Home Education ಮಹಿಳೆಯರೇ ನಿಮಗೊಂದು ಸುವರ್ಣಾವಕಾಶ! ಡಿಜಿಟಲ್ ಮಾರ್ಕೆಟಿಂಗ್ ತರಬೇತಿ ಪಡೆಯಲು ಆಸಕ್ತಿ ಇದೆಯೇ? ಹಾಗಾದ್ರೆ ಇಲ್ಲಿದೆ ನೋಡಿ...

ಮಹಿಳೆಯರೇ ನಿಮಗೊಂದು ಸುವರ್ಣಾವಕಾಶ! ಡಿಜಿಟಲ್ ಮಾರ್ಕೆಟಿಂಗ್ ತರಬೇತಿ ಪಡೆಯಲು ಆಸಕ್ತಿ ಇದೆಯೇ? ಹಾಗಾದ್ರೆ ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್!

Hindu neighbor gifts plot of land

Hindu neighbour gifts land to Muslim journalist

ಮಹಿಳೆಯರೇ, ನಿಮಗೊಂದು ಸುವರ್ಣಾವಕಾಶ ಇಲ್ಲಿದೆ! ಉಬುಂಟು ಒಕ್ಕೂಟದ ಅಂಗವಾಗಿರುವ ಕೆ.ಲ್ಯಾಂಪ್ ವತಿಯಿಂದ ಫೆಬ್ರವರಿ 27 ರಂದು ಕಲಬುರಗಿಯ ದೊಡ್ಡಪ್ಪ ಅಪ್ಪ ಸಭಾ ಮಂಟಪದಲ್ಲಿ ಮಹಿಳೆಯರಿಗಾಗಿ ಡಿಜಿಟಲ್ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ.

ವಿದ್ಯಾರ್ಥಿನಿಯರು, ಮಹಿಳಾ ಉದ್ದಿಮೆದಾರರು, ಯುವತಿಯರು, ಸ್ವಂತ ವ್ಯವಹಾರ ಆರಂಭಿಸುವ ಇಚ್ಛೆಯುಳ್ಳವರು ಈ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ. ಈ ಹಿಂದೆ ಬೆಂಗಳೂರು ಮತ್ತು ಮೈಸೂರಿನಲ್ಲಿ ಮಹಿಳೆಯರಿಗೆ ಡಿಜಿಟಲ್ ಮಾರ್ಕೆಟಿಂಗ್ ತರಬೇತಿ ಕಾರ್ಯಕ್ರಮವನ್ನು ಉಬುಂಟು ಸಂಸ್ಥೆ ಆಯೋಜಿಸಿತ್ತು.

ಈ ಹಿಂದೆ 250 ಪ್ರತಿನಿಧಿಗಳು ಡಿಜಿಟಲ್ ಮಾರ್ಕೆಟಿಂಗ್ ಕುರಿತು ತಿಳಿದುಕೊಂಡು ಒಳ್ಳೆಯ ಅಭಿಪ್ರಾಯ ತಿಳಿಸಿದ್ದಾರೆ. ಹೀಗಾಗಿ ಈ ಕಾರ್ಯಕ್ರಮದ ಮುಂದಿನ ಭಾಗವಾಗಿ ಫೆಬ್ರವರಿ 27 ರಂದು ಕಲಬುರಗಿ ನಗರದಲ್ಲಿ ಡಿಜಿಟಲ್ ಮಾರ್ಕೆಟಿಂಗ್ ತರಬೇತಿಯನ್ನು ಮಹಿಳೆಯರಿಗೆಂದೇ ಹಮ್ಮಿಕೊಳ್ಳಲಾಗಿದೆ. ಆಸಕ್ತ ಮಹಿಳೆಯರು ಫೆಬ್ರವರಿ 21 ರ ಒಳಗೆ ಉಬುಂಟು ಸಂಸ್ಥೆಯ ಲಿಂಕ್​ ಮೂಲಕ ತಮ್ಮ ಹೆಸರನ್ನು ಉಚಿತವಾಗಿ ನೊಂದಾಯಿಸಿಕೊಳ್ಳಬಹುದಾಗಿದೆ.

ತರಬೇತಿಗೆ ಆಗಮಿಸುವ ಮಹಿಳೆಯರು ಲ್ಯಾಪ್ಟಾಪ್ ಅಥವಾ ಟ್ಯಾಬ್ ತರುವುದು ಕಡ್ಡಾಯವಾಗಿದೆ. ಹೆಚ್ಚಿನ ಮಾಹಿತಿಗಾಗಿ ಡಾ.ಸರ್ವಮಂಗಳ-9448219816 ಮತ್ತು ಭಾರತಿ ಪಾಟೀಲ್-9481166148 ಅವರನ್ನು ಸಂಪರ್ಕಿಸಲು ಮಾಹಿತಿ ನೀಡಲಾಗಿದೆ. ಡಿಜಿಟಲ್ ಲೋಕದಲ್ಲಿ ತಮ್ಮ ಸ್ವಂತ ಹೆಜ್ಜೆ ಗುರುತನ್ನು ಛಾಪಿಸಲು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದಾಗಿದೆ.