Supreme Court: ಕೊಲ್ಕತ್ತಾ ವೈದ್ಯೆ ರೇಪ್ ಕೇಸ್- ಸುಮೊಟೊ ಪ್ರಕರಣ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ ಬಂಗಾಳ ಸರ್ಕಾರಕ್ಕೆ ಛೀಮಾರಿ ಹಾಕಿ ಹೇಳಿದ್ದೇನು?
Supreme Court: ಕೋಲ್ಕತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಘಟನೆಗೆ ಸಂಬಂಧಿಸಿದಂತೆ ಸುಮೊಟೊ ಪ್ರಕರಣ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್(Supreme Court), ಘಟನೆಯನ್ನು ನಿಭಾಯಿಸಿದ ರೀತಿ ಕುರಿತು ಪಶ್ಚಿಮ ಬಂಗಾಳ(West Bengal) ಸರ್ಕಾರ ಮತ್ತು ಆಸ್ಪತ್ರೆ ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದೆ. ಸರ್ಕಾರಕ್ಕಂತೂ ಛೀಮಾರಿ ಹಾಕಿ ಡಿಜಿಪಿಯನ್ನ ತಕ್ಷಣವೇ ವಜಾ ಮಾಡಲು ಸೂಚನೆ ನೀಡಿದೆ
ಹೌದು, ಕೋಲ್ಕತಾದ(Kolkata) ವೈದ್ಯ ವಿದ್ಯಾರ್ಥಿನಿಯ ರೇಪ್ & ಮರ್ಡರ್(Rape and Murder) ಕೇಸ್‌ನಲ್ಲಿ ಮಂಗಳವಾರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಪ್ರಕರಣದ ಕುರಿತಾಗಿ ಆಗಸ್ಟ್ 22ರ ಒಳಗಾಗಿ ವಸ್ತುಸ್ಥಿತಿ ವರದಿ ನೀಡುವಂತೆ ಸಿಬಿಐಗೆ(CBI) ಸೂಚನೆ ನೀಡಿದೆ. ಇದೇ ವೇಳೆ ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರ, ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನ ಆಡಳಿತ ಮಂಡಳಿ, ಪಶ್ಚಿಮ ಬಂಗಾಳ ಪೊಲೀಸ್‌ಗೆ ಛೀಮಾರಿ ಹಾಕಿದೆ.
ಈ ಕೃತ್ಯದ ದಿಂದ ಇಡೀ ದೇಶ ಅಚ್ಚರಿಗೆ ಒಳಗಾಗಿದೆ. ವೈದ್ಯರನ್ನು ರಕ್ಷಣೆ ಮಾಡುವ ಎಲ್ಲಾ ವ್ಯವಸ್ಥೆ ವಿಫಲವಾಗಿದೆ. ಈ ಕೇಸ್‌ನ ತನಿಖೆ ಮಾಡುತ್ತಿರುವ ಸಿಬಿಐಗೆ ಸುಪ್ರೀಂ ಕೋರ್ಟ್ ಗುರುವಾರ ವರದಿ ಸಲ್ಲಿಕೆ ಮಾಡುವಂತೆ ಸೂಚನೆ ನೀಡಿದೆ. ಅಲ್ಲದೆ ಆಸ್ಪತ್ರೆ ಆಡಳಿತ ಮತ್ತು ಸ್ಥಳೀಯ ಪೊಲೀಸರ ನಡೆಗಳಿಗೆ ಸಂಧಿಸಿದಂತೆ ನ್ಯಾಯಪೀಠವು ಅನೇಕ ಪ್ರಶ್ನೆಗಳನ್ನು ಎತ್ತಿದೆ. “ಶವವನ್ನು ಅಂತ್ಯಸಂಸ್ಕಾರಕ್ಕಾಗಿ ಹಸ್ತಾಂತರ ಮಾಡಿದ ಮೂರು ಗಂಟೆಗಳ ಬಳಿಕ ಎಫ್‌ಐಆರ್ ದಾಖಲು ಮಾಡಿರುವುದು ಏಕೆ?” ಎಂದು ಸಿಜೆಐ ನೇತೃತ್ವದಲ್ಲಿ ನ್ಯಾಯಮೂರ್ತಿಗಳಾದ ಜೆಬಿ ಪರ್ಡಿವಾಲಾ ಮತ್ತಉ ಮನೋಜ್ ಮಿಶ್ರಾ ಅವರನ್ನು ಒಳಗೊಂಡ ಪೀಠ ಕೇಳಿದೆ.
ಜೊತೆಗೆ ಪ್ರಾಂಶುಪಾಲರು ಏನು ಮಾಡುತ್ತಿದ್ದರು? ಎಫ್‌ಐಆರ್ ದಾಖಲು ಮಾಡಿರಲಿಲ್ಲ; ಶವವನ್ನು ಪೋಷಕರಿಗೆ ನೀಡಿದ್ದು ತಡವಾಗಿ. ಪೊಲೀಸರು ಏನು ಮಾಡುತ್ತಿದ್ದರು? ಗಂಭೀರ ಅಪರಾಧ ನಡೆದಿದೆ, ಅಪರಾಧದ ಸ್ಥಳ ಆಸ್ಪತ್ರೆ… ಅವರು ಏನು ಮಾಡುತ್ತಿದ್ದಾರೆ? ವಿಧ್ವಂಸಕರು ಆಸ್ಪತ್ರೆಗೆ ಬರಲು ಬಿಡುತ್ತಿದ್ದಾರೆಯೇ?” ಎಂದು ಸಿಜೆಐ ಸಿಡಿಮಿಡಿಗೊಂಡಿದ್ದಾರೆ.
ಬಂಗಾಳ ಸರ್ಕಾರಕ್ಕೆ ತಾಕೀತು:
ಅಧಿಕಾರವನ್ನು ಪ್ರತಿಭಟನೆ ನಡೆಸುತ್ತಿರುವವರ ಮೇಲೆ ಪ್ರಯೋಗಿಸಬೇಡಿ ಎಂದು ಬಂಗಾಳ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತೀಕ್ಷ್ಣವಾಗಿ ತಾಕೀತು ಮಾಡಿದೆ. ವೈದ್ಯರೇ ಇರಲಿ ಅಥವಾ ನಾಗರಿಕರಿರಲಿ, ಅವರನ್ನು ಯಾವ ಕಾರಣಕ್ಕೂ ಹತ್ತಿಕ್ಕುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇರುವುದಿಲ್ಲ ಎಂದು ಸಿಜೆಐ ಚಂದ್ರಚೂಡ್ ಹೇಳಿದರು. ಆಸ್ಪತ್ರೆಯಲ್ಲಿ ನಡೆದ ದಾಂಧಲೆಯ ಘಟನೆಯನ್ನು ನಿಭಾಯಿಸುವುದು ರಾಜ್ಯ ಸರ್ಕಾರಕ್ಕೆ ಏಕೆ ಸಾಧ್ಯವಾಗಲಿಲ್ಲ ಎನ್ನುವುದು ತಮಗೆ ಅರ್ಥವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದರೊಂದಿಗೆ ವೈದ್ಯರ ರಕ್ಷಣೆಯ ಸಲುವಾಗಿ ಸುಪ್ರೀಂ ಕೋರ್ಟ್ ನೇತೃತ್ವದಲ್ಲಿಯೇ ರಾಷ್ಟ್ರೀಯ ಕಾರ್ಯಪಡೆಯನ್ನು ರಚನೆ ಮಾಡಲಿದ್ದೇವೆ. ಇದರಲ್ಲಿ ಸರ್ಜನ್ ವೈಸ್ ಅಡ್ಮಿರಲ್ ಆರ್ ಸರಿನ್, ಡಾ ಡಿ ನಾಗೇಶ್ವರ ರೆಡ್ಡಿ, ಡಾ ಎಂ ಶ್ರೀನಿವಾಸ್, ಡಾ ಪ್ರತಿಮಾ ಮೂರ್ತಿ, ಡಾ ಗೋವರ್ಧನ್ ದತ್ ಪುರಿ, ಡಾ ಸೌಮಿತ್ರಾ ರಾವತ್ಪ್ರೊ ಏಮ್ಸ್ ದೆಹಲಿಯ ಕಾರ್ಡಿಯಾಲಜಿ ಮುಖ್ಯಸ್ಥೆ ಅನಿತಾ ಸಕ್ಸೇನಾ, ಮುಂಬೈನ ಡೀನ್ ಗ್ರಾಂಟ್ ಮೆಡಿಕಲ್ ಕಾಲೇಜಿನ ಪ್ರೊ ಪಲ್ಲವಿ ಸಪ್ರೆ, ಏಮ್ಸ್‌ನ ನರವಿಜ್ಞಾನ ವಿಭಾಗದ ಡಾ ಪದ್ಮಾ ಶ್ರೀವಾಸ್ತವ ಇರಲಿದ್ದಾರೆ. ರಾಷ್ಟ್ರೀಯ ಕಾರ್ಯಪಡೆಯ ಪದನಿಮಿತ್ತ ಸದಸ್ಯರಾಗಿ ಕೇಂದ್ರ ಕ್ಯಾಬಿನೆಟ್ ಕಾರ್ಯದರ್ಶಿ, ಕೇಂದ್ರ ಗೃಹ ಕಾರ್ಯದರ್ಶಿ, ಕೇಂದ್ರ ಆರೋಗ್ಯ ಸಚಿವಾಲಯ, ರಾಷ್ಟ್ರೀಯ ವೈದ್ಯಕೀಯ ಆಯೋಗದ ಅಧ್ಯಕ್ಷರು ಇರಲಿದ್ದಾರೆ ಎಂದು ತಿಳಿಸಿದೆ. ಈ ಕಾರ್ಯಪಡೆಯು ಸುಪ್ರೀಂ ಕೋರ್ಟ್‌ಗೆ ತನ್ನ ವರದಿಯನ್ನು ಸಲ್ಲಿಕೆ ಮಾಡಲಿದೆ ಎಂದು ತಿಳಿಸಿದೆ.
This post has really opened my eyes.
Valuable info. Lucky me I found your site unintentionally, and I’m stunned why this accident did not came about in advance! I bookmarked it.