Home Breaking Entertainment News Kannada Pushpa 2 ಸಿನಿಮಾದ ಯಾರು ಹೀರೋಯಿನ್‌ ? ರಶ್ಮಿಕಾ ಬದಲು ಸಾಯಿ ಪಲ್ಲವಿ | ಕೊನೆಗೂ...

Pushpa 2 ಸಿನಿಮಾದ ಯಾರು ಹೀರೋಯಿನ್‌ ? ರಶ್ಮಿಕಾ ಬದಲು ಸಾಯಿ ಪಲ್ಲವಿ | ಕೊನೆಗೂ ಕಿರಿಕ್‌ ಬೆಡಗಿ ನೀಡಿದ್ರು ಉತ್ತರ

Hindu neighbor gifts plot of land

Hindu neighbour gifts land to Muslim journalist

ಇತ್ತೀಚಿನ ದಿನಗಳಲ್ಲಿ ನ್ಯಾಷನಲ್​ ಕ್ರಶ್​ ರಶ್ಮಿಕಾ ಮಂದಣ್ಣ (Rashmika Mandanna) ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಇದೀಗ, ಕಿರಿಕ್ ಬೆಡಗಿಯ ಸಿನೆಮಾದ ಕುರಿತಾಗಿ ಹೊಸ ಸಂಗತಿ ಹೊರ ಬಿದ್ದಿದೆ.

ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ ಸಿನಿಮಾ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಸಿತ್ತು. ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ ದಿ ರೈಸ್ ಭಾರತೀಯ ಚಿತ್ರರಂಗದಲ್ಲಿ ಭಾರಿ ಬಜ್ ಅನ್ನು ಸೃಷ್ಟಿ ಮಾಡಿದ್ದು, ಭಾಗ ಒಂದರ ಭರ್ಜರಿ ಯಶಸ್ಸಿನ ಬಳಿಕ ಪುಷ್ಪ ದಿ ರೂಲ್ ಎಂಬ ಶೀರ್ಷಿಕೆಯಡಿ ಚಿತ್ರದ ಮುಂದುವರಿದ ಭಾಗ ತೆರೆಗೆ ಬರಲಿದೆ ಎನ್ನಲಾಗುತ್ತಿದೆ. ಆದರೆ ಪುಷ್ಪ 2 ರಲ್ಲಿ ರಶ್ಮಿಕಾ ಮಂದಣ್ಣ ಅವ್ರ ಬದಲು ಸಾಯಿ ಪಲ್ಲವಿ ನಟಿಸಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ.

ಇದೀಗ ಈ ಬಗ್ಗೆ ಕಿರಿಕ್‌ ಬೆಡಗಿ ಮೌನ ಮುರಿದಿದ್ದಾರೆ. ನ್ಯಾಷನಲ್ ಕ್ರಶ್ ರಶ್ಮಿಕಾ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಆಕ್ಟಿವ್ ಆಗಿ ಪಡ್ಡೆ ಹುಡುಗರ ಹೃದಯ ಬಡಿತ ಏರು ಪೇರು ಮಾಡ್ತಾ ಇರ್ತಾರೆ. ಇದೀಗ, ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿ ಮೂಲಕ ಮಾಧ್ಯಮಗಳ ಚಿತ್ತ ತನ್ನತ್ತ ಸೆಳೆಯುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಪುಷ್ಪ 2 ಸಿನಿಮಾದಲ್ಲಿ ರಶ್ಮಿಕಾ ಬದಲು ಸಾಯಿ ಪಲ್ಲವಿ ನಟಿಸಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿರುವ ಬೆನ್ನಲ್ಲೆ, ಈ ಗಾಸಿಪ್ ಸುದ್ದಿಯನ್ನು ರಶ್ಮಿಕಾ ಅವರು ಅಲ್ಲಗಳೆದಿದ್ದಾರೆ. ಇನ್‌ಸ್ಟಾಗ್ರಾಮ್ ಸ್ಟೋರಿಗಳ ಮೂಲಕ ತನ್ನ ಅಭಿಮಾನಿಗಳೊಂದಿಗೆ ಕ್ಯಾಂಡಿಡ್ ಸಂವಾದ ನಡೆಸಿದ್ದು, ಈ ವೇಳೆ, ಅವರ ಅಭಿಮಾನಿಯೊಬ್ಬರು ಮುಂದಿನ ಚಿತ್ರದ ಅಪ್‌ಡೇಟ್‌ ಬಗ್ಗೆ ಕೇಳಿದಾಗ, ಕಿರಿಕ್ ಚೆಲುವೆ ಉತ್ತರ ನೀಡಿದ್ದು, 4 ಸಿನಿಮಾಗಳೊಂದಿಗೆ ಅನೇಕ ಹಲವು ಅಚ್ಚರಿಗಳು ಬರಲಿವೆ.

ಪೈಪ್‌ಲೈನ್‌ನಲ್ಲಿರುವ ನಾಲ್ಕು ಚಲನಚಿತ್ರ ಶೀರ್ಷಿಕೆಗಳ ಕುರಿತು ನಟಿ ರಶ್ಮಿಕಾ ಮಾತಾಡಿದ್ದು, ವಾರಿಸು, ಮಿಷನ್ ಮಜ್ನು, ಪುಷ್ಪಾ: ದಿ ರೂಲ್ ಮತ್ತು ಅನಿಮಲ್ ಸದ್ಯ ತಮ್ಮ ಪಾಲಿಗೆ ಒಲಿದಿರುವ ಸಿನಿಮಾಗಳೆಂಡು ಹೇಳಿಕೊಂಡಿದ್ದಾರೆ. ಹೀಗಾಗಿ, ಪುಷ್ಪಾ ಅಭಿಮಾನಿಗಳಿಗೆ, ಶ್ರೀವಲ್ಲಿ ಪಾತ್ರದಲ್ಲಿ ಬದಲಾವಣೆಯಾಗಿಲ್ಲ ಎಂದು ಕೊಂಚ ನಿಟ್ಟುಸಿರಬಿಟ್ಟಿದ್ದಾರೆ.

ಪುಷ್ಪ: ದಿ ರೂಲ್ ಎಂಬುದು ವರ್ಷದ ಬಹು ನಿರೀಕ್ಷಿತ ಚಿತ್ರವಾಗಿದ್ದು ,ಪುಷ್ಪ: ದಿ ರೈಸ್‌ನ ಪಾತ್ರವನ್ನು ಇಟ್ಟುಕೊಂಡು ಕಥೆ ಹೆಣೆಯಲಾಗಿದೆ. 2021 ರಲ್ಲಿ ಪುಷ್ಪಾ 1 ಬಿಡುಗಡೆಯಾಗಿದ್ದು ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಮತ್ತು ಫಹದ್ ಫಾಸಿಲ್ ನಟನೆಗೆ ಜನ ಫುಲ್ ಫಿದಾ ಆಗಿಬಿಟ್ಟಿದ್ದಾರೆ. ಪುಷ್ಪ 2 ಈ ವರ್ಷ ಬಿಡುಗಡೆಯಾಗಲಿದ್ದು, ಆದರೆ ಈ ಕುರಿತು ದಿನಾಂಕದ ಬಗ್ಗೆ ಎಲ್ಲೂ ಘೋಷಣೆ ಮಾಡಲಾಗಿಲ್ಲ ಎಂಬುದನ್ನು ಗಮನಿಸಬೇಕು.