KSP Recruitment 2023 : ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ! ಈಗಲೇ ಅರ್ಜಿ ಸಲ್ಲಿಸಿ!!!

KSP Recruitment 2023: ಕರ್ನಾಟಕ ರಾಜ್ಯ ಪೊಲೀಸ್(Karnataka State Police) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ(Recruitment) ಪ್ರಕ್ರಿಯೆ ಆರಂಭಿಸಿದೆ. ಆಸಕ್ತ, ಅರ್ಹ ಅಭ್ಯರ್ಥಿಗಳು ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಪೊಲೀಸ್ ಹುದ್ದೆಗೆ ಸೇರಲು ಬಯಸುವ, ಕನಸು ಹೊತ್ತವರಿಗೆ ಇದು ಉತ್ತಮ ಅವಕಾಶವಾಗಿದ್ದು, ಈ ಕೂಡಲೇ ಅರ್ಜಿ ಸಲ್ಲಿಸಿ. ಹುದ್ದೆ (KSP Recruitment 2023)ಯ ಬಗೆಗಿನ ಮಾಹಿತಿ ಇಲ್ಲಿದೆ.

ಒಟ್ಟು 25 ಹುದ್ದೆಗಳು ಖಾಲಿ ಇದ್ದು, ಅಭ್ಯರ್ಥಿಗಳು ಆಫ್​ಲೈನ್​ ಅಥವಾ ಪೋಸ್ಟ್​ ಮೂಲಕ ಅರ್ಜಿ ಸಲ್ಲಿಸಬಹುದು. ಸರ್ಕಾರಿ ಹುದ್ದೆ ಬಯಸುವವರಿಗೆ ಇದು ಅತ್ಯುತ್ತಮ ಅವಕಾಶವಾಗಿದೆ. ಈ ಕೂಡಲೇ ಅರ್ಜಿ ಸಲ್ಲಿಸಿ, ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ.

ಹುದ್ದೆಯ ವಿವರ :
ಬೋಟ್ ಕ್ಯಾಪ್ಟನ್- 6
ಸಹಾಯಕ ಬೋಟ್ ಕ್ಯಾಪ್ಟನ್- 7
ಮೋಟಾರ್ ಲಾಂಚ್ ಮೆಕ್ಯಾನಿಕ್- 2
ಇಂಜಿನ್ ಡ್ರೈವರ್- 10

ಬೋಟ್ ಕ್ಯಾಪ್ಟನ್- ಪೊಲೀಸ್ ಉಪನಿರೀಕ್ಷಕರು
ಸಹಾಯಕ ಬೋಟ್ ಕ್ಯಾಪ್ಟನ್- ಸಹಾಯಕ ಪೊಲೀಸ್ ಉಪನಿರೀಕ್ಷಕರು
ಮೋಟಾರ್ ಲಾಂಚ್ ಮೆಕ್ಯಾನಿಕ್- ಸಹಾಯಕ ಪೊಲೀಸ್ ಉಪನಿರೀಕ್ಷಕರು
ಇಂಜಿನ್ ಡ್ರೈವರ್- ಪೊಲೀಸ್ ಹೆಡ್ ಕಾನ್ಸ್​ಟೇಬಲ್

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಆರಂಭ ದಿನಾಂಕ – 20/02/2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 8/3/2023

ವಿದ್ಯಾರ್ಹತೆ:
ನೇವಿ/ಕೋಸ್ಟ್​ಗಾರ್ಡ್​/ಬಿಎಸ್​ಎಫ್​ (ವಾಟರ್ ವಿಂಗ್​) ನಿಂದ ನಿವೃತ್ತಗೊಂಡ ಅಧಿಕಾರಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ವೆಬ್​ಸೈಟ್ ksp.gov.in ಗೆ ಭೇಟಿ ನೀಡಿ.

Leave A Reply

Your email address will not be published.