Home Food Health Tips | ಚಳಿಗಾಲಕ್ಕೆ ಬೆಚ್ಚಗೆ ಇರಲು ಪದೇ-ಪದೇ ಟೀ, ಕಾಫೀ ಕುಡಿಯುತ್ತಿದ್ದೀರಾ? ; ಹಾಗಿದ್ರೆ...

Health Tips | ಚಳಿಗಾಲಕ್ಕೆ ಬೆಚ್ಚಗೆ ಇರಲು ಪದೇ-ಪದೇ ಟೀ, ಕಾಫೀ ಕುಡಿಯುತ್ತಿದ್ದೀರಾ? ; ಹಾಗಿದ್ರೆ ಓದಲೇ ಬೇಕಾಗಿದೆ ಈ ಮಾಹಿತಿ!

Hindu neighbor gifts plot of land

Hindu neighbour gifts land to Muslim journalist

ದೇಹದ ದಣಿವನ್ನು ನಿವಾರಿಸಲು ಆಗಾಗ್ಗೆ ಅನೇಕರು ಟೀ, ಕಾಫೀ ಕುಡಿಯುತ್ತಾರೆ. ಹೊಸ ಉಲ್ಲಾಸ ನೀಡುವ ಜೊತೆಗೆ ತಲೆನೋವು ಕಡಿಮೆ ಮಾಡುತ್ತದೆ. ಅದೆಷ್ಟೋ ಜನರಿಗೆ ಒಂದು ಸಿಪ್ ಟೀ ಅಥವಾ ಕಾಫೀ ಕುಡಿಯೋದ್ರಿಂದ ಅವರ ಮೂಡ್ ಸ್ವಿಗ್ ಆಗುತ್ತೆ. ಬೆಳಗ್ಗೆ ಎದ್ದಾಗಿಂದ ಆರಂಭವಾಗಿ ದಿನ ಅಂತ್ಯವನ್ನು ಟೀ ಕುಡಿಯುವುದರ ಮುಕೇನ ಕೊನೆಗೊಳಿಸುತ್ತಾರೆ.

ಅದರಲ್ಲೂ ಈ ಚಳಿಗಾಲದಲ್ಲಿ ಕೇಳುವುದೇ ಬೇಡ. ತಣ್ಣನೆಯ ಚಳಿಗೆ ಬಿಸಿ ಬಿಸಿ ಟೀ ಕುಡಿದ್ರೆ ಎಷ್ಟು ಖುಷಿ ಆಗುತ್ತೆ ಎಂದು ಹೆಚ್ಚಿನವರು ಟೀ ಕಾಫೀ ಮೊರೆ ಹೋಗುತ್ತಾರೆ. ಆದರೆ ಹೆಚ್ಚು ಚಹಾ ಅಥವಾ ಕಾಫಿ ಕುಡಿಯುವುದು ಆರೋಗ್ಯಕ್ಕೆ ಎಷ್ಟು ಉತ್ತಮ ಎಂಬುದು ನೀವೂ ತಿಳಿಯಲೇ ಬೇಕಾಗಿದೆ.

ಹೌದು. ಚಹಾ ಮತ್ತು ಕಾಫಿಯಲ್ಲಿ ಕೆಫೀನ್ ಇರುವುದರಿಂದ ಇದು ನಿರ್ಜಲೀಕರಣ ಸಮಸ್ಯೆಗೆ ಕಾರಣವಾಗುತ್ತದೆ. ಅಷ್ಟೇ ಅಲ್ಲ ಟೀ ಅಥವಾ ಕಾಫಿ ಕುಡಿಯುವುದರಿಂದ ನಿದ್ರೆಯ ಸಮಸ್ಯೆ ಉಂಟಾಗುತ್ತದೆ. ಹೀಗಾಗಿ, ನಿಮ್ಮ ಈ ಅಭ್ಯಾಸವನ್ನು ನೀವು ನಿಯಂತ್ರಿಸಬೇಕು. ಆದ್ರೆ ಎಷ್ಟು ಬಾರಿ ಪ್ರಯತ್ನಿಸಿದರೂ ಚಹಾ ಅಥವಾ ಕಾಫಿ ಕುಡಿಯುವ ಅಭ್ಯಾಸವನ್ನು ಬಿಡಲು ಅಸಾಧ್ಯ ಅನ್ನುವವರು ಅದೆಷ್ಟೋ ಮಂದಿ. ಅಂತವರಿಗೆ ಟಿಪ್ಸ್ ಇಲ್ಲಿದೆ ನೋಡಿ..

ದಿನಕ್ಕೆ 4-5 ಕಪ್ ಕಾಫಿಯನ್ನು ಸೇವಿಸಿದರೆ, ಇಂದಿನಿಂದ ಕೇವಲ 3 ಕಪ್ ಚಹಾವನ್ನು ಕುಡಿಯಿರಿ. ಹೀಗೆ ಮಾಡುವುದರಿಂದ ಕ್ರಮೇಣ ಈ ಅಭ್ಯಾಸವನ್ನು ಕಡಿಮೆ ಮಾಡಬಹುದು. ಹಾಗೆಯೇ, ಚಳಿಗಾಲದಲ್ಲಿ ಚಹಾ ಮತ್ತು ಕಾಫಿಯ ಬದಲು ಮನೆಯಲ್ಲಿ ಮಾಡಿದ ಅರಿಶಿನ ಹಾಲನ್ನು ಕುಡಿಯಬಹುದು. ಇವುಗಳಲ್ಲಿ ಹೇರಳವಾಗಿರುವ ಪೋಷಕಾಂಶಗಳು ದೇಹವನ್ನು ಆರೋಗ್ಯಕರವಾಗಿ ಮತ್ತು ಒಳಗಿನಿಂದ ಬೆಚ್ಚಗಿಡಲು ಸಹಾಯ ಮಾಡುತ್ತದೆ. ಇಷ್ಟೇ ಅಲ್ಲ, ಅರಿಶಿನದ ಹಾಲನ್ನು ಕುಡಿಯುವುದರಿಂದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.

ಶುಂಠಿ ಮತ್ತು ನಿಂಬೆ ಚಹಾವನ್ನು ಕುಡಿಯಿರಿ. ಚಳಿಗಾಲದಲ್ಲಿ ಚಹಾ ಅಥವಾ ಕಾಫಿಯ ಹಂಬಲ ಉಂಟಾದಾಗ, ಶುಂಠಿಯನ್ನು ಬಿಸಿ ನೀರಿನಲ್ಲಿ ಹಾಕಿ ಕುದಿಸಿ. ನಂತರ ಅದಕ್ಕೆ ಸ್ವಲ್ಪ ನಿಂಬೆ ರಸ ಮತ್ತು ಜೇನುತುಪ್ಪ ಸೇರಿಸಿ. ಈಗ ಈ ಚಹಾವನ್ನು ಸೇವಿಸಿ. ಇದನ್ನು ಸೇವಿಸುವುದರಿಂದ ನೆಗಡಿ ಮತ್ತು ಕೆಮ್ಮು ನಿವಾರಣೆಯಾಗುತ್ತದೆ ಮತ್ತು ಜೀರ್ಣಕ್ರಿಯೆ ಸಮಸ್ಯೆಗಳು ದೂರವಾಗುತ್ತವೆ. ಆರೋಗ್ಯಕರ ಪಾನಿ ಆಯ್ಕೆಯನ್ನು ಆರಿಸಿ, ಗ್ರೀನ್ ಟೀ, ಲೆಮೊನ್ಗ್ರಾಸ್ ಟೀ ಸೇವಿಸಬಹುದು. ಇವೆಲ್ಲವೂ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ. ಇದರಿಂದ ದೇಹವು ಆರೋಗ್ಯಕರವಾಗಿರುತ್ತದೆ. ಉತ್ತಮವಾದ ಆರೋಗ್ಯದ ಜೊತೆ ಉಲ್ಲಾಸಭರಿತ ಜೀವನ ನಿಮ್ಮದಾಗಿಸಿಕೊಳ್ಳಿ..