ಬೆಳ್ಳಾರೆ ಪಟ್ಟಣ ವ್ಯಾಪ್ತಿಯಲ್ಲಿಯೂ ಕರ್ಫ್ಯೂ ಲಾಕ್ ಡೌನ್
ಬೆಳ್ಳಾರೆ ಪಟ್ಟಣ ವ್ಯಾಪ್ತಿಯಲ್ಲಿ ಕೂಡಾ ಲಾಕ್ ಡೌನ್ ಕಟ್ಟುನಿಟ್ಟಿನಲ್ಲಿ ಪಾಲಿಸಲಾಗುತ್ತಿದೆ. ಪೇಟೆಯಲ್ಲಿ ಬಹುತೇಕ ಅತ್ಯಂತ ವಿರಳ ಜನರ ಓಡಾಟ ಇದೆ.
ಬೆಳ್ಳಾರೆಯ ಪಾಲ್ತಾಡಿನಲ್ಲಿ ಪೊಲೀಸರು ಚೆಕ್ ಪೋಸ್ಟ್ ನಲ್ಲಿ ಅಲ್ಲಲ್ಲಿ ತಪಾಸಣೆ ನಡೆಸಿ ವಾಹನಗಳನ್ನು ಮುಂದಕ್ಕೆ ಬಿಡುತ್ತಿದ್ದಾರೆ.
ವಸ್ತುಗಳಾದ ಹಾಲು, ತರಕಾರಿ ಅಂಗಡಿಗಳು ತೆರೆದಿವೆ. ಸಣ್ಣ ಪ್ರಮಾಣದ ವ್ಯಾಪಾರ ಮಾತ್ರ ಕಾಣಿಸುತ್ತಿದೆ. ಮದ್ದು ಮಾತ್ರೆಗಳಿಗಾಗಿ ಮೆಡಿಕಲ್ ಶಾಪುಗಳು ತೆರೆದಿವೆ.
ಮಾಂಸದ ಎರ್ರಾಬಿರ್ರಿ ಬೆಲೆ ಏರಿಕೆಯ ನಡುವೆಯೂ, ಮುಂಜಾನೆಯೇ ಎಲ್ಲ ಮಾಂಸದ ಅಂಗಡಿಗಳು ತೆರೆದಿದ್ದು ಭಾನುವಾರದ ನಿಮಿತ್ತ ಮತ್ತು ರಂಝಾನ್ ನ ನಿಮಿತ್ತ ಹೆಚ್ಚು ವ್ಯಾಪಾರದ ನಿರೀಕ್ಷೆಯಲ್ಲಿದ್ದಾರೆ ಅಂಗಡಿಯವರು.