Home Interesting ಓದುಗರೇ ನಿಮಗೊಂದು ಸವಾಲು | ಈ ಚಿತ್ರದಲ್ಲಿ ತೋರಿಸಿರುವಂತೆ ಪೆಂಗ್ವಿನ್​​ಗಳ ಮಧ್ಯೆ ಅಡಗಿ ಕೂತಿರೋ ಬೆಕ್ಕುಗಳನ್ನು...

ಓದುಗರೇ ನಿಮಗೊಂದು ಸವಾಲು | ಈ ಚಿತ್ರದಲ್ಲಿ ತೋರಿಸಿರುವಂತೆ ಪೆಂಗ್ವಿನ್​​ಗಳ ಮಧ್ಯೆ ಅಡಗಿ ಕೂತಿರೋ ಬೆಕ್ಕುಗಳನ್ನು ಪತ್ತೆ ಹಚ್ಚ ಬಲ್ಲಿರಾ?

Hindu neighbor gifts plot of land

Hindu neighbour gifts land to Muslim journalist

ದಿನದಿಂದ ದಿನಕ್ಕೆ ಒಂದೊಂದೇ ರೀತಿಯ ವಿಶೇಷ ಮಾಹಿತಿಯಿಂದ ಹಿಡಿದು ವೈರಲ್ ವಿಡಿಯೋಗಳೆಲ್ಲ ಹರಿದಾಡುತ್ತಲೇ ಇದೆ. ಎಲ್ಲೆಲ್ಲೋ ನಡೆಯೋ ಘಟನೆಗಳು ಕ್ಷಣಾರ್ಧದಲ್ಲಿ ನಮ್ಮ ಕೈ ಸೇರಿರುತ್ತೆ. ಇದೇ ರೀತಿ ಓದುಗರಾದ ನಿಮ್ಮ ಕಣ್ಣಿಗೆ ಕೆಲಸ ಕೊಡೊ ಚಾಲೆಂಜ್ ಇಲ್ಲಿದೆ ನೋಡಿ.

ಅಂತರ್ಜಾಲದಲ್ಲಿ ಆಪ್ಟಿಕಲ್ ಭ್ರಮೆಯ ಫೋಟೋಗಳು ಹೆಚ್ಚಾಗಿ ವೈರಲ್ ಆಗುತ್ತಿದ್ದು, ಇವು ನೆಟ್ಟಿಗರನ್ನು ತಲೆ ಕೆರೆದುಕೊಳ್ಳುವಂತೆ ಮಾಡುವುದಲ್ಲದೆ ಕುತೂಹಲ ಮೂಡಿಸುವುದರಲ್ಲಿ ಸಂಶಯವೇ ಇಲ್ಲ. ಇದೀಗ ವೈರಲ್ ಆಗಿರುವ ಫೋಟೋದಲ್ಲಿ ನಿಮಗಿರುವ ಕೆಲಸ ಏನಪ್ಪಾ ಅಂದ್ರೆ ಪೆಂಗ್ವಿನ್​​ಗಳ ಮಧ್ಯೆ ಅಡಗಿ ಕೂತಿರೋ ಮೂರು ಬೆಕ್ಕುಗಳನ್ನು ಹುಡುಕೋ ಕೆಲಸ.

ಸೆಕೆಂಡುಗಳ ಲೆಕ್ಕದಲ್ಲಿ ಸಮಯ ಕೊಟ್ಟಾಗ ಅನೇಕರಿಗೆ ಇದು ಕಷ್ಟಕರವಾಗಿದ್ದಿದೆ. ಇನ್ನೂ ಕೆಲವರು ಸಮಯ ಮೀರಿದರೂ ಉತ್ತರ ಹುಡುಕುವುದರಲ್ಲಿ ಆಸಕ್ತಿ ವಹಿಸಿರುತ್ತೀರಿ. ಉತ್ತರ ಸಿಗದಿದ್ದರೂ ನಿಮ್ಮ ಚಿತ್ತವನ್ನು ಏಕಾಗ್ರಗೊಳಿಸಿಕೊಳ್ಳಲು ಮತ್ತು ಮೆದುಳಿಗೆ ವ್ಯಾಯಾಮ ನೀಡಲು ಇಂಥ ಚಟುವಟಿಕೆಗಳಲ್ಲಿ ಆಸಕ್ತಿಯಿಂದ ಭಾಗವಹಿಸುವುದು ಉತ್ತಮ.

ಹಂಗೇರಿಯನ್​ ಕಲಾವಿದ ಗ್ರೆಗರಿ ಡುಡಾಸ್​ ಈ ಚಿತ್ರವನ್ನು ಬಿಡಿಸಿದ್ದು, ತಲೆ, ಕಣ್ಣಿಗೆ ಕೆಲಸ ಕೊಟ್ಟು ಆದಷ್ಟು ಬೇಗ ಬೆಕ್ಕನ್ನು ಹಿಡಿಯೋ ಕೆಲಸ ನಿಮ್ಮದು. ನಿಮಗೆ 8 ಸೆಕೆಂಡುಗಳ ಕಾಲಾವಕಾಶವಿದ್ದು, ಆರಾಮಾಗಿ ಬೆಕ್ಕುಗಳನ್ನು ಹುಡುಕಿ. ಸಮಯ ಅಂತೂ ಶುರುವಾಗಿದ್ದು, ಇನ್ನೂ ಬೆಕ್ಕು ಸಿಕ್ಕೇ ಇಲ್ಲ ಅನ್ನೋರಿಗೆ ಒಂದು ಸುಳಿವು ನಾವು ನೀಡುತ್ತೇವೆ. ಅದೇನೆಂದರೆ, ಎರಡು ಬೆಕ್ಕುಗಳು ಚಿತ್ರದ ಬಲಭಾಗದ ಅಂಚಿನಲ್ಲಿವೆ. ಈಗ ಸುಲಭವಾಯಿತಲ್ಲ? ಇನ್ನೂ ತಡಮಾಡದೇ ರಪಕ್ಕನೆ ಬೆಕ್ಕನ್ನು ಹುಡುಕಿ.

ಎಂಟು ಸೆಕೆಂಡ್​ ಸಮಯದಲ್ಲಿ ಹುಡುಕಾಟ ನಡೆಸಿದ್ರೋ ಇಲ್ವೋ ಗೊತ್ತಿಲ್ಲ. ಆದ್ರೆ, ಹುಡುಕಿ ಸಾಕಾಗಿ ಚಾಲೆಂಜ್ ಅಲ್ಲಿ ಸೋತ್ರೀ ಅಂತ ಒಪ್ಪಿಕೊಂಡೋರು ಮಾತ್ರ ಈ ಕೆಳಗಿನ ಚಿತ್ರ ನೋಡಿ. ಒಂದು ವೇಳೆ ನೀವು ಮೊದಲೇ ಪತ್ತೆ ಹಚ್ಚಿದ್ರಿ ಎಂದಿದ್ರೆ ನಿಮ್ಮ ಕಣ್ಣು ತುಂಬಾ ಸೂಕ್ಷ್ಮ ಇದೆ ಎಂದು ಭಾವಿಸಿಕೊಳ್ಳಿ. ಇನ್ನೂ ಗುರುತಿಸಲು ಆಗದೇ, ಎಲ್ಲಿದೆ ಅಂತಾ ಹುಡುಕಾಡುತ್ತಿರುವವರು ಈ ಕೆಳಗಿನ ಚಿತ್ರವನ್ನು ನೋಡಿ ಉತ್ತರ ಪಡೆದುಕೊಳ್ಳಿ..ಮಾರ್ಕ್ ಮಾಡಿದ ಜಾಗ ಗಮನಿಸಿದ ಮೇಲೆ ನಿಮಗೆ ಹುಡುಕುತ್ತಿರುವ ಚಿತ್ರವು ಸ್ಪಷ್ಟವಾಗಿ ಕಾಣುತ್ತದೆ. ಅದೇ ಆಪ್ಟಿಕಲ್​ ಇಲ್ಲ್ಯೂಷನ್​ಗಾಗಿ ಚಿತ್ರಿಸಿದ ಡ್ರಾಯಿಂಗ್​, ರೇಖಾಚಿತ್ರಗಳ ಗುಟ್ಟು…