ಪಡಿತರ ಚೀಟಿದಾರರಿಗೆ ಗುಡ್‌ ನ್ಯೂಸ್‌: ಫೆಬ್ರವರಿಯಿಂದ 1 ಕೆ.ಜಿ ಅಕ್ಕಿ ಹೆಚ್ಚುವರಿ ವಿತರಣೆ

ಬಡತನ ರೇಖೆಗಿಂತ ಕೆಳಗಿರುವ ಜನರ ಜೀವನ ಬಹಳ ಕಷ್ಟಕರ ಆಗಿರುತ್ತದೆ ಮತ್ತು ಮೂಲಭೂತ ಸೌಕರ್ಯ ಪಡೆದುಕೊಳ್ಳುವಲ್ಲಿ ಆರ್ಥಿಕವಾಗಿ ಅಶಕ್ತರಾಗಿರುತ್ತಾರೆ. ಹಾಗಾಗಿ ಬಡವರ ಜೀವನ ಸುಧಾರಿಸಿಕೊಳ್ಳಲು ಸರ್ಕಾರ ಹೆಚ್ಚಿನ ಪ್ರಯತ್ನ ಮಾಡುತ್ತಿದೆ ಅದಲ್ಲದೆ ಕೆಲವು ಸೌಲಭ್ಯಗಳನ್ನು ನೀಡಿ ಬಡವರನ್ನು ಪ್ರೋತ್ಸಾಹಿಸುತ್ತಿದೆ.
ಈಗಾಗಲೇ ನ್ಯಾಯಬೆಲೆ ಅಂಗಡಿ ಮತ್ತು ಸಹಕಾರ ಸಂಘಗಳಲ್ಲಿ ಬಿಪಿಎಲ್ ಪಡಿತರ ಚೀಟಿದಾರರಿಗೆ ಉಚಿತ ಅಕ್ಕಿ ವಿತರಿಸಲಾಗುತ್ತಿದೆ. ಇದೀಗ ಪಡಿತರ ಚೀಟಿದಾರರಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಫೆಬ್ರವರಿ 1 ರಿಂದ ಪಡಿತರ ಚೀಟಿದಾರರಿಗೆ 1 ಕೆಜಿ ಹೆಚ್ಚುವರಿಯಾಗಿ ಅಕ್ಕಿ ವಿತರಿಸಲು ಆದೇಶಿಸಿದೆ.

ರಾಜ್ಯ ಸರ್ಕಾರವು 2023ರ ಜನವರಿಯಿಂದ ರಾಜ್ಯ ಎಲ್ಲಾ ಆದ್ಯತಾ ಪಡಿತರ ಚೀಟಿಗಳ ಪ್ರತಿ ಫಲಾನುಭಿವಿಗೆ ಎನ್‍ಎಫ್‍ಎಸ್‍ಎ ಹಂಚುವ 5 ಕೆ.ಜಿ. ಅಕ್ಕಿಯೊಂದಿಗೆ ಹೆಚ್ಚುವರಿಯಾಗಿ 1 ಕೆ.ಜಿ. ಅಕ್ಕಿಯನ್ನು ವಿತರಿಸಲು ಆದೇಶಿಸಿದ್ದು, ಸಕಾಲದಲ್ಲಿ ಅಕ್ಕಿ ಸರಬರಾಜು ಲಭ್ಯವಿಲ್ಲದ್ದರಿಂದ ಹಾಗೂ ನ್ಯಾಯಬೆಲೆ ಅಂಗಡಿಗಳ ಬಿಲ್ಲಿಂಗ್ ವ್ಯವಸ್ಥೆ ಮತ್ತು ಪಿಓಎಸ್ ಆರಂಭಗೊಂಡಿರುವ ಕಾರಣ 2023ರ ಫೆಬ್ರವರಿ ಮಾಹೆಯಿಂದ 1 ಕೆ.ಜಿ. ಅಕ್ಕಿ ವಿತರಣೆ ಮಾಡಲಾಗುವುದು ಎಂದು ಮಾಹಿತಿ ನೀಡಲಾಗಿದೆ.

ಈಗಾಗಲೇ ಆನ್‍ಲೈನ್ ಹಂಚಿಕೆಯಂತೆ ಜನವರಿ-2023ರ ಮಾಹೆಯಲ್ಲಿ ಪ್ರತಿ ಫಲಾನುಭವಿಗೆ ಎನ್‍ಎಫ್‍ಎಸ್‍ಎ 5 ಕೆ.ಜಿ.ಅಕ್ಕಿಯನ್ನು ಮಾತ್ರ ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

Leave A Reply

Your email address will not be published.