ನಿಮ್ಮ ಬ್ಯಾಂಕ್‌ ಬ್ಯಾಲೆನ್ಸ್‌ನ್ನು ಆಧಾರ್‌ ಕಾರ್ಡ್‌ ಸಂಖ್ಯೆಯಿಂದ ಈ ರೀತಿ ಚೆಕ್‌ ಮಾಡಿ !

ಮನೆಯಲ್ಲಿ ಕುಳಿತು ಕೆಲವು ಹಂತಗಳನ್ನು ಅನುಸರಿಸುವ ಮೂಲಕ ನೀವು ಆಧಾರ್ ಕಾರ್ಡ್ ಸಂಖ್ಯೆಯ ಮೂಲಕ ನಿಮ್ಮ ಖಾತೆಯ ಬ್ಯಾಲೆನ್ಸ್ ಪರಿಶೀಲಿಸಬಹುದು. ಈ ಪ್ರಕ್ರಿಯೆಯಲ್ಲಿನ ವಿಶೇಷವೆಂದರೆ ನೀವು ಯಾವುದೇ ಬ್ಯಾಂಕಿಂಗ್ ಮೊಬೈಲ್ ಅಪ್ಲಿಕೇಶನ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ವ್ಯವಸ್ಥೆ ಬಳಸದಿದ್ದರೂ ಸಹ, ಈ ಪ್ರಕ್ರಿಯೆಯ ಮೂಲಕ ನಿಮ್ಮ ಬ್ಯಾಂಕ್ ಖಾತೆಯ ಬ್ಯಾಲೆನ್ಸ್‌ನ್ನು ಮನೆಯಲ್ಲಿ ಕುಳಿತು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.

ನಿಮ್ಮ ಆಧಾರ್ ಕಾರ್ಡನ್ನು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಮಾಡಿದಾಗ ಮಾತ್ರ ನಿಮ್ಮ ಬ್ಯಾಂಕ್ ಖಾತೆಯ ಬ್ಯಾಲೆನ್ಸ್ ನೀವು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ನಿಮ್ಮ ಸಾಮಾನ್ಯ ಕೀಪ್ಯಾಡ್ ಮೊಬೈಲ್ ಮತ್ತು ಸ್ಮಾರ್ಟ್‌ಫೋನ್ ಎರಡರಲ್ಲೂ ನೀವು ಈ ವೈಶಿಷ್ಟ್ಯವನ್ನು ಬಳಸಬಹುದು. ಈ ಪ್ರಕ್ರಿಯೆಯ ಮೂಲಕ ಬ್ಯಾಂಕ್ ಖಾತೆಯ ಬ್ಯಾಲೆನ್ಸ್ ಪರಿಶೀಲಿಸಲು ಯಾವುದೇ ಶುಲ್ಕವನ್ನು ತೆಗೆದುಕೊಳ್ಳುವುದಿಲ್ಲ ಎಂಬ ಮಾಹಿತಿ ತಿಳಿಸಲಾಗಿದೆ.

ಬ್ಯಾಂಕ್ ಬ್ಯಾಲೆನ್ಸ್‌ಗಳನ್ನು ಪರಿಶೀಲಿಸುವ ಕ್ರಮಗಳು :

ಹಂತ 1: ನಿಮ್ಮ ರಿಜಿಸ್ಟರ್‌ ಆದ ಮೊಬೈಲ್ ಸಂಖ್ಯೆಯನ್ನು ನೀವು ಹೊಂದಿರುವುದು ಮುಖ್ಯವಾಗಿದೆ.

ಹಂತ 2: ನಿಮ್ಮ ರಿಜಿಸ್ಟರ್‌ ಆದ ಮೊಬೈಲ್ ಸಂಖ್ಯೆಯಿಂದ 9999*1# ಗೆ ಡಯಲ್ ಮಾಡಿ

ಹಂತ 3: ನಿಮ್ಮ 12 ಡಿಜಿಟ್‌ಗಳ ಆಧಾರ್ ಸಂಖ್ಯೆಯನ್ನು ನಮೂದಿಸಿ.

ಹಂತ 4: ದೃಢೀಕರಣಕ್ಕಾಗಿ ನಿಮ್ಮ 12 ಡಿಜಿಟ್‌ಗಳ ಆಧಾರ್ ಸಂಖ್ಯೆಯನ್ನು ಮತ್ತೆ ನಮೂದಿಸಿ.

ಹಂತ 5: ನಿಮ್ಮ ಮೊಬೈಲ್‌ನಲ್ಲಿ ಫ್ಲ್ಯಾಶ್ ನೋಟಿಫಿಕೇಶನ್ ಬರಲಿದೆ. ಈ ನೋಟಿಫಿಕೇಶನ್‌ನಲ್ಲಿ ಬ್ಯಾಂಕ್ ಬ್ಯಾಲೆನ್ಸ್ ಮಾಹಿತಿ ಇರಲಿದೆ.

ಬ್ಯಾಂಕ್ ಖಾತೆಯಲ್ಲಿನ ಬಾಕಿ ಹಣ ಪರಿಶೀಲಿಸುವುದರ ಜೊತೆಗೆ, ಆಧಾರ್ ಕಾರ್ಡ್‌ ಬಳಕೆದಾರರು ಹಣ ಸಹ ವರ್ಗಾಯಿಸಲು ಅವಕಾಶ ಇದೆ. ಜೊತೆಗೆ ಪ್ಯಾನ್ ಕಾರ್ಡ್ ಪಡೆಯಲುಬಹುದು. ಮೊದಲು ಆಧಾರ್ ಸಂಖ್ಯೆ ನಮೂದಿಸಬೇಕು. ನಂತರ ಅಲ್ಲಿ ಪರದೆಯ ಮೇಲೆ ಬ್ಯಾಂಕ್ ಬ್ಯಾಲೆನ್ಸ್ನೊಂದಿಗೆ UIDAI ನಿಂದ ನೀವು ಫ್ಲಾಶ್ SMS ಅನ್ನು ಸ್ವೀಕರಿಸುತ್ತೀರಿ. ಬಳಿಕ ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ), ನಿಮ್ಮ ಫೋನ್ ಸಂಖ್ಯೆಯನ್ನು ನಿಮ್ಮ ಆಧಾರ್‌ಗೆ ಲಿಂಕ್ ಮಾಡುವುದು, ಮಾಹಿತಿ ನವೀಕರಣ, ಮನೆ ಬಾಗಿಲಿಗೆ ಸೇವೆ ನೀಡಲು ಚಿಂತನೆ ನಡೆಸಲಾಗಿದೆ ಎಂದು ಕೇಂದ್ರ ಮೂಲಗಳು ತಿಳಿಸಿವೆ.

ಸದ್ಯ ಈ ಮೇಲಿನಂತೆ ಭಾರತೀಯ ನಿವಾಸಿಗಳು ತಮ್ಮ ಆಧಾರ್ ಸಂಖ್ಯೆಗಳಿಗೆ ಸಂಪರ್ಕಗೊಂಡಿರುವ ತಮ್ಮ ಬ್ಯಾಂಕ್ ಖಾತೆಗಳ ಬ್ಯಾಲೆನ್ಸ್‌ನ್ನು ಆನ್‌ಲೈನ್‌ನಲ್ಲಿ ಶಾಖೆಗೆ ಹೋಗುವ ಅನಾನುಕೂಲತೆ ಇಲ್ಲದೆ ಪರಿಶೀಲಿಸಬಹುದಾಗಿದೆ.

Leave A Reply

Your email address will not be published.