ಇನ್ನು ಮುಂದೆ ಮನುಷ್ಯರಿಗೆ ಮಾತ್ರವಲ್ಲ, ನಾಯಿಗೂ ಸಿಗುತ್ತೆ ಜಾತಿ ಪ್ರಮಾಣ ಪತ್ರ | ಹೇಗೆ ಅಂತೀರಾ?

ಬಿಹಾರದ ಗಯಾ ಜಿಲ್ಲೆಯಲ್ಲಿ  ಅಚ್ಚರಿಯ ಘಟನೆಯೊಂದು ನಡೆದಿದ್ದು, ಅರ್ಜಿ ಸಲ್ಲಿಕೆಗೆ ಕಳೆದ ತಿಂಗಳು ಜಾತಿವಾರು ಸಮೀಕ್ಷೆ ಶುರುವಾದ ಬಳಿಕ, ಜಾತಿ ಪ್ರಮಾಣ ಪತ್ರಕ್ಕಾಗಿ ವಿಲಕ್ಷಣ ಅರ್ಜಿ ಸಲ್ಲಿಕೆಯಾಗಿ ಅಧಿಕಾರಿಗಳು ದಂಗಾಗುವ ಘಟನೆ ನಡೆದಿದೆ. ಅಷ್ಟಕ್ಕೂ ಏನೀ ಕಹಾನಿ ಅಂತೀರಾ???

ಬಿಹಾರದ ಅಧಿಕಾರಿಗಳು ತಲೆ ಕೆಡಿಸಿಕೊಳ್ಳುವ ಹಾಗೆ ಮಾಡಿದ್ದು ಜನರ ಆಧಾರ್ ಸಂಖ್ಯೆಯಿಂದ ಜನ್ಮ ದಿನಾಂಕ ಮತ್ತು ವೃತ್ತಿಯನ್ನು ನಮೂದಿಸುವವರೆಗೆ ಎಲ್ಲ  ಅಪ್ಲಿಕೇಶನ್‌ ಕೂಡ ಸರಿ ಇತ್ತಂತೆ. ಹಾಗಿದ್ರೆ ಮತ್ತೇನಪ್ಪಾ ಮ್ಯಾಟರ್!!! ಆ ಅಧಿಕಾರಿಗಳು ತಲೆ ಕೆಡಿಸಿಕೊಳ್ಳುವ ಹಾಗೇ ಮಾಡಿದ  ಸಂಗತಿಯೆ ಬೇರೆ.  ಅರ್ಜಿ ಸಲ್ಲಿಸಿರುವುದು ಮನುಷ್ಯರಾಗಿರದೆ, ಬದಲಿಗೆ ನಾಯಿ ಎಂಬುದು ತಿಳಿದು ಅಧಿಕಾರಿಗಳು ಶಾಕ್ ಆಗಿ ಬಿಟ್ಟಿದ್ದಾರೆ. ಈ ಇಂಟರೆಸ್ಟಿಂಗ್ ವಿಷಯ ಕೇಳಿದ್ರೆ ನೀವು ಕೂಡ ಬೆರಗಾಗೋದ್ರಲ್ಲಿ ಡೌಟೆ ಇಲ್ಲ.

ಅರ್ಜಿ ಸಲ್ಲಿಕೆಯಾದ ಗುರಾರು ವಲಯ ಕಚೇರಿಯಲ್ಲಿ  ವಿಚಿತ್ರ ಘಟನೆ ನಡೆದಿದೆ.ಮೇಲೆ ತಿಳಿಸಿದಂತೆ ಆಧಾರ್ ಕಾರ್ಡ್‌ನಲ್ಲಿ ನಾಯಿಯ ಫೋಟೋವನ್ನು ಮುದ್ರಿಸಲಾಗಿದ್ದು ಅಷ್ಟೆ ಅಲ್ಲದೇ, ಕಾರ್ಡ್‌ನಲ್ಲಿರುವ ಹೆಸರು ಟಾಮಿ (ಸಾಕು ನಾಯಿಗಳಿಗೆ ಬಹಳ ಸಾಮಾನ್ಯವಾದ ಹೆಸರು) ಎಂದು ನಮೂದಿಸಲಾಗಿದೆ. ಅರ್ಜಿಯಲ್ಲಿ ಜನ್ಮ ದಿನಾಂಕ ಏಪ್ರಿಲ್ 4, 2022  ಎಂದಾಗಿದ್ದು, ಇದರೊಂದಿಗೆ ಗ್ರಾಮ ಪಾಂಡೆಪೋಖರ್, ಪಂಚಾಯತ್ ರೌನಾ, ವಾರ್ಡ್ ಸಂಖ್ಯೆ 13, ಗುರಾರು ವೃತ್ತ ಮತ್ತು ಪೊಲೀಸ್ ಠಾಣೆ ಕೊಂಚ್ ಅನ್ನು ಅರ್ಜಿದಾರರ ವಿಳಾಸವಾಗಿ ನಮೂದಿಸಲಾಗಿದೆ.  ತಂದೆ-ತಾಯಿಯ ಹೆಸರಿನ ಜಾಗದಲ್ಲಿ ತಂದೆಯ ಹೆಸರನ್ನು ಶೇರು ಎಂದು ಉಲ್ಲೇಖಿಸಿದ್ದರೆ ತಾಯಿ ಗಿನ್ನಿ ಎಂದು ನಮೂದಿಸಲಾಗಿದೆ. ಈ ನಡುವೆ ಟಾಮಿ ಚಿತ್ರವಿರುವ ಆಧಾರ್ ಕಾರ್ಡ್‌ನ ಫೋಟೋ ವೈರಲ್ ಆಗಿ ಟ್ರೆಂಡ್ ಸೃಷ್ಟಿಸುತ್ತಿದೆ. ಸದ್ಯ ಪೋಲೀಸರು ಅಧಿಕಾರಿಗಳ ಜೊತೆಗೆ ಹುಡುಗಾಟ ನಡೆಸಿದ  ಕಿಡಿಗೇಡಿಗಳನ್ನು ಹುಡುಕುವಲ್ಲಿ ನಿರತರಾಗಿದ್ದಾರೆ.

Leave A Reply

Your email address will not be published.