ನಗ್ನ ಅವತಾರದಲ್ಲಿ ಟೆನ್ನಿಸ್ ತಾರೆ ಕ್ಯಾರೋಲಿನ್ ವೋಜ್ನಿಯಾಕಿ | ಬಾಡಿ ಪೈಂಟಿಂಗ್ ನಲ್ಲಿ ಇದೀಗ ಪ್ರತ್ಯಕ್ಷ
ವಾಷಿಂಗ್ಟನ್: ಡೆನ್ಮಾರ್ಕ್ ನ ಟೆನ್ನಿಸ್ ತಾರೆ ಕ್ಯಾರೋಲಿನ್ ವೋಜ್ನಿಯಾಕಿ ತನ್ನ ಮೈಗೆ ಬಣ್ಣ ಹಚ್ಚಿಕೊಂಡು ( ಬಾಡಿ ಪೈಂಟಿಂಗ್ ) ಕ್ಯಾಮೆರಾ ಮುಂದೆ ನಿಂತಿದ್ದಾಳೆ. ಇದೀಗ ಅವಳ ಬತ್ತಲೆ ಮೈಯನ್ನು ಇಡೀ ಜಗತ್ತು ನೋಡಿದೆ.
ಕ್ಯಾರೋಲಿನ್ ವೋಜ್ನಿಯಾಕಿ ಒಂದು ಕಾಲದಲ್ಲಿ ಟೆನ್ನಿಸ್ ಲೋಕದಲ್ಲಿ ಮಿಂಚಿದ್ದ ತಾರೆ. ಅವರು 2018ರಲ್ಲಿ ಆಸ್ಟ್ರೇಲಿಯಾ ಓಪನ್ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದರು. ಆದರೆ 2020ರ ಮೊದಲ ಗ್ರ್ಯಾಂಡ್ ಸ್ಲ್ಯಾಮ್‍ನಲ್ಲಿ ಭಾಗವಹಿಸಿದ ನಂತರ ಜನವರಿ 24 ರಂದು ದಿಢೀರ್ ಆಗಿ ನಿವೃತ್ತಿ ಘೋಷಿಸಿ ಟೆನ್ನಿಸ್ ಪ್ರೇಮಿಗಳಿಗೆ ಆಘಾತ ನೀಡಿದ್ದರು.
29 ವರ್ಷದ ಕ್ಯಾರೋಲಿನ್ ವೋಜ್ನಿಯಾಕಿ ಅವರು ಟೆನ್ನಿಸ್ ನಿವೃತ್ತಿ ಬಳಿಕ ಮಾಡೆಲಿಂಗ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಈಗ ಆಕೆಗೆ ಅಮೆರಿಕದ ‘ಸ್ಪೋಟ್ರ್ಸ್ ಇಲ್ಯುಸ್ಟ್ರೇಟೆಡ್ ಸ್ವಿಮ್ ಸೂಟ್’ ನಿಯತಕಾಲಿಕೆ ಒಳ್ಳೆಯ ‘ ಆಫರ್ ‘ ನೀಡಿತ್ತು. ಅದಕ್ಕಾಗಿ ಆಕೆ ನಗ್ನಳಾಗಿ ಬೀಚೊಂದರಲ್ಲಿ ನಿಂತು ‘ಬಾಡಿ ಪೈಂಟಿಂಗ್’ ಮಾಡಿಸಿಕೊಂಡು ಸುದ್ದಿಯಾಗಿದ್ದಾಳೆ.
ಕ್ಯಾರೋಲಿನ್ ವೋಜ್ನಿಯಾಕಿ ಅವರು 15 ಗಂಟೆಗೂ ಅಧಿಕ ಸಮಯದಲ್ಲಿ ಬಾಡಿ ಪೇಂಟಿಂಗ್ ಮಾಡಿಸಿಕೊಂಡು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಅಮೆರಿಕದ ಸೇಂಟ್ ವಿನ್ಸೆಂಟ್‍ನ ಬೀಚ್‍ನಲ್ಲಿ ಖ್ಯಾತ ಛಾಯಾಗ್ರಾಹಕ ಫ್ರೆಡೆರಿಕ್ ಫಿನೆಟ್ ಮಾಜಿ ಟೆನ್ನಿಸ್ ಆಟಗಾರ್ತಿಯ ಸೌಂದರ್ಯವನ್ನು ಕಣ್ಣಲ್ಲೇ ಆಸ್ವಾದಿಸುತ್ತಾ ತಮ್ಮ ಕ್ಯಾಮೆರಾದಲ್ಲಿ ಕೂಡಾ ಅದನ್ನು ಸೆರೆ ಹಿಡಿದಿದ್ದಾರೆ. ಈ ತನಕ ಆಕೆಯ ಸೌಂದರ್ಯ ವಾನ್ನು ಆಕೆಯ ಬಾಯ್ ಫ್ರೆಂಡ್ ಡೇವಿಡ್ ಲೀ ಮಾತ್ರ ಕಂಡಿದ್ದ. ಇದೀಗ ಕ್ಯಾಮೆರಾ ಅದನ್ನು ಇಡೀ ಜಗತ್ತಿಗೇ ತೋರಿಸಿದೆ.