Valentine’s Day 2023 : ಈ ಪ್ರೊಡಕ್ಟ್‌ ಖರೀದಿಸಿದರೆ ಸಿನಿಮಾ ಟಿಕೆಟ್‌ ಫ್ರೀ ಫ್ರೀ | ಪ್ರೇಮಿಗಳೇ ಈ ಅವಕಾಶ ಮಿಸ್‌ ಮಾಡಬೇಡಿ!

ಪ್ರಸಿದ್ಧ ಇ-ಕಾಮರ್ಸ್ ವೆಬೆಸೈಟ್ ಆದ ಫ್ಲಿಪ್ ಕಾರ್ಟ್ ಗ್ರಾಹಕರಿಗೆ ಒಂದಲ್ಲ ಒಂದು ಆಫರ್ ನೀಡುವ ಮೂಲಕ ಜನರನ್ನು ತನ್ನತ್ತ ಸೆಳೆಯುತ್ತಿದೆ. ಇದೀಗ ಪ್ರೇಮಿಗಳ ದಿನ ಬರುತ್ತಿದ್ದ ಹಾಗೆ ಅಮೆಜಾನ್, ಫ್ಲಿಪ್ ಕಾರ್ಟ್ ಸೇರಿದಂತೆ ಹಲವು ವೆಬ್ ಸೈಟ್ ಗಳು ಗ್ರಾಹಕರಿಗೆ ಆಫರ್ ನೀಡಲು ಮುಂದಾಗುತ್ತಿದೆ. ಸದ್ಯ ಜನಪ್ರಿಯ ಇಕಾಮರ್ಸ್​​ ಕಂಪೆನಿಯಾಗಿರುವ ಫ್ಲಿಪ್​ಕಾರ್ಟ್​ ಪ್ರೇಮಿಗಳ ದಿನದ ಪ್ರಯುಕ್ತ ಪ್ರೇಮಿಗಳಿಗಾಗಿ ಉತ್ತಮ ಆಫರ್​ ನೀಡುತ್ತಿದೆ. ಫ್ಲಿಪ್​ಕಾರ್ಟ್​​ ವ್ಯಾಲೆಂಟೈನ್ಸ್​ ಡೇ ಆಫರ್ ಸೇಲ್ ಅನ್ನು ಆರಂಭಿಸಿದ್ದು, ಈ ಮೂಲಕ ಗ್ರಾಹಕರು 2 ಉಚಿತ ಸಿನಿಮಾ ಟಿಕೆಟ್ ಅನ್ನು ಪಡೆಯಬಹುದಾಗಿದೆ. ಈ ಬಂಪರ್ ಆಫರ್ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಗ್ರಾಹಕರು 2 ಉಚಿತ ಸಿನಿಮಾ ಟಿಕೆಟ್ ಅನ್ನು ಪಡೆಯಬೇಕು ಅಂದ್ರೆ ಅದಕ್ಕೆ ಗ್ರಾಹಕರು 800 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಉತ್ಪನ್ನಗಳು ಖರೀದಿಸಬೇಕು. ಆಗ ಮಾತ್ರ 2 ಉಚಿತ ಟಿಕೇಟ್ ಲಭ್ಯವಾಗುತ್ತದೆ. ಲಭ್ಯವಿರುವ ಟಿಕೆಟ್‌ಗಳು ಸೋಮವಾರದಿಂದ ಗುರುವಾರದವರೆಗೆ ಎಲ್ಲಾ ಆಟಗಳು/ ಪ್ರದರ್ಶನಗಳು ಮತ್ತು ವಾರಾಂತ್ಯದ ದಿನಗಳಾದ ಶುಕ್ರವಾರ, ಶನಿವಾರ ಮತ್ತು ಭಾನುವಾರದ ದಿನಗಳಲ್ಲಿ ಬೆಳಗ್ಗೆಯ ಪ್ರದರ್ಶನ ಒಳಗೊಂಡಿರುತ್ತವೆ ಎಂದು ವರದಿಯಲ್ಲಿ ತಿಳಿಸಿದೆ.

ಇನ್ನು ಈ ಉಚಿತ ಸಿನಿಮಾ ಟಿಕೆಟ್‌ ಪಡೆಯಲು ಗ್ರಾಹಕರು ಕನಿಷ್ಠ 18 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಆಗಿರಬೇಕು. ಮತ್ತು ಅವರ ಹೆಸರಿನಲ್ಲಿ ಫ್ಲಿಪ್‌ಕಾರ್ಟ್‌ ಇ-ಕಾಮರ್ಸ್‌ನಲ್ಲಿ ಖಾತೆ ಇರಬೇಕು. ಇದೀಗ ಉಚಿತ ಟಿಕೇಟ್ ಆಫರ್ ಆರಂಭವಾಗಿದ್ದು, ಇದನ್ನು ಪಡೆಯಲು ಗ್ರಾಹಕರು ಫೆಬ್ರವರಿ 14, ರಾತ್ರಿ 11.59 ರ ಒಳಗೆ ಖರೀದಿಯನ್ನು ಮಾಡಬೇಕು. ಇದರಲ್ಲಿ ನೀಡುವಂತಹ ಕೂಪನ್ ಅನ್ನು ಇದೇ ಏಪ್ರಿಲ್​ 30ರವರೆಗೆ ಬಳಸಬಹುದು. ಇನ್ನು ಫ್ಲಿಪ್​ಕಾರ್ಟ್​​ ನ ಈ ಆಫರ್​ ಕೆಲವು ದಿನಗಳವರೆಗೆ ಮಾತ್ರ ಲಭ್ಯವಿರುತ್ತದೆ.

ಫ್ಲಿಪ್​ಕಾರ್ಟ್​ನಲ್ಲಿ ಉಚಿತ ಟಿಕೆಟ್​ ಪಡೆಯುವುದು ಹೇಗೆ ?

  • ಫ್ಲಿಪ್‌ಕಾರ್ಟ್‌ ಆಪ್ ಓಪನ್ ಮಾಡಿ, ಅದರಲ್ಲಿ ಈವೆಂಟ್ ಪೇಜ್ ಗೆ ಹೋಗಿ, ನಂತರ 800 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಉತ್ಪನ್ನವನ್ನು ಖರೀದಿಸಿ.
  • ಬಳಿಕ ನಿಮಗೆ ಇಮೇಲ್ ಅಥವಾ ಟೆಕ್ಸ್ಟ್‌ ಮೂಲಕ ಡೆಲಿವರಿ ವೋಚರ್ ಅನ್ನು ಕಳುಹಿಸಲಾಗುತ್ತದೆ.
  • ನಂತರ ನೀವು ಕೂಪನ್ ಅನ್ನು ಸ್ಕ್ರಾಚ್ ಮಾಡಬೇಕು ಮತ್ತು ವೆಬ್‌ಸೈಟ್‌ಗೆ ಭೇಟಿ ನೀಡಬೇಕು.
  • ವೆಬ್ ಸೈಟ್ ನಲ್ಲಿ ಫೋನ್ ನಂಬರ್, ಇಮೇಲ್ ವಿಳಾಸ ಈ ಎಲ್ಲಾ ಮಾಹಿತಿಯನ್ನು ನೀಡಿ, ನಂತರ ವೋಚರ್ ಮೂಲಕ ಸ್ವೀಕರಿಸಿದ ಕೋಡ್ ಅನ್ನು ನಮೂದಿಸಿ ಮತ್ತು ‘ಸಲ್ಲಿಸು’ ಎಂಬ ಆಯ್ಕೆ ಕ್ಲಿಕ್ ಮಾಡಿ.
  • ಇಷ್ಟಾದ ಮೇಲೆ ನಿಮಗೆ 24 ಗಂಟೆಗಳ ಒಳಗೆ ಇಮೇಲ್ ಅಥವಾ ಟೆಕ್ಸ್ಟ್‌ ಮೂಲಕ ಓಟಿಪಿ ಬರುತ್ತದೆ.
  • ಎರಡು ಸಿನಿಮಾ, ಥಿಯೇಟರ್, ದಿನಾಂಕ ಮತ್ತು ಶೋ ಸಮಯವನ್ನು ಓಟಿಪಿ ಮೂಲಕ ನಮೂದಿಸಿ, ಬುಕ್ ಮಾಡಬಹುದು.
  • ಶೋ ಪ್ರಾರಂಭವಾಗುವ 24 ಗಂಟೆಗಳ ಮೊದಲು ನಿಮಗೆ ಸಿನಿಮಾ ಟಿಕೆಟ್‌ ಲಭ್ಯವಾಗುತ್ತದೆ.

ಇದಂತು ಪ್ರೇಮಿಗಳಿಗೆ ಉತ್ತಮ ಅವಕಾಶವಾಗಿದ್ದು, ಇಂತ ಆಫರ್ ಮಿಸ್ ಮಾಡ್ಕೊಂಡ್ರೆ ಮತ್ತೆ ಸಿಗೋದಿಲ್ಲ. ಈಗಲೇ ಬುಕ್ ಮಾಡಿ.

Leave A Reply

Your email address will not be published.