Home News Love Jihad : ಧರ್ಮ ಮರೆಮಾಚಿ ಮದುವೆ, ನಂತರ ಮತಾಂತರಕ್ಕೆ ಚಿತ್ರಹಿಂಸೆ | ಸಿಗರೇಟಿನಿಂದ ಸುಟ್ಟು,...

Love Jihad : ಧರ್ಮ ಮರೆಮಾಚಿ ಮದುವೆ, ನಂತರ ಮತಾಂತರಕ್ಕೆ ಚಿತ್ರಹಿಂಸೆ | ಸಿಗರೇಟಿನಿಂದ ಸುಟ್ಟು, ಮಾಂಸ ತಿನ್ನಲು ಒತ್ತಾಯ, ಗಂಡನ ವಿರುದ್ಧ ಹೆಂಡತಿಯ ದೂರು ದಾಖಲು, ಪತಿರಾಯ ಅರೆಸ್ಟ್‌

Hindu neighbor gifts plot of land

Hindu neighbour gifts land to Muslim journalist

ಕೆಲವೊಮ್ಮೆ ದಬ್ಬಾಳಿಕೆ ಅನ್ನೋದು ಯಾರಿಗೆ ಯಾವ ರೀತಿ ಆದರೂ ಆಗಬಹುದು. ಹೌದು ಕೆಲವೊಂದು ಸಲ ಹೆಣ್ಣಾಗಿ ಹುಟ್ಟಬಾರದು ಅನ್ನಿಸುವಷ್ಟು ಸಮಾಜದಲ್ಲಿ ಹೆಣ್ಣಿಗೆ ಹಿಂಸೆ ನೀಡುವವರು ಇದ್ದಾರೆ ಇಂತಹ ಅನ್ಯಾಯಗಳಿಗೆ ಕೊನೆ ಇಲ್ಲವೇನೋ ಅಥವಾ ಜನರಿಗೆ ಕಾನೂನಿನ ಭಯ ಇಲ್ಲವೋ ಅರ್ಥ ಆಗುತ್ತಿಲ್ಲ. ಒಟ್ಟಿನಲ್ಲಿ ಧರ್ಮಕ್ಕೆ ಬೆಲೆ ಕೊಡುವ ಈ ಸಮಾಜದಲ್ಲಿ ಪ್ರೀತಿಗೆ ಜಾಗವಿಲ್ಲ ಎನ್ನುವುದು ಈ ಮೂಲಕ ಮಹಿಳೆಯರು ಇನ್ನಾದರೂ ಎಚ್ಚತ್ತುಕೊಳ್ಳಬೇಕು.

ತನ್ನ ಪತಿ ಚಾಂದ್ ಮೊಹಮ್ಮದ್ ಎಂಬಾತ ತನ್ನ ಧರ್ಮವನ್ನು ಮರೆಮಾಚಿ, ಹಿಂದೂ ಎಂದು ಹೇಳಿಕೊಂಡು ವಂಚನೆಯಿಂದ ಮದುವೆಯಾಗಿದ್ದಾನೆ ಎಂದು ಸಂತ್ರಸ್ತೆ ಮಹಿಳೆ ಆರೋಪಿಸಿದ್ದಾರೆ. ಮಹಿಳೆ ತನ್ನ ಗಂಡ ಮೊಹಮ್ಮದ್​ನನ್ನು ಮದುವೆಯಾದ ಬಳಿಕ ಲಕ್ನೋದ ಬಾಡಿಗೆ ಮನೆಯಲ್ಲಿ ವಾಸಿಸಲು ಪ್ರಾರಂಭಿಸಿದರು. ಅಲ್ಲಿ ಆಕೆಗೆ ಆತ ಹಿಂದೂ ಅಲ್ಲ ಮುಸ್ಲಿಂ ಎಂಬುದು ಗೊತ್ತಾಯಿತು.

ಹೌದು ಉತ್ತರ ಪ್ರದೇಶದ ಲಕ್ನೋದಲ್ಲಿ ಮುಸ್ಲಿಂ ಧರ್ಮದವನನ್ನು ಮದುವೆಯಾಗಿದ್ದ ಹಿಂದೂ ಯುವತಿಗೆ ಆಕೆಯ ಗಂಡ ಮತಾಂತರವಾಗಲು ಒತ್ತಾಯಿಸುತ್ತಿದ್ದ. ಅದಕ್ಕೆ ಆಕೆ ಒಪ್ಪದಿದ್ದಾಗ ಪ್ರತಿದಿನ ಹೊಡೆದು, ಸಿಗರೇಟ್​ನಿಂದ ಸುಟ್ಟು ಚಿತ್ರಹಿಂಸೆ ನೀಡುತ್ತಿದ್ದ. ಅಲ್ಲದೆ, ಬಲವಂತವಾಗಿ ಆಕೆಗೆ ಮಾಂಸ ತಿನ್ನಿಸಲು ಪ್ರಯತ್ನಿಸುತ್ತಿದ್ದ.

ಅದಲ್ಲದೆ ಆಕೆ ಇಸ್ಲಾಂ ಧರ್ಮವನ್ನು ಸ್ವೀಕರಿಸಲು ನಿರಾಕರಿಸಿದಾಗ ಮೊಹಮ್ಮದ್ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಸಿಗರೇಟ್ ತುಂಡುಗಳಿಂದ ಸುಟ್ಟು ಹಾಕಿ, ಬಿಸಿ ಎಣ್ಣೆ ಸುರಿದಿದ್ದ. ತನ್ನ ವಿರುದ್ಧ ಪೊಲೀಸರಿಗೆ ದೂರು ನೀಡಿದರೆ ಕೊಲೆ ಮಾಡುವುದಾಗಿ ಮತ್ತು ಸಂಬಂಧಿಕರಿಂದ ಅತ್ಯಾಚಾರ ಮಾಡುವುದಾಗಿ ಬೆದರಿಕೆ ಹಾಕಿದ್ದ.

ಗಂಡನ ಚಿತ್ರಹಿಂಸೆ ತಾಳಲಾರದೆ ಆ ಮಹಿಳೆ ಮನೆಯಿಂದ ಓಡಿಹೋಗಿ ದೂರು ದಾಖಲಿಸಲು ಪ್ರಯತ್ನಿಸಿದಾಗ, ಆತ ಆಕೆಯನ್ನು ತಮ್ಮ ಕೋಣೆಯಲ್ಲಿ ಕೂಡಿಹಾಕಿ, ಬೀಗ ಹಾಕಿ ಥಳಿಸಿದ್ದ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಆಕೆ 5 ತಿಂಗಳ ಗರ್ಭಿಣಿಯಾಗಿದ್ದಾಗ ಮೊಹಮ್ಮದ್ ಆಕೆಯ ಹೊಟ್ಟೆಯಲ್ಲಿ ಹೊಡೆದಿದ್ದರಿಂದ ಆಕೆಗೆ ಗರ್ಭಪಾತವಾಗಿತ್ತು. ಈ ಎಲ್ಲಾ ಘಟನೆಯ ಬಗ್ಗೆ ಆ ಮಹಿಳೆಯೇ ತನ್ನ ಗಂಡನ ವಿರುದ್ಧ ದೂರು ನೀಡಿದ್ದು ಇದೀಗ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಏನೇ ಆಗಲಿ ಇಂತಹ ವಂಚಕ ಮೃಗಗಳಿಗೆ ಸರಿಯಾದ ಶಿಕ್ಷೆ ಆದಾಗಲೇ ಮುಂದೆ ನಡೆಯುವ ಇಂತಹ ಅನ್ಯಾಯಗಳಿಗೆ ತಡೆ ಬೀಳಲು ಸಾಧ್ಯ.