Home News Car Recall: ಈ ಕಾರುಗಳನ್ನು ಬಳಸುವುದನ್ನು ತಕ್ಷಣ ನಿಲ್ಲಿಸಿ

Car Recall: ಈ ಕಾರುಗಳನ್ನು ಬಳಸುವುದನ್ನು ತಕ್ಷಣ ನಿಲ್ಲಿಸಿ

Hindu neighbor gifts plot of land

Hindu neighbour gifts land to Muslim journalist

ಅಪಘಾತದ ಸಂದರ್ಭದಲ್ಲಿ ಕಾರಿನಲ್ಲಿರುವ ಏರ್‌ಬ್ಯಾಗ್‌ಗಳು ತೆರೆದುಕೊಳ್ಳದಿದ್ದರೆ, ಅದರಲ್ಲಿ ಕುಳಿತಿರುವವರ ಜೀವಕ್ಕೆ ಅಪಾಯವಿದೆ. ಅಪಘಾತದ ಸಂದರ್ಭದಲ್ಲಿ, ಪ್ರಯಾಣಿಕರ ಜೀವ ಉಳಿಸುವಲ್ಲಿ ಏರ್ ಬ್ಯಾಗ್ ಪ್ರಮುಖ ಪಾತ್ರ ವಹಿಸುತ್ತದೆ. ಅದಕ್ಕಾಗಿಯೇ, ಯಾವುದೇ ಕಾರಿನಲ್ಲಿ ಕನಿಷ್ಠ 2 ಏರ್‌ಬ್ಯಾಗ್‌ಗಳನ್ನು ಹೊಂದಿರಬೇಕು ಎಂದು ಸರ್ಕಾರವು ಈಗಾಗಲೇ ಕಡ್ಡಾಯಗೊಳಿಸಿದೆ. ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಕಾರಿನ ಏರ್‌ಬ್ಯಾಗ್‌ಗಳನ್ನು ಪ್ರಧಾನ ಸುರಕ್ಷತಾ ವೈಶಿಷ್ಟ್ಯಗಳಾಗಿ ಪರಿಗಣಿಸಲಾಗುತ್ತದೆ. ಇದೀಗ ಟೊಯೋಟಾ ಕಂಪನಿ ವತಿಯಿಂದ ಗ್ರಾಹಕರಿಗೆ ಮುನ್ಸೂಚನೆ ನೀಡಲಾಗಿದೆ. ಹೌದು 8 ಡಿಸೆಂಬರ್ 2022 ಮತ್ತು 12 ಜನವರಿ 2023 ರ ನಡುವೆ ತಯಾರಿಸಲಾದ ಹೈರೈಡರ್ ಮತ್ತು ಗ್ಲಾನ್ಜಾ ಘಟಕಗಳನ್ನು ಹಿಂಪಡೆದಿದೆ. ಈ ಮಾದರಿಗಳ ಘಟಕಗಳಲ್ಲಿ ದೋಷವಿರಬಹುದು, ಅದನ್ನು ತಕ್ಷಣವೇ ಸರಿಪಡಿಸಬೇಕಾಗಿದೆ ಎಂದು ಮಾಹಿತಿ ನೀಡಿದೆ.

ಹೈರೈಡರ್ ಮತ್ತು ಗ್ಲ್ಯಾನ್ಜಾ ಘಟಕಗಳನ್ನು ಹಿಂಪಡೆದಿದ್ದು ಈ ಮಾದರಿಗಳ 1,390 ಘಟಕಗಳಲ್ಲಿ ದೋಷವಿರಬಹುದು, ಅದನ್ನು ತಕ್ಷಣವೇ ಸರಿಪಡಿಸಬೇಕಾಗಿದೆ. ಈ ಕಾರುಗಳ ಏರ್‌ಬ್ಯಾಗ್ ನಿಯಂತ್ರಕ ದೋಷಯುಕ್ತವಾಗಿರಬಹುದು. ಈ ಪರಿಸ್ಥಿತಿಯಲ್ಲಿ, ಅಪಘಾತ ಸಂಭವಿಸಿದಲ್ಲಿ, ಏರ್‌ಬ್ಯಾಗ್‌ಗಳು ತೆರೆಯುವುದಿಲ್ಲ. ಆದರೆ ಅಂತಹ ಯಾವುದೇ ಘಟನೆ ಬೆಳಕಿಗೆ ಬಂದಿಲ್ಲ. ಆದರೆ, ಮುನ್ನೆಚ್ಚರಿಕೆಯಾಗಿ ಟೊಯೊಟಾ ವಾಹನಗಳನ್ನು ವಾಪಸ್ ಪಡೆದಿದೆ.

ತಪಾಸಣೆಯ ನಂತರ ಯಾವುದೇ ಭಾಗವು ದೋಷಯುಕ್ತವೆಂದು ಕಂಡುಬಂದರೆ, ಗ್ರಾಹಕರಿಗೆ ಯಾವುದೇ ವೆಚ್ಚವಿಲ್ಲದೆ ಉಚಿತವಾಗಿ ಆ ವಾಹನವನ್ನು ಬದಲಾಯಿಸಲಾಗುತ್ತದೆ. ಸಂಭಾವ್ಯ ದೋಷಪೂರಿತ ಭಾಗವು ಪ್ರಯಾಣಿಕರ ಸುರಕ್ಷತೆಗೆ ನೇರವಾಗಿ ಸಂಬಂಧಿಸಿರುವುದರಿಂದ, ಹಿಂಪಡೆಯಲಾದ ಕಾರುಗಳ (ಗ್ಲಾನ್ಜಾ ಮತ್ತು ಹೈರೈಡರ್) ಮಾಲೀಕರಿಗೆ ತನಿಖೆ ನಡೆಯುವವರೆಗೆ ತಮ್ಮ ಕಾರುಗಳನ್ನು ಮಿತವಾಗಿ ಬಳಸುವಂತೆ ಕಾರು ತಯಾರಕರು ವಿನಂತಿಸಿದ್ದಾರೆ.

ಈ ಕುರಿತಂತೆ ಸಂಬಂಧಪಟ್ಟ ಟೊಯೋಟಾ ಡೀಲರ್ ಖರೀದಿದಾರರನ್ನು ಸಂಪರ್ಕಿಸುತ್ತಾರೆ ಅಥವಾ ಗ್ರಾಹಕರು ಸ್ವತಃ ಡೀಲರ್ ಅನ್ನು ಸಂಪರ್ಕಿಸಬಹುದು ಎಂದು ಕಂಪನಿ ಕಡೆಯಿಂದ ಮಾಹಿತಿ ತಿಳಿಸಲಾಗಿದೆ.