Home Interesting ಹನಿಮೂನಿಗೆ ಹೋದಾಗ ಗಂಡನಿಗೇ ಮತ್ತು ಬರಿಸುವ ಔಷಧಿ ಹಾಕಿದ ಹೆಂಡತಿ | ಈಕೆಯ ಮಾಸ್ಟರ್ ಪ್ಲ್ಯಾನ್...

ಹನಿಮೂನಿಗೆ ಹೋದಾಗ ಗಂಡನಿಗೇ ಮತ್ತು ಬರಿಸುವ ಔಷಧಿ ಹಾಕಿದ ಹೆಂಡತಿ | ಈಕೆಯ ಮಾಸ್ಟರ್ ಪ್ಲ್ಯಾನ್ ಸಕ್ಸಸ್ ಆಯಿತಾ? ಅಷ್ಟಕ್ಕೂ ಈಕೆಯ ಪ್ಲ್ಯಾನ್ ಏನು ಗೊತ್ತಾ?

Hindu neighbor gifts plot of land

Hindu neighbour gifts land to Muslim journalist

ಮದುವೆ ಅಂದರೆ ಕೆಲವರಿಗೆ ಅದೊಂದು ದೊಡ್ಡ ಕನಸು, ಕೆಲವರಿಗೆ ಜೀವನದ ಮಹತ್ವದ ತಿರುವು ಸಹ ಆಗಿದೆ ಆದರೆ ಕೆಲವರಿಗೆ ಮಾತ್ರ ಚೆಲ್ಲಾಟ ಆಗಿದೆ. ಹೌದು ಮದುವೆ ಆದ ಮೇಲೆ ತನ್ನ ಸಂಗಾತಿಯನ್ನು ನಂಬಿಸಿ ಮೋಸ ಮಾಡುವುದು ದಿನೇ ದಿನೇ ಹೆಚ್ಚಾಗುತ್ತಿದೆ. ಸದ್ಯ ಮದುವೆ ಎಂಬ ಬಂಧನದ ಮೌಲ್ಯಗಳು ಕಡಿಮೆಯಾಗುತ್ತಿದೆ ಎಂದು ಹೇಳಿದರು ತಪ್ಪಾಗಲಾರದು. ಯಾಕೆಂದರೆ ಇಲ್ಲೊಬ್ಬಳು ಒಬ್ಬನೊಂದಿದೆ ಸಪ್ತಪದಿ ತುಳಿದು ಜೀವನ ಪ್ರಾರಂಬಿಸುವ ಮುನ್ನವೇ ಇನ್ನೊಬ್ಬನ ಜೊತೆ ಓಡಿ ಹೋಗಿದ್ದಾಳೆ.

ಹೌದು ವಧು ವರನಿಗೆ ಮತ್ತು ಬರುವ ಔಷಧಿ ನೀಡಿ ತನ್ನ ಲವರ್​ ಜೊತೆ ಓಡಿ ಹೋದ ಘಟನೆ ಉತ್ತರ ಪ್ರದೇಶದ ಅಲಿಗಢದಲ್ಲಿ ನಡೆದಿದೆ.

ಸತ್ಯಂ ಎಂದು ಗುರುತಿಸಲಾದ ವರನನ್ನು ಸಿವಿಲ್ ಲೈನ್ ಪೊಲೀಸ್ ಠಾಣೆ ವ್ಯಾಪ್ತಿಯ ಅಲಿಗಢದ ಗುರುದ್ವಾರ ರಸ್ತೆಯ ನಿವಾಸಿಯು ಆಗ್ರಾ ಕ್ಯಾಂಟ್ ನಿವಾಸಿ ದೀಪಾಸಿ ಅವರನ್ನು ವಿವಾಹವಾಗಿದ್ದರು.

ಸತ್ಯಂ ಅವರು ಡಿಸೆಂಬರ್ 8, 2022 ರಂದು ಮಧುಚಂದ್ರಕ್ಕಾಗಿ ಉತ್ತರಾಖಂಡಕ್ಕೆ ತಮ್ಮ ಹೆಂಡತಿಯೊಂದಿಗೆ ತೆರಳಿದ್ದರು. ನವವಿವಾಹಿತ ದಂಪತಿಗಳು ಡಿಸೆಂಬರ್ 9 ರಂದು ಹೃಷಿಕೇಶಕ್ಕೆ ಹೋಗಿ ಬಸ್ ನಿಲ್ದಾಣದ ಬಳಿಯ ಖಾಸಗಿ ಹೋಟೆಲ್ನಲ್ಲಿ ರೂಮ್ ಬುಕ್ ಮಾಡಿದ್ದರು. ಈ ಮಧ್ಯೆ ಹೋಟೆಲ್ ನಲ್ಲಿ ಚಹಕುಡಿದ ಬಳಿಕ ಸತ್ಯಂ ಪ್ರಜ್ಞೆ ಕಳೆದುಕೊಂಡ ಎನ್ನಲಾಗಿದೆ. ಈ ನಡುವೆ , ದೀಪಾಸಿ ತನ್ನ ಸಾಮಾನು ಸರಂಜಾಮುಗಳನ್ನು ಪ್ಯಾಕ್ ಮಾಡಿ ತನ್ನ ಬ್ಯಾಗ್ ಮತ್ತು ಹಣದೊಂದಿಗೆ ಹೋಟೆಲ್ ನಿಂದ ಗೆಳೆಯನ ಜೊತೆಗೆ ಓಡಿ ಹೋಗಿದ್ದಾಳೆ ಎನ್ನಲಾಗಿದೆ.

ಮಧ್ಯರಾತ್ರಿ ಸುಮಾರು 2 ಗಂಟೆ ಸುಮಾರಿಗೆ ಸತ್ಯಂಗೆ ಪ್ರಜ್ಞೆ ಮರಳಿದಾಗ, ಹೋಟೆಲ್ ಸಿಬ್ಬಂದಿಯಿಂದ ತನ್ನ ಹೆಂಡತಿಯ ಬಗ್ಗೆ ವಿಚಾರಿಸಿದಾಗ, ಅವಳು ಸಂಜೆ 7 ಗಂಟೆ ಸುಮಾರಿಗೆ ಹೋಟೆಲ್ನಿಂದ ಹೊರಗೆ ಹೋಗಿದ್ದಾಳೆ ಎನ್ನುವುದನ್ನು ತಿಳಿಸಿದ್ದಾರೆ .

ತಕ್ಷಣವೇ, ಆತ ಪೊಲೀಸರಿಗೆ ದೂರು ನೀಡಿದ್ದು ತನಿಖೆಯ ನಂತರ, ದೀಪಾಸಿ ಬಸ್ಸಿನಲ್ಲಿ ದೆಹಲಿಗೆ ತೆರಳಿದ್ದಳೆ ಎಂದು ತಿಳಿದುಬಂದಿದೆ. ಸತ್ಯಂ ಈ ಘಟನೆಯ ಬಗ್ಗೆ ಅಲಿಗಢದಲ್ಲಿರುವ ತನ್ನ ಕುಟುಂಬಕ್ಕೆ ಮತ್ತು ಆಗ್ರಾದಲ್ಲಿರುವ ತನ್ನ ಅತ್ತೆ-ಮಾವಂದಿರಿಗೆ ಮಾಹಿತಿ ನೀಡಿದ್ದಾರೆ. ಈ ನಡುವೆ ಆಕೆಯ ಕುಟುಂಬವು ಗ್ಯಾಂಗ್​ಸ್ಟರ್​ ಅನ್ಶು ಯಾದವ್ ಎಂಬ ಮತ್ತೊಬ್ಬ ಯುವಕನ ಜೊತೆ ದಿಪಾಸಿಗೆ ಸಂಬಂಧ ಇದೆ. ಆಕೆಯನ್ನು ಮರೆತುಬಿಡುವಂತೆ ಸತ್ಯಂಗೆ ಹೇಳಿದ್ದಾರೆ.

ಸದ್ಯ ಯಾರು ಯಾವಾಗ ಯಾರನ್ನು ಮೋಸ ಮಾಡುತ್ತಾರೆ, ಅಥವಾ ಮೋಸ ಹೋಗುತ್ತಾರೆ ಅನ್ನೋದು ಊಹಿಸಲು ಸಾಧ್ಯವಿಲ್ಲ. ಕೆಲವೊಮ್ಮೆ ಸಮಾಜದಲ್ಲಿ ಕುರುಡರಂತೆ, ಕಿವುಡರಂತೆ, ಮೂಗರಂತೆ ವರ್ತಿಸುವುದೇ ಸೂಕ್ತ. ಯಾಕೆಂದರೆ ಆಗಿರುವ ಆರ್ಥಿಕ ನಷ್ಟ ವನ್ನು ಹಿಂಪಡಿಸಬಹುದು ಹೊರತು ಆಗಿರುವ ಮಾನ ನಷ್ಟ, ಅವಮಾನ, ಮೋಸವನ್ನಲ್ಲ.