ಮಕ್ಕಳಾಗಲು ಮನುಷ್ಯರ ಮೂಳೆ ತಿನ್ನಬೇಕೆಂದು ಹೆಂಡತಿಯನ್ನು ಸ್ಮಶಾನಕ್ಕೆ ಕಳುಹಿಸುತ್ತಿದ್ದ ಪಾಪಿ ಪತಿ | ಕಾಟ ತಾಳಲಾರದೆ ಹೆಂಡತಿ ಮಾಡಿದ್ದೇನು ಗೊತ್ತಾ?

Share the Article

ಮಕ್ಕಳಾಗಿಲ್ಲ ಎಂದರೆ ಗಂಡಂದಿರು ತಮ್ಮ ತಮ್ಮ ಪತ್ನಿಯರನ್ನು ಆಸ್ಪತ್ರೆಗಳಿಗೋ, ತಜ್ಞ ವೈದ್ಯರ ಬಳಿಗೋ ಕರೆದುಕೊಂಡು ಹೋಗಿ ಚಿಕಿತ್ಸೆಗಳನ್ನು ಕೊಡಿಸುತ್ತಾರೆ. ಆರೋಗ್ಯದಲ್ಲಾದ ವ್ಯತ್ಯಾಸಗಳನ್ನು ಸರಿಪಡಿಸಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ಪತಿರಾಯ ತನ್ನ ಹೆಂಡತಿಗೆ ಮಕ್ಕಳಾಗಲಿಲ್ಲವೆಂದು ಆಕೆಯನ್ನು ಗರ್ಭಿಣಿ ಮಾಡಲು ಏನು ಮಾಡಿದ್ದಾನೆ ಗೊತ್ತಾ?

ಮಹಾರಾಷ್ಟ್ರದ ಪುಣೆಯಲ್ಲಿ ಗಂಡನೊಬ್ಬ ಮಕ್ಕಳಾಗಲಿಲ್ಲವೆಂದು ತನ್ನ ಪತ್ನಿಗೆ ಮಾನವನ ಮೂಳೆ ತಿನ್ನು, ಬಳಿಕ ನೀನು ಗರ್ಭಿಣಿಯಾಗುತ್ತೀಯ ಎಂದು ಒತ್ತಾಯ ಮಡಿದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಗಂಡ ಹಾಗೂ ಅತನ ತಾಯಿ ಇಬ್ಬರೂ ಸೇರಿ ಮಹಿಳೆಗೆ ಮಕ್ಕಳಾಗುವಂತೆ ಮಾಟಗಾರರ ಸಲಹೆ ಪಡೆದು ಅನೇಕ ಮೂಢನಂಬಿಕೆಗಳನ್ನು ಆಚರಿಸುತ್ತಿದ್ದರು. ಅಮಾವಾಸ್ಯೆ ಬಂತೆಂದರೆ ಇದರ ಆಚರಣೆ ಇನ್ನೂ ಜೋರಾಗುತ್ತಿತ್ತು.

ಇಷ್ಟೆಲ್ಲಾ ಮಾಡಿದ ಬಳಿಕವೂ ಇದೀಗ ಆಕೆಯಳೊಬ್ಬಳನ್ನೇ ರಾತ್ರಿ ಸ್ಮಶಾನಕ್ಕೆ ಕಳುಹಿಸಿದ್ದಾರೆ. ಜೊತೆಗೆ ಸತ್ತ ಮಾನವರ ಮೂಳೆಗಳನ್ನು ತಿನ್ನಲು ಬಲವಂತ ಮಾಡಿದ್ದಾರೆ. ಇದು ನಿರಂತರವಾಗಿ ನಡೆಯುತ್ತಿದೆ ಎಂದು ಆರೋಪ ಕೇಳಿ ಬಂದಿದೆ. ಇವರ ಹಿಂಸೆ ತಾಳಲಾರದೆ ಮಹಿಳೆಯು ಪುಣೆ ಪೊಲೀಸರಿಗೆ ದೂರು ನೀಡಿದ್ದಾಳೆ. ಮಹಿಳೆ ನೀಡಿದ ದೂರಿನನ್ವಯ ಪತಿ, ಅತ್ತೆ ಹಾಗೂ ಮಾವ ಸೇರಿದಂತೆ 7 ಜನರ ವಿರುದ್ಧ ಮೂಢನಂಬಿಕೆ ವಿರೋಧಿ ಕಾಯ್ದೆಯಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದರೊಂದಿಗೆ ಆಕೆ ಪತಿ ಹಾಗೂ ಅತ್ತೆ ಇಬ್ಬರೂ ಸೇರಿ ಮದುವೆ ಸಮಯದಲ್ಲಿ, ಚಿನ್ನ, ಹಾಗೂ ಬೆಳ್ಳಿ ಆಭರಣಗಳನ್ನು ಸೇರಿ ವರದಕ್ಷಿಣೆ ನೀಡುವಂತೆ ಒತ್ತಾಯಿಸಿದ್ದಾರೆ. ಇಂದಿಗೂ ಕಿರುಕುಳ ಕೊಡುತ್ತಿದ್ದಾರೆ ಎಂದು ಈ ಬಗ್ಗೆಯೂ ಆಕೆ ಆರೋಪಿಸಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುವುದಾಗಿ ಭರವಸೆ ನೀಡಿದ್ದಾರೆ.

Leave A Reply