Home latest ಆಪಲ್ ಸಂಸ್ಥೆಯಿಂದ ಭರ್ಜರಿ ಡಿಸ್ಕೌಂಟ್‌ | ಈ ವಸ್ತು ಖರೀದಿ ಮಾಡಲು ಯೋಚಿಸುತ್ತಿರುವವರಿಗೆ ಮ್ಯಾಕ್ ಆಫರ್!

ಆಪಲ್ ಸಂಸ್ಥೆಯಿಂದ ಭರ್ಜರಿ ಡಿಸ್ಕೌಂಟ್‌ | ಈ ವಸ್ತು ಖರೀದಿ ಮಾಡಲು ಯೋಚಿಸುತ್ತಿರುವವರಿಗೆ ಮ್ಯಾಕ್ ಆಫರ್!

Hindu neighbor gifts plot of land

Hindu neighbour gifts land to Muslim journalist

ಇಂದಿನ ಟೆಕ್ನಾಲಜಿ ಯುಗದಲ್ಲಿ ದಿನದಿಂದ ದಿನಕ್ಕೆ ಎಲ್ಲಾ ದಿನಬಳಕೆಯ ವಸ್ತುಗಳಿಗೆ ಬೇಡಿಕೆ ಹೆಚ್ಚುತ್ತಲೇ ಇದೆ. ಅದರಂತೆ ಲ್ಯಾಪ್ಟಾಪ್, ಮೊಬೈಲ್ ಗಳಿಗೂ. ಯಾಕಂದ್ರೆ, ಇಂದಿನ ಟೆಕ್ನಾಲಜಿ ಯುಗದಲ್ಲಿ ಮೊಬೈಲ್, ಲ್ಯಾಪ್ಟಾಪ್ ಬಳಸದೆ ಇರುವ ಜನರೇ ಇಲ್ಲ. ಹೀಗಾಗಿ ಅವುಗಳ ಬೆಲೆ ಕೂಡ ಅಧಿಕವಾಗುತ್ತಲೇ ಹೋಗುತ್ತಿದೆ.

ಆದ್ರೆ, ಗ್ರಾಹಕರಿಗೆ ಸುಲಭವಾಗಿ ದೊರಕಬೇಕು ಎಂಬ ದೃಷ್ಟಿಯಿಂದ ಡಿಸ್ಕೌಂಟ್ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯುತ್ತ ಬಂದಿದೆ. ಅದರಂತೆ ಇದೀಗ, ಆಪಲ್‌ ಮ್ಯಾಕ್‌ಬುಕ್‌ ಏರ್‌ M2 ಡಿವೈಸ್‌ ಖರೀದಿದಾರರಿಗೆ ಭರ್ಜರಿ ಡಿಸ್ಕೌಂಟ್‌ನಲ್ಲಿ  ದೊರೆಯಲಿದೆ. ಆಪಲ್‌ ಮ್ಯಾಕ್‌ಬುಕ್‌ ಏರ್‌ M2 ಡಿವೈಸ್‌ ನಲ್ಲಿ ಸಂಸ್ಥೆಯ M2 ಚಿಪ್‌ಸೆಟ್‌ ಇದೆ. ಇದು ಮೊದಲ ತಲೆಮಾರಿನ M1 ಆಪಲ್ ಸಿಲಿಕಾನ್ ಚಿಪ್ನ ಸುಧಾರಿತ ಆವೃತ್ತಿಯಾಗಿದೆ. ಇನ್ನು ಈ ಹೊಸ ಚಿಪ್‌ಸೆಟ್ ಹಿಂದಿನ ಚಿಪ್‌ಸೆಟ್‌ಗಿಂತ 18% ಸುಧಾರಿತ CPU ಮತ್ತು 35% GPU ಅನ್ನು ಬಳಸಲಾಗಿದೆ. ಜೊತೆಗೆ ಸ್ಪರ್ಧಾತ್ಮಕ 10 ಕೋರ್ ಪ್ರೊಸೆಸರ್‌ಗಳಿಗೆ 1.9 ಪಟ್ಟು ವೇಗವಾಗಿ ಕಾರ್ಯನಿರ್ವಹಿಸುತ್ತದೆ.

ಆಪಲ್‌ ಸಂಸ್ಥೆಯು ಆಪಲ್‌ ಮ್ಯಾಕ್‌ಬುಕ್‌ ಏರ್‌ M2 (MacBook Air M2) ಡಿವೈಸ್‌ಗೆ 10,000ರೂ. ರಿಯಾಯಿತಿ ಲಭ್ಯ ಮಾಡಿದ್ದು, ಆಪಲ್‌ ವೆಬ್‌ಸೈಟ್‌ನಲ್ಲಿ 1,19,900ರೂ. ಬೆಲೆಯಲ್ಲಿ ಖರೀದಿಸಬಹುದಾಗಿದೆ. ಪ್ರಮುಖ ಇ ಕಾಮರ್ಸ್‌ ತಾಣಗಳಲ್ಲಿ ಒಂದಾಗಿ ಕಾಣಿಸಿಕೊಂಡಿರುವ ವಿಜಯ ಸೇಲ್ಸ್‌ (Vijay Sales) ನಲ್ಲಿ ಆಪಲ್‌ ಮ್ಯಾಕ್‌ಬುಕ್‌ ಏರ್‌ M2 (MacBook Air M2) ಡಿವೈಸ್‌ 1,05,500ರೂ. ಪ್ರೈಸ್‌ ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದೆ. ಹಾಗೆಯೇ ಆಯ್ದ ಕ್ರೆಡಿಟ್‌ ಕಾರ್ಡ್‌ ಮೂಲಕ ಖರೀದಿಸಿದರೆ, ಹೆಚ್ಚುವರಿ ಯಾಗಿ 10,000ರೂ. ಡಿಸ್ಕೌಂಟ್‌ ಲಭ್ಯವಾಗಲಿದೆ. ಈ ಕೊಡುಗೆ ಮೂಲಕ ಆಪಲ್‌ ಮ್ಯಾಕ್‌ಬುಕ್‌ ಏರ್‌ M2 ಡಿವೈಸ್‌ ಅನ್ನು 95,500ರೂ. ಗಳ ಆಕರ್ಷಕ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ.

ಇನ್ನು ಈ ಲ್ಯಾಪ್‌ಟಾಪ್ 13.6 ಇಂಚಿನ ಲಿಕ್ವಿಡ್ ರೆಟಿನಾ ಡಿಸ್ಪ್ಲೇಯನ್ನು ಹೊಂದಿದೆ. ಈ ಆಪಲ್ ಮ್ಯಾಕ್‌ಬುಕ್ ಏರ್‌ (2022) 2TB ಸ್ಟೋರೇಜ್ ಅನ್ನು ಹೊಂದಿದೆ. ಇದನ್ನು 24GB ಯ ಏಕೀಕೃತ ಸೂಚಕದೊಂದಿಗೆ ಕಾನ್ಫಿಗರ್ ಮಾಡಬಹುದು. ಇದಲ್ಲದೆ ಈ ಲ್ಯಾಪ್‌ಟಾಪ್ 1080p ಕ್ಯಾಮೆರಾ ವನ್ನು ಹೊಂದಿದೆ. ಜೊತೆಗೆ ಈ ಲ್ಯಾಪ್‌ಟಾಪ್ ಸಿಂಗಲ್ ಚಾರ್ಜ್‌ನಲ್ಲಿ ವೀಡಿಯೊಗಳನ್ನು ವೀಕ್ಷಿಸುವಾಗ 18 ಗಂಟೆಗಳ ಬ್ಯಾಟರಿ ಬ್ಯಾಕಪ್ ಎಂದು ಹೇಳಲಾಗಿದೆ. ಜೊತೆಗೆ ಮ್ಯಾಕ್‌ಬುಕ್ ಏರ್‌ಗಳು (2022) ಐಚ್ಛಿಕ 67W USB ಟೈಪ್-ಸಿ ಪವರ್ ಅಡಾಪ್ಟರ್‌ ನೊಂದಿಗೆ 30 ನಿಮಿಷಗಳಲ್ಲಿ ಡಿವೈಸ್‌ಗೆ 50% ವೇಗವಾಗಿ ಚಾರ್ಜ್ ಮಾಡಲು ಬೆಂಬಲವನ್ನು ನೀಡಲಾಗುವುದು.

ಅದರಂತೆ, ಆಪಲ್‌ ಏರ್‌ಪಾಡ್ಸ್‌ ಪ್ರೊ ಇಯರ್‌ಫೋನ್‌ ಡಿವೈಸ್‌ ಸಹ ಆಕರ್ಷಕ ರಿಯಾಯಿತಿ ಪಡೆದಿದೆ. ಈ ಡಿವೈಸ್ ಅಧಿಕೃತ ಆಪಲ್‌ ವೆಬ್‌ಸೈಟ್‌ ನಲ್ಲಿ 26,900ರೂ. ಬೆಲೆಯಲ್ಲಿ ಕಾಣಿಸಿಕೊಂಡಿದ್ದು, ಹೆಚ್‌ಡಿಎಫ್‌ಸಿ ಕ್ರೆಡಿಟ್ ಕಾರ್ಡ್‌ ಮೂಲಕ ಖರಿದಿಸಿದರೆ 2,000ರೂ, ಡಿಸ್ಕೌಂಟ್‌ ಲಭ್ಯವಾಗಲಿದೆ. ಇನ್ನು ಈ ಫೋನ್ ಒತ್ತಡವನ್ನು ಸಮಗೊಳಿಸಲು ಮತ್ತು ಕಿವಿ ಆಯಾಸವನ್ನು ಕಡಿಮೆ ಮಾಡಲು ಹೊಸ ತೆರಪಿನ ವ್ಯವಸ್ಥೆಯನ್ನು ಬಳಸುತ್ತವೆ.