Home Entertainment Kantara : ಕಾಂತಾರ ಸಿನಿಮಾ 100 ದಿನದತ್ತ ದಾಪುಗಾಲು | ಏನು ವಿಶೇಷ ಇರಲಿದೆ ?...

Kantara : ಕಾಂತಾರ ಸಿನಿಮಾ 100 ದಿನದತ್ತ ದಾಪುಗಾಲು | ಏನು ವಿಶೇಷ ಇರಲಿದೆ ? ಡಿಟೇಲ್ಸ್‌ ಇಲ್ಲಿದೆ

Hindu neighbor gifts plot of land

Hindu neighbour gifts land to Muslim journalist

ವಿಶ್ವಾದ್ಯಂತ ಸಂಚಲನ ಮೂಡಿಸಿ ಕರಾವಳಿಯ ಕಲೆಯನ್ನು ಬಿಂಬಿಸಿ ತುಳುನಾಡಿನ ಸಂಸ್ಕೃತಿಯ ವೈಭವವನ್ನು ಜಗತ್ತಿಗೆ ಸಾರಿದ ಖ್ಯಾತಿ ಕಾಂತಾರ ಸಿನಿಮಾಗೆ ದಕ್ಕಲೆಬೇಕು. ಕಾಂತಾರ ಸಿನಿಮಾ ನೋಡಿ ಸ್ಟಾರ್ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದಲ್ಲದೆ, ಬಾಕ್ಸ್ ಆಫೀಸ್ ನಲ್ಲಿಯೂ ದೊಡ್ಡ ಮಟ್ಟದ ಕಮಾಯಿ ಮಾಡಿ ಹಿಟ್ ಸಿನಿಮಾಗಳ ಸಾಲಿನಲ್ಲಿ ಇತಿಹಾಸ ಸೃಷ್ಟಿಸಿದೆ. ಇಷ್ಟೇ ಅಲ್ಲದೆ ಈ ಸಿನಿಮಾದ ಯಶಸ್ಸು ರಿಷಬ್ ಶೆಟ್ಟಿಗೂ ನ್ಯಾಷನಲ್ ಸ್ಟಾರ್ ಪಟ್ಟ ತಂದು ಕೊಟ್ಟಿದ್ದಂತು ಸುಳ್ಳಲ್ಲ.

ಕಾಂತಾರ (Kantara) ಸಿನಿಮಾ ರಿಲೀಸ್ ಆಗಿ ಇಷ್ಟು ದಿನವಾದರೂ ಸಿನಿಮಾದ ಅಬ್ಬರ ಜೋರಾಗಿಯೇ ನಡೆಯುತ್ತಿದೆ. ಅಷ್ಟೇ ಅಲ್ಲದೇ, ಕನ್ನಡ ಸಿನಿಮಾರಂಗವನ್ನು (Kannada cinema) ಇಡೀ ಭಾರತೀಯ ಚಿತ್ರರಂಗವೇ (Indian film industry) ತಿರುಗಿ ನೋಡುವಂತೆ ಮಾಡಿದ ಗರಿಮೆ ಸಿನಿಮಾ ಕಾಂತಾರದ್ದು ಎಂದರೆ ತಪ್ಪಾಗದು. ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶಿಸಿರುವ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದೆ.

ರಿಷಬ್ ಶೆಟ್ಟರ ಕಾಂತಾರ ರಿಲೀಸ್ ಆಗಿ ಈಗ ಎಷ್ಟು ದಿನ ಆಗಿದೆ ಎಂಬ ಬಗ್ಗೆ ಹೆಚ್ಚಿನವರಲ್ಲಿ ಕುತೂಹಲ ಸೃಷ್ಟಿಯಾಗಿದ್ದು, ರಾಜ್ಯದ ಬಹುತೇಕ ಊರುಗಳಲ್ಲಿ ಕಾಂತಾರ ಸಿನಿಮಾದ ಆರ್ಭಟ ಇನ್ನೂ ಕಡಿಮೆಯಿಲ್ಲ. ಕನ್ನಡದ ಕಾಂತಾರ ನವೆಂಬರ್-18 ರಂದು 300 ಥಿಯೇಟರ್​ ನಲ್ಲಿ 50 ದಿನ ಪೂರ್ತಿ ಮಾಡಿತ್ತು. ಹೀಗೆ ನವೆಂಬರ್ ತಿಂಗಳಲ್ಲಿಯೇ ಹಾಫ್ ಸೆಂಚ್ಯೂರಿ ಹೊಡೆದ ಕಾಂತಾರ ಕನ್ನಡದ ಅಲ್ಲದೇ ತೆಲುಗು-ತಮಿಳು ಭಾಷೆಯಲ್ಲೂ ದಾಖಲೆಯ ಪ್ರದರ್ಶನ ಕಂಡು ಅಲ್ಲಿನ ಬಾಕ್ಸ್ ಆಫೀಸ್ ನಲ್ಲಿ ಕೂಡ ಗೆಲುವಿನ ನಗೆ ಬೀರಿದೆ.

ಅಕ್ಟೋಬರ್-15 ರಂದು ತಮಿಳು ಮತ್ತು ತೆಲುಗು ಭಾಷೆಯ ಕಾಂತಾರ ರಿಲೀಸ್ ಆಗಿದ್ದು, ಡಿಸೆಂಬರ್-2 ರಂದು ತುಳು ಭಾಷೆಯಲ್ಲೂ ಕಾಂತಾರ ಬಿಡುಗಡೆಯಾಗಿತ್ತು. ಸೆಪ್ಟೆಂಬರ್-30 ರ ಲೆಕ್ಕವನ್ನು ನೋಡಿದರೆ ಇಂದಿಗೆ ಸಿನಿಮಾ ಬಿಡುಗಡೆಯಾಗಿ ಅಂದಾಜಿನಲ್ಲಿ 95 ದಿನಗಳು ಕಳೆಯುತ್ತಿದೆ. ಇನ್ನೇನು ಕೆಲವು ದಿನಗಳು ಉರುಳಿದರೆ 100 ದಿನ ಪೂರೈಸಲಿದೆ.

ಸೆಪ್ಟೆಂಬರ್-30 ರಂದು ರಿಲೀಸ್ ಆಗಿದ್ದ ಕಾಂತಾರ (Rishab Shetty Kantara Movie) ಸಿನಿಮಾ, ಮಣಿರತ್ನಂ ಅವರ ಪೊನ್ನಿಯನ್ ಸೆಲ್ವನ್ ಚಿತ್ರದ ಎದುರೇ ರಿಲೀಸ್ ಆಗಿದ್ದು ದೊಡ್ಡ ಚಿತ್ರದ ಎದುರು (Kantara 100 Days Soon) ರಿಲೀಸ್ ಆಗಿ ಎಲ್ಲ ಚಿತ್ರಮಂದಿರದಲ್ಲಿಯು ಕೂಡ ಅಬ್ಬರಿಸಿ ಮುಂಚೆ ಇದ್ದ ಎಲ್ಲ ದಾಖಲೆಗಳನ್ನು ಪುಡಿ ಪುಡಿ ಮಾಡಿ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ.

ಕಾಂತಾರ ಚಿತ್ರ ತಂಡದ ನಿರೀಕ್ಷಿತ ಎಲ್ಲೆಯ ಮೀರಿ ದೊಡ್ಡ ಮಟ್ಟದಲ್ಲಿ ಹೆಸರು ಪಡೆದು 2022 ರ ಹಿಟ್ ಸಿನಿಮಾ ಆಗಿ ಹೊರ ಹೊಮ್ಮಿದೆ. ಕಾಂತಾರ ಸಿನಿಮಾ ಕಳೆದ ವರ್ಷ ಸೆಪ್ಟೆಂಬರ್-30 ರಂದು ಎಲ್ಲೆಡೆ ರಿಲೀಸ್ ಆದ ಸಿನಿಮಾ ಸುಮಾರು 250 ರಿಂದ 300 ಥಿಯೇಟರ್​ನಲ್ಲಿ ರಿಲೀಸ್ ಆಗಿತ್ತು.

ಆ ಲೆಕ್ಕದ ಅನುಸಾರ ದಿನ ಉರುಳಿದಂತೆ ಚಿತ್ರ ಥಿಯೇಟರ್ ಲೆಕ್ಕ ಹಾಕಲು ಹೊರಟರೆ ದುಪ್ಪಟಾಗಿದ್ದು ಸರಿ ಸುಮಾರು ಒಂದೂವರೆ ತಿಂಗಳು ಎಲ್ಲ ಥಿಯೇಟರ್​ನಲ್ಲೂ ಕಾಂತಾರದ ಹವಾ ಸೃಷ್ಟಿಯಾಗಿತ್ತು. ಆದರೂ ಕೂಡ ಈಗಲೂ ಕೂಡ ಕಾಂತಾರ ಸಿನೆಮಾ ಮತ್ತೊಮ್ಮೆ ನೋಡಬೇಕು ಎನ್ನುವ ಅಭಿಲಾಷೆ ಹೊತ್ತವರು ಹೆಚ್ಚಿನ ಮಂದಿ ಇದ್ದಾರೆ.

ದಾಖಲೆ ಮೇಲೆ ದಾಖಲೆ ಸೃಷ್ಟಿ ಮಾಡಿದ ಗರಿಮೆ ಹೊಂದಿರುವ ಕನ್ನಡದ ಮೊದಲ ಸಿನಿಮಾ ವಿಯಟ್ನಾಂನಲ್ಲಿ ರಿಲೀಸ್ ಆಗಿ ಈ ಮೂಲಕ ಕನ್ನಡದ ಮೊದಲ ಸಿನಿಮಾ ಎಂಬ ಮನ್ನಣೆಯನ್ನು ಕೂಡ ಸಿನಿಮಾ ಬಾಚಿಕೊಂಡಿದೆ.