Husband Viral Video : ಪರಸ್ತ್ರೀಯೊಂದಿಗೆ ಗಂಡನ ಕುಚ್‌ಕು ಕುಚ್‌ಕು, ರೆಡ್‌ಹ್ಯಾಂಡಾಗಿ ಹಿಡಿದೇ ಬಿಟ್ಟಳು ಹೆಂಡತಿ !

Share the Article

Husband Viral Video : ಗಂಡ ಹೆಂಡತಿ (husband and wife )ಎಂದರೆ ಅವರಿಬ್ಬರ ಸಂಬಂಧ ಹಾಲು ಜೇನಿನಂತೆ ಇರಬೇಕು. ಹಾಗೆಯೇ ಇರಲು ಬಯಸುತ್ತಾರೆ ಸಹ. ಆದರೆ ಅದೇ ಹಾಲು ಜೇನಿನ ಸಂಬಂಧ ನಡುವೆ ಹುಳಿ ಹಿಂಡಲು ಬಂದರೆ ಹೆಂಡತಿಯಾದವಳು ಸುಮ್ಮನೆ ಇರಲಾರಳು. ಹೌದು ಜಗತ್ತಿನಲ್ಲಿ ಹೆಂಡತಿ ತನ್ನ ಗಂಡನನ್ನು ಯಾವುದೇ ಕಾರಣಕ್ಕೂ ಪರ ಸ್ತ್ರೀ ಗೆ ಬಿಟ್ಟು ಕೊಡಲು ಸಿದ್ಧಳಿರುವುದಿಲ್ಲ. ಹಾಗೆಯೇ ಇಲ್ಲೊಬ್ಬಳು ಏನು ಮಾಡಿದ್ದಾಳೆ ನೋಡಿ.

ಸಹಿಸಿಕೊಂಡಷ್ಟು ಹೆಣ್ಣಿಗೆ ನೋವು ಕೊಡುವ ಈ ಪ್ರಪಂಚದಲ್ಲಿ ಈಗ ಹೆಣ್ಣಿಗೂ ಪ್ರತೀ ವಿಷಯದಲ್ಲೂ ಸಮಾನತೆಯನ್ನು ನೀಡುತ್ತಿದೆ. ಹಾಗಿರುವಾಗ ತನ್ನ ಸಂಸಾರವನ್ನು ಸಹ ಕಾಪಾಡಿಕೊಳ್ಳಲು ಯಾವ ರೂಪ ಬೇಕಾದರೂ ತಾಳುತ್ತಾಳೆ ಅನ್ನೋದಕ್ಕೆ ಇದೇ ಉದಾಹರಣೆ(example ).

ಸದ್ಯ ಪತಿಯು ಪರ ಸ್ತ್ರಿಯೊಂದಿಗೆ ಸಂಬಂಧ ಇರಿಸಿಕೊಂಡಿರುವುದು ಪತ್ನಿಗೆ ಗೊತ್ತಾಗಿದೆ. ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿರುವ ಪತಿಯನ್ನು ಪತ್ನಿ ಬೀದಿಗೆ ಎಳೆದು ತಂದಿದ್ದಾಳೆ. ಅಲ್ಲದೆ ಎಲ್ಲರೆದುದು ಮಾನ ಮರ್ಯಾದೆ ಮೂರುಕಾಸಿಗೆ ಹರಾಜು ಆಗುವಂತೆ ಸಾಕು ಸಾಕು ಎನ್ನುವಷ್ಟು ಬಾರಿಸಿದ್ದಾಳೆ.

ಪತಿಯ ಮೇಲಿದ್ದ ಬೇಸರದ ಭಾವನೆಗಳು, ಮತ್ತು ಕೋಪವನ್ನು ಒಟ್ಟಾಗಿ ತನ್ನ ಕೈ ಮೂಲಕ ತೊರ್ಪಡಿಸಿದ್ದಾಳೆ. ಅದೇ ವೇಳೆಯಲ್ಲಿ ಎರಡನೇ ಮದುವೆಯಾಗುತ್ತೀಯಾ ಎನ್ನುವ ಪ್ರಶ್ನೆಯನ್ನು ಆ ಪತ್ನಿ ಮಾಡುತ್ತಿದ್ದಾಳೆ.

ಸದ್ಯ Arhant Shelby ಎಂಬವರು ತಮ್ಮ ಟ್ವಿಟ್ಟರ್(Twitter )ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಸಾವಿರಾರು ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಅಲ್ಲದೆ ಇಂತಹ ತಪ್ಪು ದಾರಿ ಹಿಡಿಯುವ ಗಂಡಸರಿಗೆ ಬುದ್ಧಿ ಬರಬೇಕೆಂದರೆ ಹೀಗೆಯೇ ಆಗಬೇಕು ಎಂದು ಕಾಮೆಂಟ್ ಮಾಡಿದ್ದಾರೆ.

ಮೊದಲೆಲ್ಲಾ ಗಂಡ ಮಾಡಿದ್ದೆಲ್ಲವೂ ಸರಿ, ಗಂಡ ಏನೇ ಮಾಡಿದರೂ ಸುಮ್ಮನೆ ಸಹಿಸಿಕೊಂಡು ಹೋಗಬೇಕು ಎಂದು ಹೆಣ್ಣು ಮಕ್ಕಳಿಗೆ ಪಾಠ ಹೇಳಿಕೊಡುವ ಕಾಲವೊಂದಿತ್ತು. ಮಾನ ಮರ್ಯಾದೆಗೆ ಅಂಜಿ ಬದುಕಬೇಕು. ಆದರೆ ಈಗ ಹಾಗಲ್ಲ, ಕಾಲ ಬದಲಾಗಿದೆ. ಯಾವ ಸಂದರ್ಭದಲ್ಲಿ ಹೇಗೆ ಸೆಟೆದು ನಿಲ್ಲಬೇಕು ಎನ್ನುವುದು ಹೆಣ್ಣಿಗೂ ತಿಳಿದಿದೆ. ಒಟ್ಟಿನಲ್ಲಿ ಹೆಣ್ಣು ಸಹ ಸಮಾಜದಲ್ಲಿ ಸಮಾನ ಗೌರವ ಪಡೆಯಲು ಬಯಸುವುದರಲ್ಲಿ ತಪ್ಪಿಲ್ಲ.

Leave A Reply