ನಿಮ್ಮ ಬಳಿ ಈ ಖಾತೆ ಇದ್ದರೆ, ಹಣ ಇಲ್ಲದಿದ್ದರೂ ರೂ.10,000 ಪಡೆಯಬಹುದು!

ದೇಶದ ಪ್ರತಿ ನಾಗರೀಕನು ಕೂಡ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು ಜೊತೆಗೆ ಸರ್ಕಾರದಿಂದ ಲಭ್ಯವಿರುವ ಸೌಲಭ್ಯಗಳು ನೇರವಾಗಿ ಬ್ಯಾಂಕ್ ಖಾತೆಯ ಮೂಲಕ ಫಲಾನುಭವಿಗಳಿಗೆ ಲಭ್ಯವಾಗಬೇಕು ಎಂಬ ಉದ್ದೇಶದಿಂದ ಮೋದಿ ಸರ್ಕಾರ 2014 ರಲ್ಲಿ ‘ಜನ್ ಧನ್ ಯೋಜನೆ’ಯನ್ನು ಆರಂಭಿಸಿದ್ದು, ದೇಶದಾದ್ಯಂತ ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯಡಿ ಸುಮಾರು 47 ಕೋಟಿ ಜನರು ಖಾತೆಗಳನ್ನು ತೆರೆದು ಯೋಜನೆಯ ಸದುಪಯೋಗ ಪಡಿಸಿಕೊಂಡಿದ್ದಾರೆ.

ಮೋದಿ ಸರಕಾರ ದೇಶದ ಜನತೆಗೆ ನೆರವಾಗುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಪ್ರಧಾನ ಮಂತ್ರಿ ಜನಧನ್ ಯೋಜನೆ ಮೋದಿ ಸರ್ಕಾರ ಪರಿಚಯಿಸಿದ ಯೋಜನೆಗಳಲ್ಲಿ ಒಂದಾಗಿದೆ. ದುರ್ಬಲ ವರ್ಗಕ್ಕೆ ಸೇರಿದ ಜನರು ಮತ್ತು ಕಡಿಮೆ-ಆದಾಯದ ವರ್ಗದ ಜನತೆಗೆ ರಾಷ್ಟ್ರೀಯ ಮಟ್ಟದಲ್ಲಿ ಹಣಕಾಸಿನ ಸೌಲಭ್ಯ ಕಲ್ಪಿಸಿ ಕೊಡುವ ನಿಟ್ಟಿನಲ್ಲಿ ಈ ಯೋಜನೆಯಡಿ ಗರಿಷ್ಠ ಮಟ್ಟದಲ್ಲಿ ಬ್ಯಾಂಕ್‌ ಖಾತೆ ತೆರೆಯುವ ಉದ್ದೇಶವನ್ನು ಹೊಂದಿದೆ.

ಯಾವುದೇ ವಾಣಿಜ್ಯ ಬ್ಯಾಂಕ್ ಶಾಖೆಯಲ್ಲಿ ಜನಧನ ಖಾತೆ ತೆರೆಯಬಹುದಾಗಿದ್ದು, ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯಡಿ, ವ್ಯಕ್ತಿಗಳು ಶೂನ್ಯ ಠೇವಣಿ ಖಾತೆ (ಝೀರೋ ಬ್ಯಾಲೆನ್ಸ್‌ ಅಕೌಂಟ್‌) ತೆರೆಯಬಹುದಾಗಿದ್ದು, ಇದರ ಜೊತೆಗೆ ಖಾತೆದಾರನಿಗೆ ಚೆಕ್‌ಬುಕ್ ಅವಶ್ಯಕತೆ ಇದ್ದಲ್ಲಿ, ಮಿನಿಮಮ್‌ ಬ್ಯಾಲೆನ್ಸ್‌ಗೆ ಸಂಬಂಧ ಪಟ್ಟಂತೆ ಕೆಲ ಷರತ್ತುಗಳನ್ನು ಪೂರ್ಣಗೊಳಿಸಬೇಕು.

ಯಾವುದೇ ವ್ಯಕ್ತಿ ಈ ಯೋಜನೆಯಡಿ ಖಾತೆ ತೆರೆಯಬಹುದು. ಅದರ ಚೆಕ್ ಬುಕ್‌ ಬಳಸಲು ಕನಿಷ್ಠ ಬ್ಯಾಲೆನ್ಸ್ ಅನ್ನು ನಿರ್ವಹಿಸುವುದು ಕಡ್ಡಾಯ. ಆದರೆ, ಖಾತೆ ತೆರೆಯಲು ಯಾವುದೇ ಶುಲ್ಕ ಪಾವತಿ ಮಾಡಬೇಕಾದ ಅವಶ್ಯಕತೆ ಇಲ್ಲ. PMJDY ಮೂಲಕ, ವ್ಯಕ್ತಿಗಳು ಬ್ಯಾಂಕಿಂಗ್, ಉಳಿತಾಯ ಮತ್ತು ಠೇವಣಿ ಖಾತೆ, ಹಣ ರವಾನೆ, ಪಿಂಚಣಿ, ಮತ್ತು ಕ್ರೆಡಿಟ್ ವಿಮೆ ಸೌಲಭ್ಯ ಪಡೆಯಬಹುದು.

ಈ ಯೋಜನೆಯಡಿ ಖಾತೆ ತೆರೆದ ಸಂದರ್ಭ ಎಟಿಎಂ ಕಾರ್ಡ್, ರೂ.2 ಲಕ್ಷ ಅಪಘಾತ ವಿಮೆ, ರೂ.30 ಸಾವಿರ ಜೀವ ವಿಮೆ ಮತ್ತು ಠೇವಣಿ ಮೊತ್ತದ ಬಡ್ಡಿ ದೊರೆಯುತ್ತದೆ. ಇದರ ಮೇಲೆ ನೀವು 10 ಸಾವಿರ ಓವರ್ ಡ್ರಾಫ್ಟ್ ಸೌಲಭ್ಯ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಈ ಖಾತೆಯನ್ನು ಯಾವುದೇ ಬ್ಯಾಂಕಿನಲ್ಲಿ ತೆರೆಯಬಹುದಾಗಿದ್ದು, ಜನ್ ಧನ್ ಖಾತೆಯನ್ನು ತೆರೆಯಲು ನಿಮಗೆ ಆಧಾರ್ ಕಾರ್ಡ್, ಪಾಸ್ಪೋರ್ಟ್, ಡ್ರೈವಿಂಗ್ ಲೈಸೆನ್ಸ್ ಅಗತ್ಯವಿದೆ.

ಆಗಸ್ಟ್ 28 2014 ರಲ್ಲಿ ಜಾರಿಗೆ ಬಂದ ಈ ಯೋಜನೆಯ ಫಲಾನುಭವಿಗಳು ಈ ಯೋಜನೆಯಡಿ ಅಂಚೆ ಕಚೇರಿಗಳು, ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್ಗಳಲ್ಲಿ ಶೂನ್ಯ ಬ್ಯಾಲೆನ್ಸ್ ಖಾತೆಗಳನ್ನ ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಇದರ ಜೊತೆಗೆ, ಜನ್ ಧನ್ ಯೋಜನೆ ಖಾತೆಗಳನ್ನು ಸರ್ಕಾರದ ಯೋಜನೆಗಳಿಗೆ ಲಿಂಕ್ ಮಾಡಲಾಗುತ್ತಿದೆ ಹಾಗೂ ಫಲಾನುಭವಿಗಳಿಗೆ ನೇರವಾಗಿ ಹಣ ಜಮಾ ಮಾಡಲಾಗುತ್ತಿದೆ.

ನೀವು ಮೂಲ ದಾಖಲೆಗಳು ಇಲ್ಲದೆ ಇದ್ದಾಗ ಕೂಡ ನೀವು ಸಣ್ಣ ಖಾತೆಯನ್ನ ಸಹ ತೆರೆಯಬಹುದಾಗಿದೆ. ಇದರಲ್ಲಿ ನೀವು ಬ್ಯಾಂಕ್ ಅಧಿಕಾರಿಯ ಎದುರು ಫಾರ್ಮ್ ಅನ್ನು ಭರ್ತಿ ಮಾಡಿ ಸಹಿ ಮಾಡಬೇಕಾಗುತ್ತದೆ. ಜನ್ ಧನ್ ಖಾತೆಯನ್ನು ತೆರೆಯಲು ನೀವು ಯಾವುದೇ ಶುಲ್ಕ ಅಥವಾ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ. 10 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಈ ಖಾತೆಯನ್ನು ತೆರೆಯಬಹುದು.

ಓವರ್ ಡ್ರಾಫ್ಟ್ ಸೌಲಭ್ಯ ಮೊದಲು 5000 ರೂ.ಗಳಾಗಿತ್ತು. ಕೇಂದ್ರ ಸರಕಾರ 10,000 ರೂ. ಭಾರತದಲ್ಲಿ ವಾಸಿಸುವ ಯಾವುದೇ ನಾಗರಿಕರು ಈ ಖಾತೆಯನ್ನ ತೆರೆಯಬಹುದು. ಈ ಖಾತೆಯಲ್ಲಿ ಓವರ್ ಡ್ರಾಫ್ಟ್ ಸೌಲಭ್ಯಕ್ಕಾಗಿ ಗರಿಷ್ಠ ವಯಸ್ಸಿನ ಮಿತಿ 65 ವರ್ಷಗಳಾಗಿವೆ.

ಈ ಖಾತೆಯು ಹಲವು ಉಪಯೋಗಗಳನ್ನು ಹೊಂದಿದ್ದು, ಖಾತೆಯಲ್ಲಿ ಬ್ಯಾಲೆನ್ಸ್ ಇಲ್ಲದಿದ್ದರೂ ನೀವು 10,000 ರೂಪಾಯಿವರೆಗೆ ಹಿಂಪಡೆಯಬಹುದು. ಇದಲ್ಲದೇ ರುಪೇ ಡೆಬಿಟ್ ಕಾರ್ಡ್ ಸೌಲಭ್ಯವನ್ನ ಒದಗಿಸಲಾಗಿದೆ. ಈ ಡೆಬಿಟ್ ಕಾರ್ಡ್ ಮೂಲಕ ನೀವು ಖಾತೆಯಿಂದ ಹಣವನ್ನು ಹಿಂಪಡೆಯಬಹುದಾಗಿದೆ. ಖರೀದಿಯನ್ನು ಕೂಡ ನಿಭಾಯಿಸಬಹುದಾಗಿದ್ದು, 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ಜನ್ ಧನ್ ಯೋಜನೆ ಖಾತೆಯನ್ನು ತೆರೆಯಬಹುದಾಗಿದೆ.

Leave A Reply

Your email address will not be published.