Gizmore Blaze Max: ಬರೋಬ್ಬರಿ 15 ದಿನಗಳ ಬ್ಯಾಟರಿ ಬ್ಯಾಕಪ್ ಹೊಂದಿದೆ ಈ ಸ್ಮಾರ್ಟ್‌ ವಾಚ್‌ | ಬಜೆಟ್‌ ಫ್ರೆಂಡ್ಲಿ ಕೂಡಾ !

Share the Article

ದಿನಕ್ಕೊಂದು ಹೊಸ ವೈಶಿಷ್ಟ್ಯದ ಮೂಲಕ ಸ್ಮಾರ್ಟ್ ವಾಚ್ ಗಳು ಮಾರುಕಟ್ಟೆಯಲ್ಲಿ ಲಗ್ಗೆ ಇಟ್ಟು ಟ್ರೆಂಡ್ ಸೃಷ್ಟಿಸುವುದಲ್ಲದೆ ಟೆಕ್​ ಮಾರುಕಟ್ಟೆಯಲ್ಲಿ ಸ್ಮಾರ್ಟ್​ವಾಚ್​ಗಳಿಗೆ ಇರುವಷ್ಟು ಡಿಮ್ಯಾಂಡ್ ಬೇರೆ ಯಾವ ಸಾಧನಕ್ಕೂ ಇರಲು ಸಾಧ್ಯವಿಲ್ಲ. ಸ್ಮಾರ್ಟ್​​ವಾಚ್​ಗಳು ನವೀನ ಮಾದರಿಯ ವೈಶಿಷ್ಟ್ಯದ ಫೀಚರ್ಸ್​ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿಗಮನ ಸೆಳೆದಿದೆ. ಸದ್ಯ ಫ್ಲಿಪ್​ಕಾರ್ಟ್​ ಗಿಝ್ಮೋರ್​​ ಕಂಪೆನಿಯಿಂದ ಬಿಡುಗಡೆಯಾದ ಗಿಝ್ಮೋರ್​ ಬ್ಲೇಝ್​ ವಾಚ್​ ಮೇಲೆ ಬೊಂಬಾಟ್ ಆಫರ್ ನೀಡಿದೆ.

ಈ ಗಿಝ್ಮೋರ್​ ಕಂಪೆನಿಯ ಈ ವಾಚ್​ ಅನ್ನು IP67 ರೇಟ್​ನೊಂದಿಗೆ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ ಅಳವಡಿಸಲಾಗಿದೆ. ಇನ್ನು ಈ ವಾಚ್ ಅನ್ನು JYouPro ಎಂಬ ಅಪ್ಲಿಕೇಶನ್‌ನೊಂದಿಗೆ ಸೆಟ್​ ಮಾಡಿಕೊಳ್ಳಬಹುದಾಗಿದೆ. ವಿಶೇಷವಾಗಿ ಮಹಿಳಾ ಬಳಕೆದಾರರಿಗೆ ಇದರಿಂದ ಆರೋಗ್ಯದ ಕಾಳಜಿಯನ್ನು ಸಹ ಟ್ರ್ಯಾಕ್ ಮಾಡಬಹುದಾಗಿದ್ದು ಇದರಲ್ಲಿ ಹಲವು ಕ್ರೀಡಾ ವಿಧಾನಗಳನ್ನೂ ನೀಡಲಾಗಿದ್ದು ಇದರೊಂದಿಗೆ ಬಿಪಿಯನ್ನು ಮಾನಿಟರ್ ಮಾಡಬಹುದು. ಈ ವಾಚ್‌ನಲ್ಲಿ ಕ್ಯಾಲ್ಕುಲೇಟರ್ ಮತ್ತು ಮಿನಿ ಗೇಮ್‌ಗಳನ್ನು ಸಹ ಆಡಬಹುದಾಗಿದೆ. ಗಿಝ್ಮೋರ್​ ಬ್ಲೇಝ್​ ವಾಚ್​ ಅನ್ನು ಕಂಪೆನಿಯ ವೆಬ್‌ಸೈಟ್‌ನಲ್ಲಿ 1,499 ರೂಪಾಯಿ ಎಂದು ಮಾಡಲಾಗಿದೆ. ಆದರೆ ಈಗ ಈ ಸ್ಮಾರ್ಟ್​​ವಾಚ್​​ ಅನ್ನು ಫ್ಲಿಪ್‌ಕಾರ್ಟ್‌ನಿಂದ ಕೇವಲ 1,199 ರೂಪಾಯಿಗೆ ಖರೀದಿಸಬಹುದು.

ಗಿಜ್ಮೋರ್ ಬ್ಲೇಝ್ ಮ್ಯಾಕ್ಸ್‌ನಲ್ಲಿ ಅನೇಕ ವಾಚ್ ಫೇಸ್‌ಗಳು, ಎಐ ಧ್ವನಿ ಸಹಾಯಕ ಮತ್ತು ಬ್ಲೂಟೂತ್ ಕರೆಗಳನ್ನು ಸಹ ಬೆಂಬಲಿಸುತ್ತದೆ. ಇದಕ್ಕಾಗಿ ಮೈಕ್ರೊಫೋನ್ ಮತ್ತು ಬಿಲ್ಟ್ ಇನ್ ಸ್ಪೀಕರ್ ಅನ್ನು ವಾಚ್‌ನಲ್ಲಿ ನೀಡಲಾಗಿದೆ. ಹೊಸ ಸ್ಮಾರ್ಟ್‌ವಾಚ್​ನ ವಿಶೇಷತೆ ಗಮನಿಸಿದರೆ ಇದು 1.85-ಇಂಚಿನ ಆಯತಾಕಾರದ ಐಪಿಎಸ್​ ಎಲ್​ಸಿಡಿ ಡಿಸ್‌ಪ್ಲೇಯನ್ನು ಹೊಂದಿದ್ದು, ಈ ಡಿಸ್​ಪ್ಲೇಯು 450 ನಿಟ್ಸ್​ ಬ್ರೈಟ್‌ನೆಸ್‌ ಅನ್ನು ಹೊಂದಿದೆ.

ಈ ಎಲ್​​ಸಿಡಿ ಪ್ಯಾನೆಲ್‌ ಉತ್ತಮ ಫೀಚರ್​ ಅನ್ನು ಒದಗಿಸುತ್ತದೆ. ಈ ವಾಚ್‌ನಲ್ಲಿ ಹೃದಯ ಬಡಿತ ಮಾನಿಟರ್, ಸ್ಲೀಪ್ ಟ್ರ್ಯಾಕರ್ ಮತ್ತು ರಕ್ತದ ಆಮ್ಲಜನಕ ಸಂಸೆರ್ ನಂತಹ ಹಲವು ವೈಶಿಷ್ಟ್ಯಗಳನ್ನು ಸಹ ನೀಡಲಾಗಿದೆ. ಈ ಗಿಝ್ಮೋರ್​ ಬ್ಲೇಝ್​ ವಾಚ್​ ಅನ್ನು ಒಮ್ಮೆ ಫುಲ್​ ಚಾರ್ಜ್ ಮಾಡಿದರೆ 15 ದಿನಗಳವರೆಗೆ ನಿರಂತರವಾಗಿ ಬಳಕೆ ಮಾಡಬಹುದು ಎಂದು ಕಂಪೆನಿ ಹೇಳಿಕೊಂಡಿದೆ.

Leave A Reply