ಮಾಧ್ಯಮಗಳೆದುರು ಕಣ್ಣೀರಿಟ್ಟ ‘ಭಾರತದ ಓಟದ ರಾಣಿ’! ಅಷ್ಟಕೂ ನಡೆದದ್ದೇನು ಗೊತ್ತಾ?

‘ಭಾರತದ ಓಟದ ರಾಣಿ’ ಎಂದೇ ಖ್ಯಾತಿ ಪಡೆದು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದವು ಪಿಟಿ ಉಷಾ ಅವರು. ಸದ್ಯ ಉಷಾ ಅವರು ಭಾರತೀಯ ಒಲಿಂಪಿಕ್ ಅಸೋಸಿಯೇಷನ್‌ನ (ಐಒಎ)ಮೊದಲ ಮಹಿಳಾ ಅಧ್ಯಕ್ಷೆಯಾಗಿ ಕಳೆದ ಡಿಸೆಂಬರಿನಲ್ಲಿ ಆಯ್ಕೆಯಾಗಿದ್ದು ,ತಮ್ಮ ಕರ್ತವ್ಯದಲ್ಲಿ ನಿರತರಾಗಿದ್ದಾರೆ. ಇದರೊಂದಿಗೆ ತಮ್ಮ ತವರು ರಾಜ್ಯವಾದ ಕೇರಳದ ಕಲ್ಲಿಕೋಟೆಯಲ್ಲಿ ಉಷಾ ಸ್ಕೂಲ್‌ ಆಫ್‌ ಅಥ್ಲೆಟಿಕ್ಸ್‌ ಎಂಬ ಸ್ವಂತ ಅಕಾಡೆಮಿಯನ್ನೂ ನಡೆಸಿಕೊಂಡು ಬರುತ್ತಿದ್ದಾರೆ.

ಇದೀಗ ತಮ್ಮ ಅಕಾಡೆಮಿ ವಿಚಾರವಾಗಿ ಉಷಾ ಚಿಂತೆಗೀಡಾಗಿದ್ದಾರೆ. ಅಲ್ಲದೆ ಇದರ ವಿಚಾರವಾಗಿ ಮಾಧ್ಯಮಗಳ ಮುಂದೆ ಕಣ್ಣೀರಿಟ್ಟಿರುವ ಘಟನೆ ಕೂಡ ಬೆಳಕಿಗೆ ಬಂದಿದೆ. ಹಾಗಾದ್ರೆ ಏನು ಸಮಸ್ಯೆ, ಭಾರತೀಯ ಒಲಿಂಪಿಕ್ಸ್ ಸಂಸ್ಥೆ ಅಧ್ಯಕ್ಷೆ ಹೀಗೆ ಏಕೆ ಏಕಿ ತಮ್ಮ ಅಳಲನ್ನು ತೋಡಿಕೊಳ್ಳಲು ಕಾರಣವೇನು? ಹಾಗಿದ್ರೆ ಈ ಸ್ಟೋರಿ ನೋಡಿ.

ಕೇರಳದಲ್ಲಿರುವ ಉಷಾ ಅವರ ಅಕಾಡೆಮಿಯ ಕ್ಯಾಂಪಸ್‌ನಲ್ಲಿ ದುಷ್ಕರ್ಮಿಗಳು ಡ್ರಗ್ಸ್ ದಂಧೆ, ಗೂಂಡಾಗಿರಿ ನಡೆಸುತ್ತಿದ್ದು, ಅಕಾಡೆಮಿಯ ವಿದ್ಯಾರ್ಥಿಗಳಿಗೆ ಭದ್ರತೆಯ ಸಮಸ್ಯೆ ಎದುರಾಗಿರುವುದು ಅಥ್ಲೆಟಿಕ್ ದಿಗ್ಗಜೆ ಹಾಗೂ ಭಾರತೀಯ ಒಲಿಂಪಿಕ್ಸ್‌ ಸಂಸ್ಥೆ(ಐಒಎ) ಅಧ್ಯಕ್ಷೆ ಪಿ.ಟಿ.ಉಷಾ ಶನಿವಾರ ಮಾಧ್ಯಮಗಳ ಮುಂದೆ ಕಣ್ಣೀರು ಹಾಕಲು ಕಾರಣವಾಗಿದೆ ಎಂದು ತಿಳಿದು ಬಂದಿದೆ.

ಈ ಕುರಿತು ನವದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಷಾ, ‘ಕಲ್ಲಿಕೋಟೆಯಲ್ಲಿರುವ ತಮ್ಮ ಉಷಾ ಸ್ಕೂಲ್‌ ಆಫ್‌ ಅಥ್ಲೆಟಿಕ್ಸ್‌ನ ಕ್ಯಾಂಪಸ್‌ನಲ್ಲಿ ಅಕ್ರಮ ಕಟ್ಟಡ ನಿರ್ಮಾಣವಾಗುತ್ತಿದೆ. ಡ್ರಗ್ಸ್ ಸೇವಿಸಲು ಕ್ಯಾಂಪಸ್‌ ಬಳಸುತ್ತಿದ್ದಾರೆ. ಇದನ್ನು ಪ್ರಶ್ನಿಸಿದಾಗ ಕೆಟ್ಟದಾಗಿ ಮಾತನಾಡಿದ್ದಾರೆ. ಕ್ಯಾಂಪಸ್‌ನಲ್ಲಿರುವ ವಿದ್ಯಾರ್ಥಿಗಳ ಇದರಿಂದ ಭಯಭೀತಗೊಂಡಿದ್ದು, ಭದ್ರತೆಯ ಸಮಸ್ಯೆ ಎದುರಿಸುತ್ತಿದ್ದಾರೆ’ ಎಂದು ಅಳಲು ತೋಡಿಕೊಂಡರು. ಜೊತೆಗೆ ಸೂಕ್ತ ರಕ್ಷಣೆ, ನ್ಯಾಯ ಒದಗಿಸುವಂತೆ ಕೇರಳ ಸಿಎಂ ಪಿಣರಾಯಿ ವಿಜಯನ್‌ಗೆ ಪತ್ರ ಕೂಡಾ ಬರೆದಿದ್ದಾರೆ.

ಭಾರತದಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ದೊರೆಯುವುದೇ ತುಂಬಾ ಕಡಿಮೆ. ಇಂತದರಲ್ಲಿ ತಮ್ಮ ತಮ್ಮ ಆಸಕ್ತಿ ಕ್ರೀಡೆಗಳ ಮೂಲಕ ಸಾಧನೆಗೈದವರು ಸಣ್ಣ ಪುಟ್ಟ ಅಕಾಡೆಮಿಗಳನ್ನು, ಟ್ರೈನಿಂಗ್ ಸೆಂಟರ್ ಗಳನ್ನು ಮಾಡಿಕೊಂಡು ಅನೇಕ ಹೊಸ ಕ್ರೀಡಾಪಟುಗಳನ್ನು ಹೊರ ತರುವ ಪ್ರಯತ್ನ ಮಾಡುತ್ತಿದ್ದಾರೆ. ಇಂತಹ ವಿಚಾರದಲ್ಲೂ ಅವರಿಗೆ ಭಧ್ರತೆ ದೊರೆಯದೇ ಇರುವುದು ವಿಷಾದನೀಯ. ಕೂಡಲೇ ಸರಕಾರಗಳು ಇದರ ಕುರಿತು ಎಚ್ಚೆತ್ತು ದುಷ್ಕರ್ಮಿಗಳಿಗೆ ತಕ್ಕ ಶಿಕ್ಷೆ ನೀಡಬೇಕು.

Leave A Reply

Your email address will not be published.