Airtel Recharge Plans: ಏರ್ ಟೆಲ್ ಬಿಡುಗಡೆ ಮಾಡಿದೆ ಅತ್ಯದ್ಭುತ ವ್ಯಾಲಿಡಿಟಿ ಹೊಂದಿರುವ ರೀಚಾರ್ಜ್ ಪ್ಲ್ಯಾನ್ಸ್​ ಇಲ್ಲಿದೆ!

ಟೆಲಿಕಾಂ ಕಂಪನಿಗಳು ತನ್ನ ರೀಚಾರ್ಜ್​ ಆಫರ್ಸ್​ ಮೂಲಕವೇ ಗ್ರಾಹಕರನ್ನು ತನ್ನತ್ತ ಸೆಳೆಯುವಂತೆ ಮಾಡುತ್ತದೆ. ಪ್ರಸಿದ್ಧ ಟೆಲಿಕಾಂ ಕಂಪೆನಿಗಳಲ್ಲಿ ಏರ್​ಟೆಲ್​ ಕೂಡಾ ಒಂದು. ಈ ಕಂಪೆನಿ ಮಾರುಕಟ್ಟೆಯಲ್ಲಿ ಅತೀ ಹಚ್ಚು ಗ್ರಾಹಕರನ್ನು ಹೊಂದಿರುವ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಅದೇ ರೀತಿ ಜಿಯೋ ನಂಬರ್​ ಒನ್ ಸ್ಥಾನದಲ್ಲಿದೆ. ಆದರೆ ಜಿಯೋ ಕಂಪೆನಿಗೆ ಪ್ರತಿಸ್ಪರ್ಧಿಯಾಗಿರುವ ಏರ್​ಟೆಲ್​ ಕಂಪೆನಿ ಸ್ಮಾರ್ಟ್​ಫೋನ್​ ಬಳಕೆದಾರರನ್ನು ತನ್ನತ್ತ ಆಕರ್ಷಿಸುವ ನಿಟ್ಟಿನಲ್ಲಿ ಹೊಸ ರೀಚಾರ್ಜ್​ ಯೋಜನೆಯನ್ನು ಬಿಡುಗಡೆ ಮಾಡಿದೆ.

ಹೌದು ಏರ್​ಟೆಲ್​ ಇದೀಗ ತನ್ನ ಗ್ರಾಹಕರಿಗಾಗಿ 359 ರೂಪಾಯಿಯ ಹೊಸ ಯೋಜನೆಯನ್ನು ಪರಿಚಯಿಸಿದ್ದು, ಈ ಯೋಜನೆಯನ್ನು ರೀಚಾರ್ಜ್​ ಮಾಡಿಕೊಂಡವರಿಗೆ 1 ತಿಂಗಳ ವ್ಯಾಲಿಡಿಟಿ ಅವಧಿಯನ್ನು ಪಡೆಯಬಹುದಾಗಿದೆ.

ಏರ್​ಟೆಲ್ ಕೆಲದಿನಗಳ ಹಿಂದೆ ಪರಿಚಯಿಸಿದ 359 ರೂಪಾಯಿಗಳ ರೀಚಾರ್ಜ್​ ಪ್ಲ್ಯಾನ್​ ಕೇವಲ 28 ದಿನಗಳಿಗೆ ಮಾತ್ರ ಮಾನ್ಯತೆಯನ್ನು ಹೊಂದಿತ್ತು. ಆದರೆ ಈ ಯೋಜನೆಯಲ್ಲಿ ಮಹತ್ವದ ಬದಲಾವಣೆಯಾಗಿದ್ದು, ಇದೀಗ ಈ ಯೋಜನೆಯನ್ನು ರೀಚಾರ್ಜ್ ಮಾಡಿಕೊಂಡವರಿಗೆ ಬರೋಬ್ಬರಿ 1 ತಿಂಗಳ ವ್ಯಾಲಿಡಿಟಿಯನ್ನು ಪಡೆಯಬಹುದು.

359 ರೂಪಾಯಿಗಳ ರೀಚಾರ್ಜ್​ ಪ್ಲ್ಯಾನ್​ ವಿಶೇಷತೆ :

  • ಏರ್​ಟೆಲ್ ಪರಿಚಯಿಸಿದ 359 ರೂಪಾಯಿಗಳ ರೀಚಾರ್ಜ್‌ ಪ್ಲ್ಯಾನ್‌ನಲ್ಲಿ ಗ್ರಾಹಕರು ದಿನವೂ 2ಜಿಬಿ ಡೇಟಾ ಸೌಲಭ್ಯವನ್ನು ಪಡೆಯಬಹುದು.
  • ಇದರೊಂದಿಗೆ 100 ಎಸ್‌ಎಮ್‌ಎಸ್‌ ಸೌಲಭ್ಯ ಸಹ ಲಭ್ಯವಿದೆ.
  • ಈ ಯೋಜನೆಯಲ್ಲಿ ಗ್ರಾಹಕರು ಯಾವುದೇ ನೆಟ್​ವರ್ಕ್​ಗೆ ಅನ್ಲಿಮಿಟೆಡ್​ ಕಾಲ್ ಮಾಡುವ ಸೌಲಭ್ಯ ಸಹ ದೊರೆಯುತ್ತದೆ.
  • ಬಳಕೆದಾರರು ಈ ಯೋಜನೆಯಲ್ಲಿ ಒಟ್ಟಾರೆಯಾಗಿ 60ಜಿಬಿ ಡೇಟಾ ಬಳಕೆ ಮಾಡಿಕೊಳ್ಳಬಹುದು.
  • ಹಾಗೆಯೇ 31 ದಿನಗಳಿರುವ ತಿಂಗಳಲ್ಲಿ 62ಜಿಬಿ ಡೇಟಾ ಸೌಲಭ್ಯ ಲಭ್ಯವಾಗಲಿದೆ.
  • ಇದರೊಂದಿಗೆ ಎಕ್ಸ್‌ಸ್ಟ್ರೀಮ್ ಆ್ಯಪ್​, ಅಪೋಲೋ 24/7 ಸರ್ಕಲ್, ಫಾಸ್ಟ್ಯಾಗ್​ನಲ್ಲೊ 100 ರೂಪಾಯಿ ಕ್ಯಾಶ್‌ಬ್ಯಾಕ್, ಉಚಿತ ಹೆಲೋಟ್ಯೂನ್ಸ್‌ ಮತ್ತು ಉಚಿತ ವಿಂಕ್ ಮ್ಯೂಸಿಕ್ ಚಂದಾದಾರಿಕೆಯೊಂದಿಗೆ ಇನ್ನೂ ಹಲವಾರು ಪ್ರಯೋಜನಗಳು ಇದರಲ್ಲಿ ಪಡೆಯಬಹುದಾಗಿದೆ.

ಅದಲ್ಲದೆ ಇದರ ಜೊತೆಗೆ ಏರ್​ಟೆಲ್​ನ ಈ 359 ರೂಪಾಯಿಗಳ ರೀಚಾರ್ಜ್​ ಪ್ಲ್ಯಾನ್​ ಬದಲಾಗಿ 549 ರೂಪಾಯಿಗಳ ರೀಚಾರ್ಜ್​ ಅನ್ನು ಮಾಡಿಕೊಳ್ಳಬಹುದಾಗಿದೆ. ಇದರಲ್ಲಿ ಗ್ರಾಹಕರು 359 ರೂಪಾಯಿಯಂತೇಯೇ ದೈನಂದಿನ 2ಜಿಬಿ ಡೇಟಾವನ್ನು ಪಡೆಯಬಹುದು. ಆದರೆ ವಿಶೇಷ ಏನೆಂದರೆ ಇದರಲ್ಲಿ ವ್ಯಾಲಿಡಿಟಿ ಅವಧಿಯು ಒಟ್ಟು 2 ತಿಂಗಳುವರೆಗೆ ಇರುತ್ತದೆ.
ಇನ್ನು 359 ರಂತೆ 2 ತಿಂಗಳು ರೀಚಾರ್ಜ್ ಮಾಡಿದರೆ ಒಟ್ಟು 718 ರೂಪಾಯಿ ಹಣವನ್ನು ಪಾವತಿಸಬೇಕು. ಆದರೆ 549 ರೂಪಾಯಿ ರೀಚಾರ್ಜ್ ಮೂಲಕ 169 ರೂಪಾಯಿಯನ್ನು ಉಳಿಸಬಹುದು.

ಸದ್ಯ ಈ ಪ್ಲ್ಯಾನ್​ ಹೆಚ್ಚು ಡೇಟಾ ಬಯಸುವವರಿಗೆ, ಅಧಿಕ ಎಸ್​ಎಮ್​ಎಸ್​ ಮಾಡುವವರಿಗೆ ಉತ್ತಮ ರೀಚಾರ್ಜ್ ಪ್ಲಾನ್ ಆಯ್ಕೆಯಾಗಿದೆ.

Leave A Reply

Your email address will not be published.