Home News viral video : ತನ್ನ ಪಾಡಿಗೆ ತಾನು ಓದುತ್ತಾ ಕುಳಿತಿದ್ದ ವಿದ್ಯಾರ್ಥಿಗೆ ವಿದ್ಯಾರ್ಥಿನಿಯರ ಕಾಟ |...

viral video : ತನ್ನ ಪಾಡಿಗೆ ತಾನು ಓದುತ್ತಾ ಕುಳಿತಿದ್ದ ವಿದ್ಯಾರ್ಥಿಗೆ ವಿದ್ಯಾರ್ಥಿನಿಯರ ಕಾಟ | ವಿದ್ಯಾರ್ಥಿಯ ಪಾಡು ನೋಡೋಕೆ ಆಗದು!

Hindu neighbor gifts plot of land

Hindu neighbour gifts land to Muslim journalist

ಹದಿನಾರು ತುಂಬಿದರೆ ಸಾಕು ಮಕ್ಕಳ ಬುದ್ಧಿ ಮಂಗನಂತೆ ಆಕಡೆ ಈಕಡೆ ರೆಂಬೆಯಿಂದ ರೆಂಬೆಗೆ ಹಾರುತ್ತ ಏನು ಮಾಡುತ್ತಿದ್ದೇವೆ, ಏನು ಮಾಡಲು ಹೊರಟಿದ್ದೇವೆ ಎನ್ನುವುದನ್ನು ಮರೆತಿರುತ್ತಾರೆ. ಮನಸ್ಸು ಚಂಚಲ ಸ್ಥಿತಿಯಲ್ಲಿ ಇರುವ ಈ ಸಮಯದಲ್ಲಿ ಒಂಟಿತನ ಕಾಡಿದರೆ ಪ್ರೀತಿ ಪ್ರೇಮ ಅಂತ ಬೇರೆಯೇ ಪ್ರಪಂಚದಲ್ಲಿ ಮುಳುಗುತ್ತಾರೆ. ಹಾಗೆಯೇ ಇಲ್ಲೊಂದು ಹುಡುಗನನ್ನು ಹುಡುಗಿಯರು ಚುಡಾಯಿಸುವ ವೀಡಿಯೋ ವೈರಲ್ ಆಗಿದೆ.

ಫಂಟಾಪ್ ಎಂಬ ಇನ್‌ಸ್ಟಾಗ್ರಾಮ್ ಪುಟದಲ್ಲಿ ಈ ವೀಡಿಯೊವನ್ನು ಹಂಚಿಕೊಳ್ಳಲಾಗಿದ್ದು, ಈ ವಿಡಿಯೋದಲ್ಲಿ ತರಗತಿಯಲ್ಲಿ ಹುಡುಗ ತನ್ನ ಪಾಡಿಗೆ ತಾನು ಓದುವುದರಲ್ಲಿ ಮಗ್ನನಾಗಿ ಕುಳಿತಿದ್ದಾನೆ. ಅಷ್ಟರಲ್ಲಿ ಅಲ್ಲಿಗೆ ಒಬ್ಬ ಹುಡುಗಿಯ ಎಂಟ್ರಿಯಾಗುತ್ತದೆ. ಆ ಹುಡುಗಿಯ ಕೈಯ್ಯಲ್ಲಿ ಗುಲಾಬಿಯ ಹೂವನ್ನು ಕೂಡಾ ಕಾಣಬಹುದು. ಹುಡುಗಿ ಬಂದು ಹುಡುಗನ ಮುಂದೆ ಕುಳಿತು ಗುಲಾಬಿ ನೀಡುತ್ತಿದ್ದಂತೆಯೇ ಹುಡುಗ ಆಶ್ಚರ್ಯಗೊಳ್ಳುತ್ತಾನೆ . ತಾನೇನು ನೋಡೇ ಇಲ್ಲ ಎನ್ನುವಂತೆ ಪಕ್ಕದ ಬೆಂಚಿಗೆ ತಿರುಗಿಕೊಳ್ಳುತ್ತಾನೆ. ಆದರೆ ಅಲ್ಲಿಗೆ ಇನ್ನೊಬ್ಬ ಹುಡುಗಿ ಬಂದು ಸೇರುತ್ತಾಳೆ. ಇಬ್ಬರು ಹುಡುಗಿಯರು ಸೇರಿ ಆ ಹುಡುಗನಿಗೆ ಪ್ರಪೋಸ್ ಮಾಡುವುದನ್ನು ಈ ವಿಡಿಯೋದಲ್ಲಿ ಕಾಣಬಹುದು.

https://www.instagram.com/reel/ClQRf4lAdTi/?utm_source=ig_web_copy_link

ಈ ವಿಡಿಯೋವನ್ನು ನೋಡುವಾಗ ಹೆಣ್ಣು ಮಕ್ಕಳಾಗಲೀ ಗಂಡು ಮಕ್ಕಳಾಗಲಿ ಬುದ್ಧಿ ಕೆಟ್ಟರೆ ಇನ್ನೊಬ್ಬರನ್ನು ಸಹ ಉದ್ಧಾರ ಆಗೋಕೆ ಬಿಡೋದಿಲ್ಲ ಎನ್ನುವುದು ಇಲ್ಲಿ ಕಾಣಬಹುದು.

ಹೌದು ಆಧುನಿಕ ಯುಗದಲ್ಲಿ ಮಕ್ಕಳು ಸಮಾಜದ ಮತ್ತು ಹೆತ್ತವರ ಭಯವಿಲ್ಲದೆ ಬೆಳೆದು ಓದೋ ವಯಸ್ಸಲ್ಲಿ ಓದುವುದನ್ನು ಬಿಟ್ಟು ಬೇರೆ ಎಲ್ಲಾ ಕೆಲಸವನ್ನು ಮಾಡುತ್ತಾರೆ. ಸದ್ಯ ಹೆತ್ತವರು ಇನ್ನಾದರೂ ನಿಮ್ಮ ಮಕ್ಕಳು ಯಾವ ದಾರಿಯಲ್ಲಿ ಹೇಗೆ ಮುನ್ನಡೆಯುತ್ತಿದ್ದಾರೆ ಅನ್ನೋದನ್ನು ಗಮನಹರಿಸುವುದು ಉತ್ತಮ. ಇಲ್ಲವಾದಲ್ಲಿ ಮುಂದೊಂದು ದಿನ ನಿಮ್ಮ ಮುದ್ದಿನ ಮಕ್ಕಳು ದಾರಿ ತಪ್ಪುವ ಸಾಧ್ಯತೆ ಇದೆ.