ಚಳಿಗಾಲದಲ್ಲಿ ಮೈ ತುಂಬ ತುರಿಸ್ತಾ ಇದ್ಯಾ? ಹೀಗೆ ಮಾಡಿ
ನಮ್ಮ ಜೀವನ ಶೈಲಿ ಬದಲಾಗುತ್ತದೆ. ಅದ್ರಲ್ಲೂ ಕಾಲಗಳು ಬದಲಾದಂತೆ ಅದಕ್ಕೆ ತಕ್ಕುದಾಗಿ ನಾವು ಜೀವನ ನಡೆಸಬೇಕು. ಇದೀಗ ನಾವು ಚಳಿಗಾಲದಲ್ಲಿ ಇದ್ದೇವೆ. ಈ ಸಮಯದಲ್ಲಿ ಅನೇಕ ಜನರಿಗೆ ಮೈ ಎಲ್ಲ ತುರಿಕೆ ಬರೋದು, ಮೈ ಕೈ ನೋವು ಆಗೋದು ಎಲ್ಲಾ ಆಗ್ತಾ ಇದ್ಯ? ಹಾಗಾದ್ರೆ ಈ ಮೆತಡ್ಗಳನ್ನು ಫಾಲೋ ಮಾಡಿ.
ಚಳಿಗಾಲ ಅಂದ ಕೂಡಲೇ ಬಿಸಿ ಬಿಸಿ ನೀರಿನಲ್ಲಿ ತುಂಬಾ ಹೊತ್ತು ಸ್ನಾನ ಮಾಡೋಣ ಅಂತ ಅನಿಸೋದು ಸಾಮನ್ಯ. ಆದ್ರೆ ಈ ತಪ್ಪನ್ನು ಮಾಡಬೇಡಿ. ತುಂಬಾ ಹೊತ್ತು ಬಿಸಿ ನೀರಿನಲ್ಲಿ ಸ್ನಾನ ಮಾಡೋದ್ರಿಂದ ಅಪಾಯ ಇದೆ. ಕೊಂಚ ಬಿಸಿ ನೀರಿನಿಂದ ಸ್ನಾನ ಮಾಡಿ ಸಾಕು.
ಉಗುರು ಬೆಚ್ಚಗಿನ ನೀರನ್ನು ಕುಡಿಯುತ್ತಾ ಇರಬೇಕು. ನಿಮ್ಮನ್ನ ನೀವು ಹೈಡ್ರಿ ಕರೆಸಿಕೊಳ್ಳಬೇಕು. ಸಾಮಾನ್ಯ ದಿನಗಳಲ್ಲಿ ಉಗುರು ಬೆಚ್ಚಗಿನ ನೀರು ಕುಡಿಯುವುದಿಲ್ಲ ಅಂದ್ರೆ ಪರವಾಗಿಲ್ಲ. ಆದರೆ ಇಂತಹ ಚಳಿಗಾಲದಲ್ಲಿ ಆಗಾಗ ಕೊಂಚ ಬಿಸಿಮಾಡಿಕೊಂಡು ನೀರನ್ನು ಕುಡಿಯುತ್ತಲೇ ಇರಬೇಕು. ಇದರಿಂದ ಮೈಯಲ್ಲಿ ತುರಿಕೆ ಆಗುವುದು ಕಡಿಮೆಯಾಗುತ್ತದೆ.
ಎಲ್ಲಿ ಹೊರಗೆ ಹೋಗುವುದಾದರೂ ಕೂಡ ನೀವು ನಿಮ್ಮ ಕಿವಿಗಳನ್ನು ಸಂಪೂರ್ಣವಾಗಿ ಮುಚ್ಚಿಕೊಳ್ಳ ಬೇಕು. ಇಲ್ಲದಿದ್ದಲ್ಲಿ ತುರಿಕೆ ಜೋರಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ ಚಳಿಗಾಲದಲ್ಲಿ ಇಂತಹ ಟಿಪ್ಸ್ ಫಾಲೋ ಮಾಡಿ.