ್ಗಳಿಗೆ ಪ್ರವೇಶ ಪಡೆಯುತ್ತಾರೆ.
ವಿದ್ಯಾರ್ಥಿಗಳು 10ನೇ ತರಗತಿ ಬಳಿಕ ವಿಜ್ಞಾನ(Science) ವಿಭಾಗದಲ್ಲಿ ಪಿಯು ಮಾಡಿದ್ದರೆ ನಿಮ್ಮ ಆಸಕ್ತಿಗೆ ಅನುಗುಣವಾಗಿ ಪದವಿ ಆಯ್ಕೆ ಮಾಡುವುದು ಉತ್ತಮ. ಇದರಲ್ಲಿ ಹಲವಾರು ವೃತ್ತಿಪರ ಅಧ್ಯಯನಗಳು ಕರಿಯರ್ ಬೆಳೆಸಲು ಸಹಾಯ ಮಾಡುತ್ತದೆ.
ವೈದ್ಯಕೀಯಕ್ಕೆ(Medical) ಸಂಬಂಧಿಸಿದ ಕೋರ್ಸ್, ಇದೊಂದು ಸವಾಲಿನ ಕ್ಷೇತ್ರವಾಗಿದ್ದು, ವೈದ್ಯರಾಗುವುದರಿಂದ ಸಾಕಷ್ಟು ಹಣವನ್ನು ಗಳಿಸಬಹುದು. ಅಲ್ಲದೆ ಸಮಾಜದಲ್ಲಿ ಉತ್ತಮ ಹೆಸರು ಮಾಡಬಹುದು.
ಕಂಪ್ಯೂಟರ್ ಸಾಫ್ಟ್ ವೇರ್ ವಿನ್ಯಾಸ, ಕಂಪ್ಯೂಟರ್ ಪ್ರೋಗ್ರಾಮಿಂಗ್, ಡೇಟಾಬೇಸ್ ನಿರ್ವಹಣೆ ಮತ್ತು ಇತರ ವಿಷಯಗಳ ಮೇಲೆ ಕೇಂದ್ರೀಕರಿಸುತ್ತದೆ. ಈ ಕೋರ್ಸ್ ನಲ್ಲಿಯೂ ವಿದ್ಯಾರ್ಥಿಗಳಿಗೆ ವೃತ್ತಿ ಅವಕಾಶಗಳು ಅಪಾರವಾಗಿದೆ.
ಪತ್ರಿಕೋದ್ಯಮ( Journalism) ಕೋರ್ಸ್ ಇದು ಮಾಧ್ಯಮ, ಬರವಣಿಗೆ, ಸಂವಹನ ತಂತ್ರಗಳು, ಚಲನಚಿತ್ರ ತಯಾರಿಕೆ ಮತ್ತು ವಿನ್ಯಾಸ ಇತ್ಯಾದಿಗಳ ವಿಷಯಗಳ ಮೇಲೆ ಕೇಂದ್ರೀಕರಿಸುತ್ತದೆ. ದೇಶದ ಹಲವು ವಿಶ್ವವಿದ್ಯಾಲಯಗಳು ಈ ಕೋರ್ಸ್ ಅನ್ನು ನೀಡುತ್ತವೆ.
ಹ್ಯೂಮನಿಟಿಸ್(Humanities) ಇದು ಮಾನವ ಸಂಪನ್ಮೂಲ, ಜನರ ಅಭಿವೃದ್ಧಿ ಮತ್ತು ಮಾನವ ಸಂಪನ್ಮೂಲ ನಿರ್ವಹಣೆಯಂತಹ ವಿಷಯಗಳ ಮೇಲೆ ಕೇಂದ್ರೀಕರಿಸುತ್ತದೆ. ಸೈನ್ಸ್, ಕಾಮರ್ಸ್ ಇಷ್ಟವಿಲ್ಲದವರು ಇದನ್ನು ಆಯ್ಕೆ ಮಾಡಿಕೊಳ್ಳಬಹುದು.
ಇದಲ್ಲದೆ ಪಿಯುಸಿ ಆದ ನಂತರ ಮಾಡುವ ಕೋರ್ಸ್ಗಳು ಸಾವಿರಾರು ಇವೆ. ಆದರೆ ಮೊದಲು ವಿದ್ಯಾರ್ಥಿಗಳು ತಮಗೆ ಯಾವ ಕೋರ್ಸ್ ಮೇಲೆ ಆಸಕ್ತಿ ಇದೆ ಎಂದು ಮನಸಿನಲಿಟ್ಟು ತಮ್ಮ ಆಯ್ಕೆಗಳನ್ನು ಮಾಡಬೇಕಾಗುತ್ತದೆ.