Home Latest Health Updates Kannada ನಿಮಗಿದು ಗೊತ್ತೇ? ಮುಟ್ಟಾದಾಗ ದೇವಸ್ಥಾನಕ್ಕೆ ಯಾಕೆ ಹೋಗಬಾರದೆಂದು?

ನಿಮಗಿದು ಗೊತ್ತೇ? ಮುಟ್ಟಾದಾಗ ದೇವಸ್ಥಾನಕ್ಕೆ ಯಾಕೆ ಹೋಗಬಾರದೆಂದು?

Hindu neighbor gifts plot of land

Hindu neighbour gifts land to Muslim journalist

ಭಾರತದಲ್ಲಿ ಪ್ರತಿಯೊಂದು ಆಚಾರ ವಿಚಾರಗಳಿಗೂ ರೂಢಿ ಸಂಪ್ರದಾಯಗಳ ಚೌಕಟ್ಟುಗಳಿವೆ. ಅದರಲ್ಲೂ ಹೆಣ್ಣು ಮಕ್ಕಳು ಮುಟ್ಟು ಆದಾಗ ಅವರನ್ನು ಬೇರೆ ರೀತಿಯಲ್ಲೇ ನಡೆಸಿಕೊಳ್ಳಲಾಗುತ್ತದೆ. ಹೌದು ಮುಟ್ಟಿನ ಟೈಮಲ್ಲಿ ದೇವಸ್ಥಾನಕ್ಕೆ ಎಂಬ ಶಾಸ್ತ್ರ ನಮಗೆ ತಿಳಿದಿರುವ ವಿಚಾರ.

ಸದ್ಯ ಹಿಂದಿನ ಕಾಲದ ಕೆಲ ಪದ್ಧತಿಗಳು ಬರೀ ಧಾರ್ಮಿಕವಾಗಿರಲಿಲ್ಲ, ಅದಕ್ಕೆ ವೈಜ್ಞಾನಿಕ ಕಾರಣಗಳಿರುತಿದ್ದವು. ಕಾಲ ಸರಿದಂತೆ ಅವರ ಕಾರಣಗಳನ್ನು ತಿರುಚಲಾಯ್ತು. ಹಾಗೆಯೇ ಮುಟ್ಟು ಆದಾಗ ಅನುಸರಿಸುವ ಕ್ರಮ ಕೂಡ ಒಂದಾಗಿದೆ.

ಹೆಣ್ಣು ಮಕ್ಕಳಲ್ಲಿ ಆಗುವ ನೈಸರ್ಗಿಕ ಕ್ರಿಯೆ ಈ ಮುಟ್ಟು. ಈ ಮುಟ್ಟಿನ ಬಗ್ಗೆ ಹಿಂದಿನ ಕಾಲದಿಂದಲೂ ಅನೇಕ ನಂಬಿಕೆ, ಪದ್ಧತಿಗಳು ಜಾರಿಯಲ್ಲಿವೆ. ಮುಟ್ಟಿನ ಸಮಯದಲ್ಲಿ ಮಹಿಳೆಯರು ದೇವಸ್ಥಾನಕ್ಕೆ ಹೋಗಬಾರದು, ಪೂಜೆಗಳಲ್ಲಿ ಪಾಲ್ಗೊಳ್ಳಬಾರದು ಎನ್ನುವ ಪದ್ಧತಿ ಹಿಂದೂ ಧರ್ಮದಲ್ಲಿದೆ.

ಆಧುನಿಕ ಸಮಯದಲ್ಲೂ ಹೆಚ್ಚಿನ ಕಡೆ ಪಿರಿಯಡ್ಸ್ ಆದ ಮಹಿಳೆಯನ್ನು ಅಶುದ್ಧಳಂತೆ ನೋಡುತ್ತಾರೆ. ಆಕೆಗೆ ಯಾವುದೇ ಸೌಲಭ್ಯ ನೀಡಲಾಗ್ತಿಲ್ಲ. ದೇವಸ್ಥಾನ, ಪೂಜೆ, ನದಿಯಲ್ಲಿ ಸ್ನಾನ ಎಲ್ಲವೂ ನಿಷಿದ್ಧವಾಗಿದೆ.

ಹಾಗಿದ್ದರೆ ಮುಟ್ಟಾದ ಮಹಿಳೆ ದೇವಸ್ಥಾನಕ್ಕೆ ಯಾಕೆ ಹೋಗಬಾರದು ಹಾಗೆ ಪೂಜೆಯನ್ನು ಏಕೆ ಮಾಡಬಾರದು ಎಂಬುದಕ್ಕೆ ವೈಜ್ಞಾನಿಕ ಕಾರಣವೇನು ಇಲ್ಲಿ ತಿಳಿಸಲಾಗಿದೆ.

ಮುಟ್ಟಿನ ಸಮಯದಲ್ಲಿ ದೇವಸ್ಥಾನ ಮತ್ತು ಪೂಜಾ ಸ್ಥಳಗಳಿಗೆ ಹೋಗುವುದನ್ನು ಹಿಂದೂ ಧರ್ಮ ನಿಷೇಧಿಸಲಾಗಿದೆ. ಅದೇ ರೀತಿ ಅಡುಗೆ ಮನೆಗೆ ಹೋಗಬಾರದು, ನದಿಯಲ್ಲಿ ಸ್ನಾನ ಮಾಡಬಾರದು ಎಂಬುದನ್ನು ಕೂಡ ಹೇಳಲಾಗುತ್ತದೆ. ಇದಕ್ಕೆ ಧಾರ್ಮಿಕ ಕಾರಣಗಳು ಹಲವಾರು ಇರಬಹುದು ಆದರೆ ಇದಕ್ಕೆ ವೈಜ್ಞಾನಿಕ ಕಾರಣವೇನು ಇಲ್ಲಿ ನೋಡೋಣ.

ದೇವಸ್ಥಾನಕ್ಕೆ ಶುದ್ಧವಾಗಿ ಹೋಗಬೇಕು ಎನ್ನುವ ನಂಬಿಕೆ ನಮ್ಮಲ್ಲಿದೆ. ಸ್ನಾನ ಮಾಡಿ, ಶುಭ್ರ ಬಟ್ಟೆ ಧರಿಸಿ ಹೋಗುವಂತೆ ಸಲಹೆ ನೀಡಲಾಗುತ್ತದೆ. ಆದ್ರೆ ಹಿಂದಿನ ಕಾಲದಲ್ಲಿ ಮಹಿಳೆಯರಿಗೆ ಸರಿಯಾದ ವ್ಯವಸ್ಥೆ ಇರಲಿಲ್ಲ. ಅವರು ಮುಟ್ಟಿನ ಸಮಯದಲ್ಲಿ ಸ್ನಾನ ಕೂಡ ಮಾಡ್ತಿರಲಿಲ್ಲ. ಹಾಗಾಗಿ ದೇವಸ್ಥಾನಕ್ಕೆ ಬರದಂತೆ ಸಲಹೆ ನೀಡಲಾಗುತ್ತಿತ್ತು.

ಮುಖ್ಯವಾಗಿ ಹಾರ್ಮೋನ್ ಬದಲಾವಣೆ ಆಗುವುದು. ಮುಟ್ಟಿನ ಸಮಯದಲ್ಲಿ ಮಹಿಳೆಯ ದೇಹದಲ್ಲಿ ಅನೇಕ ಹಾರ್ಮೋನುಗಳು ಬದಲಾಗುತ್ತಿರುತ್ತವೆ. ಇದರಿಂದಾಗಿ ಹೆಣ್ಣು ಸರಿಯಾದ ಮನ ಸ್ಥಿತಿಯಲ್ಲಿ ಇರುವುದಿಲ್ಲ. ತೀರಾ ಕಿರಿಕಿರಿ ಅನುಭವಿಸುತ್ತಿರುತ್ತಾಳೆ . ಆಕೆಯ ಮನಸ್ಸು ನಕಾರಾತ್ಮಕತೆಯಿಂದ ಕೂಡಿರುತ್ತದೆ. ಇನ್ನು ನದಿಯಲ್ಲಿ ಸ್ನಾನ ಮಾಡುವಾಗ ಆಕೆ ಅಪಾಯಕ್ಕೆ ಗುರಿಯಾಗುವ ಸಾಧ್ಯತೆಯಿದೆ. ಇನ್ನು ಮನಸ್ಸು ಸಾಮಾನ್ಯ ದಿನಕ್ಕಿಂತ ಸ್ವಲ್ಪ ಬದಲಾಗಿರುವ ಕಾರಣ ಅಡುಗೆ ಮನೆಯಲ್ಲಿ ಯಡವಟ್ಟಾಗು ಸಾಧ್ಯತೆಯಿರುತ್ತದೆ. ಹಿಂದೆ ಹತ್ತಾರು ಜನರಿಗೆ ಅಡುಗೆ ಮಾಡಬೇಕಿತ್ತು . ಪಿರಿಯಡ್ಸ್ ಸಮಯದಲ್ಲಿ ನಿಂತು ಅಡುಗೆ ಮಾಡುವುದು ಕಷ್ಟ ವಾದ ಕಾರಣ ಅವರಿಗೆ ವಿಶ್ರಾಂತಿ ಸಿಗಲಿ ಎನ್ನುವ ಕಾರಣಕ್ಕೆ ಅಡುಗೆ ಮನೆಗೆ ಬರದಂತೆ ಹೇಳುತ್ತಿದ್ದರು . ಇನ್ನು ದೇವಸ್ಥಾನ ಎನ್ನುವುದು ಸಕಾರಾತ್ಮಕತೆ ತುಂಬಿರುವ ಸ್ಥಳ. ದೇವಸ್ಥಾನಕ್ಕೆ ಹೋದಾಗ ಮನಸ್ಸು ಧನಾತ್ಮಕತೆಯಿಂದ ಕೂಡಿರಬೇಕು. ಆದ್ರೆ ದೇವಸ್ಥಾನಕ್ಕೆ ಹೋದಾಗ ಕಿರಿಕಿರಿ ಅನುಭವಿಸಿದ್ರೆ ನೆಮ್ಮದಿ ಸಿಗೋದಿಲ್ಲ. ದೇವಸ್ಥಾನಕ್ಕೆ ಹೋಗಿಯೂ ಪ್ರಯೋಜನವಿಲ್ಲ ಎನ್ನುವ ಕಾರಣಕ್ಕೆ ದೇವಸ್ಥಾನ ಪ್ರವೇಶವನ್ನು ನಿಷೇಧಿಸಲಾಗಿತ್ತು.

ಇಷ್ಟೇ ಅಲ್ಲ ಹಿಂದಿನ ಕಾಲದಲ್ಲಿ ಯಾವುದೇ ದೇವರ ಪೂಜೆ ಮಾಡುವಾಗ ಮಂತ್ರೋಚ್ಛಾರಕ್ಕೆ ಮಹತ್ವವಿತ್ತು. ಮಂತ್ರವನ್ನು ಉಚ್ಚರಿಸದೆ ಪೂಜೆ ಮಾಡ್ತಿರಲಿಲ್ಲ. ಮಂತ್ರವನ್ನು ಶ್ರದ್ಧೆಯಿಂದ ಹೇಳಬೇಕು. ಉಚ್ಚಾರದಲ್ಲಿ ತಪ್ಪಾಗಬಾರದು. ಆದ್ರೆ ಮುಟ್ಟಿನ ಸಮಯದಲ್ಲಿ ಮಹಿಳೆ ನೋವು ಹಾಗೂ ದಣಿವನ್ನು ಅನುಭವಿಸುತ್ತಾಳೆ. ಈ ಸಮಯದಲ್ಲಿ ತುಂಬಾ ಸಮಯ ಒಂದೇ ಕಡೆ ಕುಳಿತು ಪೂಜೆ ಮಾಡಲು, ಮಂತ್ರವನ್ನು ಉಚ್ಛರಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿಯೇ ಪೂಜೆ ಮಾಡುವುದನ್ನು ನಿಷೇಧಿಸಲಾಗಿತ್ತು.

ಈ ಎಲ್ಲಾ ಕಾರಣದಿಂದ ಮುಟ್ಟು ಆದ ಮಹಿಳೆಯರನ್ನು ವೈಜ್ಞಾನಿಕ ಕಾರಣ ಪ್ರಕಾರ ಈ ರೀತಿ ನಡೆಸಲಾಗುತ್ತಿತ್ತು. ಈಗಲೂ ಸಹ ಕೆಲವು ಕಡೆ ಮಹಿಳೆಯರನ್ನು ಈ ರೀತಿಯೇ ನಡೆಸಲಾಗುತ್ತಿದೆ.