WiFi password: ವೈಫೈ ಪಾಸ್ವರ್ಡ್ ಮರೆತರೆ ಏನು ಮಾಡೋದು ಅಂತ ಚಿಂತಿಸುತ್ತಿದ್ದಿರಾ?? ಈ ವಿಧಾನ ಅನುಸರಿಸಿ ಪಾಸ್ವರ್ಡ್ ಮರಳಿ ಪಡೆಯಿರಿ!

 

ಕೋರೋನಾ ಎಂಬ ಮಹಾಮಾರಿ ಎಂಟ್ರಿ ಕೊಟ್ಟ ಮೇಲೆ ವರ್ಕ್ ಫ್ರಮ್ ಅನ್ನೋ ಆಪ್ಷನ್ ಬಂದು ಇದರ ಜೊತೆಗೆ ಮನೆಯೊಳಗೆ ಬಂಧಿಯಾಗಿ ಆನ್ಲೈನ್ ಫುಡ್ ಆರ್ಡರ್, ಆನ್ಲೈನ್ ನಲ್ಲೆ ಎಲ್ಲ ಕೆಲ್ಸ ಕಾರ್ಯಗಳನ್ನು ಮಾಡುವ ಹಾಗೆ ಆಗಿದ್ದು ಇದಲ್ಲದೆ ವಿದ್ಯಾರ್ಥಿಗಳಿಗೂ ಆನ್ಲೈನ್ ಕ್ಲಾಸ್ ಶುರುವಾದ ಮೇಲೆ,ಹೆಚ್ಚಿನವರು ನೆಟ್ ವರ್ಕ್ ಸಿಗದೇ ಪರದಾಡುವುದನ್ನು ತಪ್ಪಿಸಲು ವೈಫೈ ಬಳಕೆ ಮಾಡುತ್ತಿರೋದು ಗೊತ್ತಿರುವ ವಿಚಾರವೇ. ಆದರೇ, ಈ ವೈಫೈ ಪಾಸ್ ವರ್ಡ್ ಮರೆತು ಹೋದರೆ ಏನು ಮಾಡೋದು? ಅನ್ನೋ ಪ್ರಶ್ನೆ ನಿಮಗೆ ಸಹಜವಾಗಿ ಕಾಡಿರಬಹುದು.ಇದಕ್ಕೆ ಉತ್ತರ ನಾವು ಹೇಳ್ತೀವಿ ಕೇಳಿ!

 

ಒಮ್ಮೆ ಪಾಸ್‌ವರ್ಡ್ ಸೆಟ್ ಮಾಡಿದ ನಂತರ ಸಹಜವಾಗಿ ನಾವು ವೈಫೈ ಉಪಯೋಗಿಸುತ್ತಾ ಹೋಗುತ್ತೇವೆ. ಒಮ್ಮೆ ಪಾಸ್ವರ್ಡ್ ಹಾಕಿದ ಬಳಿಕ ಮತ್ತೆ ಪಾಸ್‌ವರ್ಡ್ ನಮೂದಿಸುವ ತಾಪತ್ರಯ ಇಲ್ಲದೆ ಇರುವುದರಿಂದ ಪಾಸ್ ವರ್ಡ್ ಏನು ಹಾಕಿದ್ದೇವೆ ಎಂಬುದು ಮರೆತುಹೋಗುತ್ತದೆ. ಆದ್ರೆ, ಒಂದು ವೇಳೆ, ಹೊಸ ಮೊಬೈಲ್ ಇಲ್ಲವೇ ಸಾಧನ ಖರೀದಿ ಮಾಡಿದ್ರಿ ಎಂದಿಟ್ಟುಕೊಳ್ಳಿ. ಆಗ ವೈಫೈ ಪಾಸ್ ವರ್ಡ್ ಬೇಕಾಗುತ್ತದೆ. ಆಗ , ಪಾಸ್ ವರ್ಡ್ ಏನು ಎಂದು ಚಿಂತೆಗೆ ಬೀಳುವಂತೆ ಆಗುತ್ತದೆ. ಆದರೆ, ಕೆಲವು ಸರಳ ವಿಧಾನಗಳನ್ನು ಅನುಸರಿಸಿದರೆ, ನಿಮ್ಮ ವೈಫೈ ಪಾಸ್ ವರ್ಡ್ ಅನ್ನು ಮರಳಿ ಪಡೆಯಬಹುದು.

 

ಹಾಗಾದ್ರೆ, ಏನು ಮಾಡಬೇಕು ಅಂತೀರಾ?? ವೈ-ಫೈ ಪಾಸ್‌ವರ್ಡ್ ಅನ್ನು ಹೇಗೆ ಮರುಪಡೆಯೋದು ಎನ್ನುವ ವಿವರ ಇಲ್ಲಿದೆ.

ವೈ-ಫೈ ನೆಟ್‌ವರ್ಕ್‌ಗೆ ಸಂಪರ್ಕಗೊಂಡಿರುವ ಪಿಸಿಯನ್ನು ಬಳಸಿಕೊಂಡು ನೀವು ವೈ-ಫೈ ಪಾಸ್‌ವರ್ಡ್ ಅನ್ನು ಮರುಪಡೆಯಬಹುದಾಗಿದೆ. ಇದಕ್ಕಾಗಿ ಮೊದಲು ಸ್ಟಾರ್ಟ್ ಗೆ ಹೋಗಿ ಅಲ್ಲಿ ನಿಯಂತ್ರಣ ಫಲಕದ ಬಳಿಕ ನೆಟ್‌ವರ್ಕ್ ಮತ್ತು ಹಂಚಿಕೆ ಕೇಂದ್ರಕ್ಕೆ ಹೋಗಬೇಕು. Windows 8 ಕಂಪ್ಯೂಟರ್‌ನಲ್ಲಿ, ನೀವು Windows Key +C ಅನ್ನು ಟ್ಯಾಪ್ ಮಾಡಬಹುದಾಗಿದೆ. ಆ ಬಳಿಕ ಹುಡುಕಾಟ ಕ್ಲಿಕ್ ಮಾಡಿ ಮತ್ತು ನೆಟ್‌ವರ್ಕ್ ಮತ್ತು ಹಂಚಿಕೆ ಕೇಂದ್ರವನ್ನು ಹುಡುಕಲು ಸಾಧ್ಯವಾಗುತ್ತದೆ. ನಂತರ, ಎಡ ಸೈಡ್‌ಬಾರ್‌ನಲ್ಲಿ ಅಡಾಪ್ಟರ್ ಸೆಟ್ಟಿಂಗ್‌ಗಳನ್ನು ಬದಲಾಯಿಸಿ ಕ್ಲಿಕ್ ಮಾಡಬೇಕು. ನೀವು ಬಳಸುತ್ತಿರುವ ವೈ-ಫೈ ನೆಟ್‌ವರ್ಕ್ ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು ಸ್ಟೇಟಸ್ ಮೇಲೆ ಕ್ಲಿಕ್ ಮಾಡಬೇಕು.

 

ಆ ಬಳಿಕ, ವೈರ್‌ಲೆಸ್ ಪ್ರಾಪರ್ಟೀಸ್ ಮೇಲೆ ಕ್ಲಿಕ್ ಮಾಡಿ ಮತ್ತು ಸೆಕ್ಯುರಿಟಿ ಟ್ಯಾಬ್ ಮೇಲೆ ಕ್ಲಿಕ್ ಮಾಡಬೇಕು. ಈಗ ನೀವು Wi-Fi ನೆಟ್ವರ್ಕ್ ಹೆಸರು ಮತ್ತು ಪಾಸ್‌ವರ್ಡ್ ಅನ್ನು ನೋಡಬಹುದಾಗಿದೆ. ಇಲ್ಲಿ ನೀವು ಕೆಳಗೆ ನೀಡಲಾದ ಚೆಕ್ ಅಕ್ಷರಗಳ ಮೇಲೆ ಕ್ಲಿಕ್ ಮಾಡಿದ ಕೂಡಲೇ ನಿಮಗೆ ಪಾಸ್‌ವರ್ಡ್ ಕಂಡುಬರುತ್ತದೆ. ಆದರೆ, ಇಲ್ಲಿ ಗಮನಿಸಬೇಕಾದ ಮುಖ್ಯ ವಿಚಾರವೇನೆಂದರೆ, ನೀವು ಈ ಪಾಸ್ವರ್ಡ್ ಅನ್ನು ಹ್ಯಾಕ್ ಮಾಡುವ ತಂತ್ರಗಾರಿಕೆಗೆ ಬಳಕೆ ಮಾಡದೇ ನಿಮ್ಮ ವೈಯಕ್ತಿಕ ವೈಫೈ ಪಾಸ್ವರ್ಡ್ ಮರುಪಡೆಯಲು ಮಾತ್ರ ಬಳಕೆ ಮಾಡೋದು ಉತ್ತಮ.

Leave A Reply

Your email address will not be published.