Kissing Device: ನೀವು ಸಂಗಾತಿಯಿಂದ ದೂರವಿದ್ದು ಮುತ್ತಿಸಿ, ಮುದ್ದಿಸಲು ಆಗುತ್ತಿಲ್ಲವೆ? ಡೋಂಟ್ವರಿ, ಇನ್ಮುಂದೆ ಈ ಸಾಧನದಿಂದ ಆನ್‌ಲೈನ್‌ನಲ್ಲೇ ಸ್ಮೂಚ್ ಮಾಡ್ಬೋದು
Kissing Device: ಪ್ರೇಮಿಗಳ ನಡುವೆ ಸಾಮಾನ್ಯವಾಗಿ ಏನು ನಡೆಯುತ್ತದೆ ಹೇಳಿ. ಪಸ್ಪರ ಪ್ರೀತಿಯನ್ನು ಹಂಚಿಕೊಳ್ಳುವುದು, ರೋಮ್ಯಾನ್ಸ್ ಮಾಡುವುದು ಇದ್ದೇ ಇರುತ್ತದೆ ಅಲ್ವಾ? ಆದ್ರೆ ಇದು ಇಬ್ಬರೂ ಹತ್ತಿರವಿದ್ದಾಗ ಮಾತ್ರ ಸಾಧ್ಯ. ಒಬ್ಬರಿಗೊಬ್ಬರು ದೂರವಿದ್ದರೆ ಇದೆಲ್ಲ ಅಸಾಧ್ಯ! ಹೀಗೆ ದೂರವಿರುವ ಪ್ರೇಮಿಗಳ ವಿರಹ ವಿವರಿಸಲು ಸಾಧ್ಯವಿಲ್ಲ ಬಿಡಿ. ಭೇಟಿಯಾಗಲು ಸಾಧ್ಯವಾಗದೆ, ಹತ್ತಿರ ಕುಳಿತು ಮಾತನಾಡಲೂ ಆಗದೆ, ಹಗ್ಗಿಂಗ್(Hugging), ಕಿಸ್ಸಿಂಗ್(Kissing) ಏನೂ ಇಲ್ಲದೆ ಒದ್ದಾಡುತ್ತಾರೆ. ಹಾಗಿದ್ರೆ ಚಿಂತೆ ಬಿಡಿ. ಯಾಕಂದ್ರೆ ಹೀಗೆ ಲಾಂಗ್ ಡಿಸ್ಟೆನ್ಸ್(Long Distance) ಜೋಡಿಗಳಿಗೆಂದೇ ಚೀನಾ(Chaina) ಹೊಸತೊಂದು ರೊಮ್ಯಾನ್ಸ್(Romance) ಸಾಧನ ಕಂಡು ಹಿಡಿದಿದೆ. ಏನಪ್ಪಾ ಅಂತಾದ್ದು ಅನ್ಕೊಳ್ತಿದ್ದೀರಾ? ಹಾಗಿದ್ರೆ ಈ ಸ್ಟೋರಿ ನೋಡಿ.
ಹೌದು, ರಿಲೇಶನ್ ಶಿಪ್‌ನಲ್ಲಿದ್ದು ಏನಾದರೂ ಕಾರಣಗಳಿಂದ ದೂರವಿದ್ದು, ತಮ್ಮ ಪ್ರೇಯಸಿ ಅಥವಾ ಸಂಗಾತಿಯ ಸ್ಪರ್ಶವಿಲ್ಲದೆ ವ್ಯಥೆ ಪಡೋರೆ ಹೆಚ್ಚು. ಹೀಗೆ ತೊಂದರೆ ಪಡೋರಿಗೆಂದೇ ಚೀನಾದಲ್ಲೊಬ್ಬ ವ್ಯಕ್ತಿ ಕಿಸ್ಸಿಂಗ್ ಡಿವೈಸ್‌ನ್ನು(Kissing Device) ಕಂಡು ಹಿಡಿದಿದ್ದಾರೆ. ಇದರ ಮೂಲಕ ನಿಮ್ಮ ಸಂಗಾತಿ ಯಾವ ಮೂಲೆಯಲ್ಲಿದ್ದರೂ ಅವರೊಂದಿಗೆ ನೀವು ಕಿಸ್ ಮಾಡಬಹುದು. ಇದನ್ನು ಕಂಡುಹಿಡಿದ ಜಿಯಾಂಗ್ ಝೊಂಗ್ಲಿ(Jiyang Jongli) ಅವರು ತಮ್ಮ ಗೆಳತಿ (Girlfriend)ಯಿಂದ ಅನಿವಾರ್ಯವಾಗಿ ದೂರವಿದ್ದರು. ಮತ್ತು ಫೋನ್ ಮೂಲಕ ಮಾತ್ರ ಸಂಪರ್ಕಿಸಲು ಸಾಧ್ಯವಾಗುತ್ತಿತ್ತು. ಹೀಗಾಗೀ ಇದುವೇ ಆತನಿಗೆ ಕಿಸ್ಸಿಂಗ್ ಡಿವೈಸ್ ಕಂಡುಹಿಡಿಯಲು ಸ್ಪೂರ್ತಿಯಾಗಿದೆಯಂತೆ.
ಇನ್ನು ಈ ಕಿಸ್ಸಿಂಗ್ ಡಿವೈಸ್ ಬಳಸುವುದು ಹೇಗೆ ಗೊತ್ತಾ?
ಇದನ್ನು ಬಳಸುವ ಮೊದಲು, ಬಳಕೆದಾರರು ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್(Download) ಮಾಡಬೇಕಾಗುತ್ತದೆ ಮತ್ತು ಸಾಧನವನ್ನು ಫೋನ್‌ನ ಚಾರ್ಜಿಂಗ್ ಪೋರ್ಟ್‌ಗೆ ಪ್ಲಗ್(Charging Plague) ಮಾಡಬೇಕಾಗುತ್ತದೆ. ಆ್ಯಪ್‌ನಲ್ಲಿ ಆ ಕಡೆಯಿಂದ ಸಂಗಾತಿ ಬಂದು ಜೋಡಿಯಾದ ನಂತರ, ಅವರು ವೀಡಿಯೊ ಕರೆಯನ್ನು ಪ್ರಾರಂಭಿಸಬಹುದು ಮತ್ತು ಅವರ ಚುಂಬನವನ್ನು ಪರಸ್ಪರ ವಿನಿಮಯ ಮಾಡಬಹುದಾಗಿದೆ. ಈ ಸಾಧನದ ಬೆಲೆ 288 ಯುವಾನ್ ಎಂದರೆ 3,433 ರೂ. ಎಂದು ತಿಳಿದುಬಂದಿದೆ.
ಅಲ್ಲದೆ ಈ ‘ಚುಂಬನ ಸಾಧನ’ ದೂರದ ಜೋಡಿಗಳು ಹತ್ತಿರದಲ್ಲೇ ಇದ್ದಾರೆ ಅನ್ನೋ ಭಾವನೆಯನ್ನು ತರುತ್ತದೆ. ‘ಸಿಲಿಕಾನ್ ಲಿಪ್ಸ್’ ಜೊತೆಗಿನ ಕಾಂಟ್ರಾಪ್ಶನ್ ಒತ್ತಡದ ಸಂವೇದಕಗಳು ಮತ್ತು ಪ್ರಚೋದಕಗಳನ್ನು ಹೊಂದಿದೆ ಮತ್ತು ನಿಜವಾಗಿಯೂ ಕಿಸ್ ಮಾಡಿದಂತಹ ಅನುಭವವನ್ನು ಕೊಡುತ್ತದೆ ಎಂದು ಚೀನಾ ನಡೆಸುತ್ತಿರುವ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ. ಇದರೊಂದಿಗೆ ಸಾಧನವು ಬಳಕೆದಾರರ ತುಟಿಗಳ (lips) ಒತ್ತಡ, ಚಲನೆ ಮತ್ತು ತಾಪಮಾನವನ್ನು ಪುನರಾವರ್ತಿಸುತ್ತದೆ ಎಂದು ವರದಿ ಹೇಳಿದೆ.
ಸದ್ಯ ಚೀನಾದ ಸಾಮಾಜಿಕ ಮಾಧ್ಯಮ ವಲಯಗಳಲ್ಲಿ ಈ ‘ಚುಂಬನದ ಸಾಧನ’ ಸಂಚಲನ ಮೂಡಿಸಿದೆ. ಅಲ್ಲದೆ ಈ ಕಿಸ್ಸಿಂಗ್ ಡಿವೈಸ್ ವೀಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂರೆ ಸೋಷಿಯಲ್ ಮೀಡಿಯಾದಲ್ಲಿ ಜನರು ಇದಕ್ಕೆ ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಕೆಲವು ಬಳಕೆದಾರರು ಇದನ್ನು ತಮಾಷೆ ಎಂದು ಕರೆದರೆ, ಇತರರು ಅದನ್ನು ‘ಅಶ್ಲೀಲ’ ಎಂದು ಕರೆದಿದ್ದಾರೆ. ಅಪ್ರಾಪ್ತ ವಯಸ್ಕರು ಅದನ್ನು ಖರೀದಿಸಬಹುದು ಮತ್ತು ಬಳಸಬಹುದು ಎಂದು ಕಳವಳವನ್ನೂ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಬಗೆ ಬಗೆಯಾಗಿ ಕಮೆಂಟಿಸುತ್ತಿದ್ದಾರೆ.
!