Food In Fridge : ಎಚ್ಚರ, ಈ ಆಹಾರಗಳನ್ನು ಫ್ರಿಜ್ ನಲ್ಲಿಡಬೇಡಿ!

ಇಂದಿನ ಬ್ಯುಸಿ ಷೆಡ್ಯೂಲ್’ನಲ್ಲಿ ಉತ್ತಮ ಆಹಾರದ ಕ್ರಮವನ್ನು ಎಲ್ಲರೂ ಮರೆತಿದ್ದಾರೆ ಎನ್ನಬಹುದು. ಪ್ರಸ್ತುತ ತಾಜಾ ಆಹಾರಗಳ ಸೇವನೆ ಮಾಡಲು ಸಮಯವೇ ಇಲ್ಲದಂತಾಗಿದೆ. ಈಗ ಎಲ್ಲರ ಮನೆಯಲ್ಲೂ ಫ್ರಿಜ್ ಇದೆ. ತಮಗಿಷ್ಟವಾದ ಆಹಾರ, ತಿಂಡಿ ತಿನಿಸುಗಳು, ತರಕಾರಿ – ಹಣ್ಣು ಹಂಪಲುಗಳು ಬೇಗ ಹಾಳಾಗದಂತೆ ತಡೆಯಲು ಫ್ರಿಡ್ಜ್’ನಲ್ಲಿ ಸಂಗ್ರಹಿಸುತ್ತಾರೆ. ಬೇಸಿಗೆಯಲ್ಲಂತೂ ಫ್ರಿಡ್ಜ್’ನ ಉಪಯೋಗ ಅನೇಕ. ಆ ಗರಂ ಸೆಖೆಗೆ ತಂಪು ತಂಪು… ಕೂಲ್ ಕೂಲ್ ಪಾನೀಯಾ ಕುಡಿಯುವ ಮಜಾನೇ ಬೇರೆ. ಆದರೆ ನಿಮಗೆ ಗೊತ್ತಾ? ಫ್ರಿಡ್ಜ್’ನಲ್ಲಿಟ್ಟ ಈ ಆಹಾರವನ್ನು ನೀವೆನಾದರೂ ಸೇವಿಸುತ್ತಿದ್ದರೆ ಈ ಕೂಡಲೇ ನಿಲ್ಲಿಸಿ. ಇಲ್ಲವಾದರೆ, ಫುಡ್ ಪಾಯಿಸನಿಂಗ್ ಆಗೋದು ಗ್ಯಾರಂಟಿ!!!

ಹೌದು, ರೆಫ್ರಿಜಿರೇಟರ್‌ನಲ್ಲಿ ದೀರ್ಘಕಾಲ ಇಟ್ಟ ಆಹಾರವನ್ನು ತಿನ್ನುವ ಮೊದಲು, ಅದರಿಂದಾಗುವ ಅನಾನುಕೂಲಗಳೇನು ಮತ್ತು ಎಷ್ಟು ಸಮಯದವರೆಗೆ ಇಡಬೇಕು ಎಂಬುದನ್ನು ತಿಳಿಯುವುದು ಬಹಳ ಅಗತ್ಯ. ಮುಖ್ಯವಾಗಿ ಬೇಯಿಸಿದ ಆಹಾರವನ್ನು ರೆಫ್ರಿಜರೇಟರ್‌ನಲ್ಲಿ ಇಡಬೇಡಿ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಶಾಖವು ಜೀವಸತ್ವಗಳನ್ನು ನಾಶಪಡಿಸುತ್ತದೆ, ಶೈತ್ಯೀಕರಣದ ಸಮಯದಲ್ಲಿ ತಂಪು ಮಾಡುವುದಿಲ್ಲ. ಬೇಯಿಸಿದ ಆಹಾರವನ್ನು ಗಾಳಿಯಾಡದ ಡಬ್ಬದಲ್ಲಿ ಇರಿಸಿದರೆ, ಅದು ಎರಡು-ಮೂರು ದಿನಗಳು ಅಥವಾ ಹೆಚ್ಚೆಂದರೆ ಒಂದು ವಾರದವರೆಗೆ ಇರುತ್ತದೆ. ನೀರಿನಲ್ಲಿ ಕರಗುವ ಜೀವಸತ್ವಗಳು ಅತ್ಯಂತ ಅಸ್ಥಿರ ಮತ್ತು ಸುಲಭವಾಗಿ ಕಳೆದುಕೊಳ್ಳುವ ಪೋಷಕಾಂಶಗಳಾಗಿವೆ.

ಫ್ರಿಡ್ಜ್ ನಲ್ಲಿ ತುಂಬಾ ದಿನದವರೆಗೆ ಸಂಗ್ರಹಿಸಿಟ್ಟು, ಪದಾರ್ಥಗಳನ್ನು ತಿನ್ನುವುದು ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತದೆ. ಅದರಲ್ಲೂ ಕೆಲವು ತರಕಾರಿ ಹಾಗೂ ಪದಾರ್ಥಗಳನ್ನು ಫ್ರಿಡ್ಜ್ ನಲ್ಲಿ ಇಟ್ಟು ತಿನ್ನಬಾರದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಹಾಗಾದ್ರೆ, ಬನ್ನಿ ಯಾವೆಲ್ಲಾ ಆಹಾರ ಪದಾರ್ಥಗಳನ್ನು ಫ್ರಿಡ್ಜ್’ನಲ್ಲಿಡಬಾರದು ಎಂಬುದನ್ನು ತಿಳಿಯೋಣ.

ಬೇಯಿಸಿದ ಅಥವಾ ಸರಳವಾಗಿ ಬೇಯಿಸಿದ ಆಹಾರದಲ್ಲಿ ಅತಿ ಸುಲಭವಾಗಿ ಬ್ಯಾಕ್ಟೀರಿಯಾಗಳು ಹುಟ್ಟಬಹುದು. ಅವು ಕಡಿಮೆ ತಾಪಮಾನದಲ್ಲಿಯೂ ಬದುಕುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಹಾಗಾಗಿ ಬೇಯಿಸಿದ ಆಹಾರವನ್ನು ಒಂದು ದಿನ ಅಥವಾ ಎರಡು ದಿನಗಳಲ್ಲಿ ಮಾತ್ರ ತಿನ್ನಬೇಕು.

ಮೊಟ್ಟೆ, ಡೈರಿ ಉತ್ಪನ್ನಗಳು, ಕೋಳಿ, ಮಾಂಸದಂತಹ ಹಾಳಾಗುವ ವಸ್ತುಗಳನ್ನು ರೆಫ್ರಿಜರೇಟರ್‌ನಲ್ಲಿ ಇಡಬಹುದು. ಆದರೆ, ಅವುಗಳನ್ನು ಒಂದು ವಾರದೊಳಗೆ ಸೇವಿಸಬೇಕು. ಆದರೆ ಬ್ರೆಡ್, ಹಣ್ಣುಗಳು, ತರಕಾರಿಗಳನ್ನು ದೀರ್ಘಕಾಲದವರೆಗೂ ಸಂಗ್ರಹಿಸಿಡಬಹುದು.

ತಜ್ಞರ ಪ್ರಕಾರ, ಫ್ರಿಜ್‌ ನಲ್ಲಿಟ್ಟ ಆಹಾರದಲ್ಲಿ ಮೂರ್ನಾಲ್ಕು ದಿನಗಳ ನಂತರ ಬ್ಯಾಕ್ಟೀರಿಯ ಉತ್ಪತ್ತಿಯಾಗಲು ಪ್ರಾರಂಭಿಸುತ್ತದೆ. ಇವುಗಳನ್ನು ದೀರ್ಘಕಾಲ ಇಟ್ಟುಕೊಂಡರೆ ಆಹಾರ ವಿಷವಾಗುವ ಸಾಧ್ಯತೆ ಹೆಚ್ಚುತ್ತದೆ. ಬ್ಯಾಕ್ಟೀರಿಯಾದ ಬೆಳವಣಿಗೆಯಿಂದಾಗಿ ಆಹಾರದ ಬಣ್ಣ, ವಾಸನೆ ಮತ್ತು ರುಚಿಯಲ್ಲಿ ಯಾವುದೇ ವ್ಯತ್ಯಾಸ ಉಂಟಾಗುವುದಿಲ್ಲ. ಹಾಗಾಗಿ ಫ್ರಿಜ್‌’ನಲ್ಲಿಟ್ಟ ಆಹಾರ ಸುರಕ್ಷಿತವೇ ಅಥವಾ ಇಲ್ಲವೇ ಎಂದು ಪತ್ತೆ ಹಚ್ಚುವುದು ಕಷ್ಟ.

ಈ ಕೆಲವೊಂದು ತರಕಾರಿಗಳನ್ನು ಫ್ರಿಡ್ಜ್’ನಲ್ಲಿಡ ಬಾರದು
ಈರುಳ್ಳಿ : ಈರುಳ್ಳಿಯನ್ನು ಫ್ರಿಜ್ ನಲ್ಲಿ ಸಂಗ್ರಹಿಸಿ ಇಡಬಾರದು ಅಂತಾರೆ ತಜ್ಞರು. ಏಕೆಂದರೆ ಫ್ರಿಡ್ಜ್ ನಲ್ಲಿ ಈರುಳ್ಳಿಯನ್ನು ಸಂಗ್ರಹಿಸಿಟ್ಟರೆ ಅದು ತನ್ನ ತೇವಾಂಶ ಕಳೆದುಕೊಳ್ಳುತ್ತದೆ.

ಬೆಳ್ಳುಳ್ಳಿ : ಬೆಳ್ಳುಳ್ಳಿಯನ್ನೂ ಸಹ ರೆಫ್ರಿಜರೇಟರ್‌ ನಲ್ಲಿ ಸಂಗ್ರಹಿಸಿಟ್ಟು ಸೇವನೆ ಮಾಡಬಾರದು. ಯಾಕಂದ್ರೆ ಬೆಳ್ಳುಳ್ಳಿ ಬೇಗ ಒಣಗಿ ರಬ್ಬರ್ ನಂತಾಗುತ್ತದೆ. ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ಯಾವಾಗಲೂ ಶುಷ್ಕ ಮತ್ತು ತಂಪಾದ ಸ್ಥಳದಲ್ಲಿ ಇಡಬೇಕು.

ಟೊಮೆಟೊ : ತರಕಾರಿಗಳಲ್ಲಿ ಟೊಮೆಟೋ ಎಲ್ಲರೂ ಸಾಮಾನ್ಯವಾಗಿ ಬಳಕೆ ಮಾಡುತ್ತಾರೆ. ಟೊಮೆಟೋವನ್ನು ವಾರ ಪೂರ್ತಿ ಸಂಗ್ರಹಿಸಿಟ್ಟು ತಿನ್ನುತ್ತಾರೆ. ಹೀಗಾಗಿ ಇದನ್ನು ಹೆಚ್ಚಾಗಿ ಫ್ರಿಡ್ಜ್ನಲ್ಲಿ ಇಡಲಾಗುತ್ತದೆ. ಟೊಮೆಟೊಗಳನ್ನು ಫ್ರಿಡ್ಜ್ ನಲ್ಲಿ ಸಂಗ್ರಹಿಸಿಟ್ಟರೆ ಅವುಗಳ ರುಚಿ, ಸುವಾಸನೆ, ರಸ ಕಳೆದು ಹೋಗುತ್ತದೆ. ಅಲ್ಲದೆ, ಪೋಷಣೆ ಹಾಳಾಗುತ್ತದೆ. ಟೊಮೆಟೊಗಳನ್ನು ಕೋಣೆಯ ಉಷ್ಣಾಂಶವಿದ್ದಲ್ಲಿ ಸಂಗ್ರಹಿಸಿಡಬೇಕು. ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.

Leave A Reply

Your email address will not be published.