Nikki Haley : ನಾನು ಅಮೆರಿಕಾದ ಅಧ್ಯಕ್ಷಳಾದರೆ, ಶತ್ರು ರಾಷ್ಟ್ರಗಳಿಗೆ ನಯಾ ಪೈಸೆ ಹೋಗದಂತೆ ಮಾಡುತ್ತೇನೆ : ನಿಕ್ಕಿ ಹ್ಯಾಲೆ

Nikki Haley : ತಾನು ಅಧ್ಯಕ್ಷಳಾದರೆ ಶತ್ರುರಾಷ್ಟ್ರಗಳಿಗೆ ಹೋಗುತ್ತಿರುವ ಪ್ರತೀ ಪೈಸೆಯನ್ನೂ ತಡೆಯುತ್ತೇನೆ ಎಂದಿರುವ ಭಾರತೀಯ ಮೂಲದ ಅಮೆರಿಕನ್(American)ಅಧ್ಯಕ್ಷೀಯ ಅಭ್ಯರ್ಥಿ(Presidential Candidate) ನಿಕ್ಕಿ ಹ್ಯಾಲೆ(Nikki Haley) ಅವರು, ಪಾಕಿಸ್ತಾನ(Pakistana), ಚೀನಾ(Chaina) ದೇಶಗಳಿಗೆ ಹೋಗುತ್ತಿರುವ ಆರ್ಥಿಕ ನೆರವು ನಿಲ್ಲಿಸುವ ಪ್ರತಿಜ್ಞೆ ಮಾಡಿದ್ದಾರೆ.

ಇತ್ತೀಚೆಗಷ್ಟೇ ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಉಮೇದುವಾರಿಕೆ ಸಲ್ಲಿಸಿರುವ ಭಾರತೀಯ ಮೂಲದ ನಿಕ್ಕಿ ಹ್ಯಾಲೆ ನ್ಯೂಯಾರ್ಕ್(Newyork) ಪೋಸ್ಟ್ ಗೆ ನೀಡಿರುವ ವಿಶೇಷ ಒಪೆಡ್ ಬರಹದಲ್ಲಿ ಪರೋಕ್ಷವಾಗಿ ಪಾಕಿಸ್ತಾನ ಮತ್ತು ಚೀನಾ ದೇಶಗಳು ತಮ್ಮ ಶತ್ರು ರಾಷ್ಚ್ರಗಳು ಎಂದು ಕರೆದಿದ್ದಾರೆ. ಅಮೆರಿಕವನ್ನು ದ್ವೇಷಿಸುವ ದೇಶಗಳಿಗೆ ವಿದೇಶಿ ನೆರವು ನಿಲ್ಲಿಸಬೇಕಿದೆ. ಇದು ಚೀನಾ, ಪಾಕಿಸ್ತಾನ ಮತ್ತು ಇತರೆ ವಿರೋಧಿಗಳನ್ನು ಒಳಗೊಂಡಿದೆ ಎಂದ ಅವರು, ನಾನು ಅಮೆರಿಕ ಅಧ್ಯಕ್ಷಳಾಗಿ ಆಯ್ಕೆಯಾದರೆ ಶತ್ರುರಾಷ್ಟ್ರಗಳಿಗೆ ನೀಡಲಾಗುತ್ತಿರುವ ಆರ್ಥಿಕ ನೆರವನ್ನು ತಡೆಯುತ್ತೇನೆ. ಅಲ್ಲದೆ ಶತ್ರುರಾಷ್ಟ್ರಗಳಿಗೆ ನಯಾ ಪೈಸೆಯನ್ನೂ ಹೋಗಲು ಬಿಡುವುದಿಲ್ಲ ಎಂದಿದ್ದಾರೆ.

ಸೌತ್ ಕೆರೊಲಿನಾದ(South Korilino) ಮಾಜಿ ಗವರ್ನರ್ ಮತ್ತು ವಿಶ್ವಸಂಸ್ಥೆಯ ಅಮೆರಿಕಾದ ಮಾಜಿ ರಾಯಭಾರಿ ಕೂಡ ಆಗಿರುವ ನಿಕ್ಕಿ ಹ್ಯಾಲೆ, ‘ಡೆಮಾಕ್ರಟಿಕ್(Democratic) ಮತ್ತು ರಿಪಬ್ಲಿಕನ್(Republic) ಅಧ್ಯಕ್ಷೀಯ ಆಡಳಿತಗಳು ಕಳೆದ ವರ್ಷ ವಿದೇಶಿ ನೆರವಿಗಾಗಿ 46 ಶತಕೋಟಿ ಡಾಲರ್ ಖರ್ಚು ಮಾಡಿದೆ. ನಮ್ಮ ಜನರು ಕಷ್ಟಪಟ್ಟು ದುಡಿದ ಹಣವನ್ನು ವ್ಯರ್ಥ ಮಾಡಬೇಡಿ. ನಮ್ಮ ಶತ್ರುಗಳ ವಿರುದ್ಧ ಮತ್ತು ನಮ್ಮ ಸ್ನೇಹಿತರೊಂದಿಗೆ ನಿಲ್ಲುವ ನಾಯಕರು ಮಾತ್ರ ನಮ್ಮ ನಂಬಿಕೆಗೆ ಅರ್ಹರು. ತೆರಿಗೆದಾರರು ತಮ್ಮ ಹಣವನ್ನು ಎಲ್ಲಿ ಮತ್ತು ಯಾವುದಕ್ಕೆ ನೀಡುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕು. ಬಲವಾದ ಅಮೆರಿಕವು ಕೆಟ್ಟ ವ್ಯಕ್ತಿಗಳಿಗೆ ಸಹಾಯ ಹಸ್ತ ಚಾಚುವುದಿಲ್ಲ ಎಂದು ಹೇಳಿದ್ದಾರೆ ಎಂದಿದ್ದಾರೆ.

ಇದೇ ವೇಳೆ ಪರೋಕ್ಷವಾಗಿ ಹಾಲಿ ಅಧ್ಯಕ್ಷ ಜೋ ಬೈಡನ್(Jo Bidon) ಸರ್ಕಾರದ ವಿರುದ್ಧವೂ ಪರೋಕ್ಷ ಕಿಡಿಕಾರಿದ ಹ್ಯಾಲೆ, ‘ಬೈಡನ್ ಆಡಳಿತವು ಪಾಕಿಸ್ತಾನಕ್ಕೆ ಮಿಲಿಟರಿ ಸಹಾಯವನ್ನು ಪುನರಾರಂಭಿಸಿತು ಮತ್ತು ಅಮೆರಿಕನ್ ತೆರಿಗೆದಾರರು ಇನ್ನೂ ಹಾಸ್ಯಾಸ್ಪದವಾಗೇ ಉಳಿದಿರುವ ಕಮ್ಯುನಿಸ್ಟ್(Communist)ಚೀನಾಕ್ಕೆ ನೆರವು ನೀಡುತ್ತಿದ್ದಾರೆ. ನಾವು ರಷ್ಯಾದ ಸರ್ವಾಧಿಕಾರಿ ವ್ಲಾಡಿಮಿರ್ ಪುಟಿನ್ ಅವರ ಹತ್ತಿರದ ಮಿತ್ರ ರಾಷ್ಟ್ರ ಬೆಲಾರಸ್ಗೆ ಹಣವನ್ನು ನೀಡುತ್ತೇವೆ ಜೊತೆಗೆ ನಾವು ಕಮ್ಯುನಿಸ್ಟ್ ಕ್ಯೂಬಾಗೆ ಹಣವನ್ನು ನೀಡುತ್ತಿದ್ದೇವೆ’ ಎಂದು ಕಿಡಿಕಾರಿದರು.

ಅಲ್ಲದೆ ಇದು ಕೇವಲ ಜೋ ಬೈಡನ್ ಅಲ್ಲ. ಹಿಂದಿದ್ದ ಎರಡೂ ಪಕ್ಷಗಳ ಅಧ್ಯಕ್ಷರ ಆಡಳಿತದಲ್ಲಿ ದಶಕಗಳಿಂದಲೂ ಇದು ನಡೆಯುತ್ತಿದೆ. ನಮ್ಮ ವಿದೇಶಿ ನೆರವು ನೀತಿಗಳು ಹಿಂದೆ ಅಂಟಿಕೊಂಡಿವೆ. ನಮ್ಮ ಸಹಾಯವನ್ನು ಪಡೆಯುವ ದೇಶಗಳ ನಡವಳಿಕೆಯನ್ನು ಪರಿಗಣಿಸುವುದಿಲ್ಲ. ನಮ್ಮ ವಿರುದ್ಧ ಕೆಂಡ ಕಾರುವ ಚೀನಾದ ಮೇಲೆ ನಮ್ಮ ತೆರಿಗೆದಾರರ ಹಣ ವ್ಯರ್ಥವಾಗುತ್ತಿದೆ. ಚೀನಾ, ಅಮೆರಿಕನ್ನರಿಗೆ ಸ್ಪಷ್ಟ ಬೆದರಿಕೆಯಾಗಿದ್ದರೂ ಸಹ ಅಮೆರಿಕನ್ ತೆರಿಗೆದಾರರು ಇನ್ನೂ ಹಾಸ್ಯಾಸ್ಪದ ಪರಿಸರ ಕಾರ್ಯಕ್ರಮಗಳಿಗಾಗಿ ಕಮ್ಯುನಿಸ್ಟ್ ಚೀನಾಗೆ ಪಾವತಿಸುತ್ತಿದ್ದಾರೆ. ಇರಾನ್‌ನಲ್ಲಿ ‘ಅಮೆರಿಕಕ್ಕೆ ಸಾವು’ ಎಂದು ಕೂಗುವ ಮತ್ತು ಮಿಲಿಟರಿಯ ಮೇಲೆ ದಾಳಿ ಮಾಡುವ ಕೊಲೆಗಡುಕರಿಗೆ ಅಲ್ಲಿನ ಸರ್ಕಾರ ಹತ್ತಿರವಾಗುತ್ತಿದ್ದರೂ, ಅಮೆರಿಕ ಸರ್ಕಾರ ಮಾತ್ರ ಇರಾನ್‌ಗೆ $ 2 ಬಿಲಿಯನ್(1.5 ಸಾವಿರ ಕೋಟಿಗೂ ಹೆಚ್ಚು) ನೆರವು ನೀಡಿತು ಎಂದು ಹ್ಯಾಲೆ ಕಿಡಿಕಾರಿದ್ದಾರೆ.

ಇನ್ನು ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ರೇಸ್‌ಗೆ ಸೇರಿದ ಮೊದಲ ಭಾರತೀಯ ಅಮೆರಿಕನ್ ಮಹಿಳೆ ಹ್ಯಾಲೆ, ಈ ಹಿಂದೆ ರಿಪಬ್ಲಿಕನ್ ಪಕ್ಷಕ್ಕೆ ಹೊಸ ಭವಿಷ್ಯವನ್ನು ನಿರ್ಮಿಸುವ ಭಾರತೀಯ ವಲಸಿಗರ ಹೆಮ್ಮೆಯ ಪುತ್ರಿ ಎಂದು ಹ್ಯಾಲಿ ತನ್ನನ್ನು ತಾನು ತೋರಿಸಿಕೊಂಡಿದ್ದರು. ಅಮೆರಿಕದ ಶಕ್ತಿ, ರಾಷ್ಟ್ರೀಯ ಹೆಮ್ಮೆ ಮತ್ತು ಜನರ ನಂಬಿಕೆಯನ್ನು ಪುನಃಸ್ಥಾಪಿಸುವ ಗುರಿಯನ್ನು ಹೊಂದಿದ್ದೇನೆ ಎಂದಿರುವ ನಿಕ್ಕಿ ಹ್ಯಾಲೆ, ಅಧ್ಯಕ್ಷೀಯ ಚುನಾವಣೆ 2024ರ ಸ್ಪರ್ಧೆಯ ಪ್ರಚಾರವನ್ನು ಫೆಬ್ರವರಿ 15 ರಂದು ಅಧಿಕೃತವಾಗಿ ಪ್ರಾರಂಭಿಸಿದ್ದಾರೆ.

Leave A Reply

Your email address will not be published.